ಮಗನ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ತಾಯಿ ಮಡಿಲಲ್ಲಿ ಪ್ರಾಣಬಿಟ್ಟ ಕಂದ

ಕಳೆದ ನಾಲ್ಕು ವರ್ಷದ ಹಿಂದೆ ಅಪಘಾತವೊಂದರಲ್ಲಿ ಮಗ ಹಾಸಿಗೆ ಹಿಡಿಯುವಂತೆ ಆಯಿತು. ಈ ಆಘಾತದಿಂದ ಕುಟುಂಬ ಇನ್ನಷ್ಟು ಜರ್ಜರಿತಗೊಂಡಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಕ್ಕಳು ಎಂತಹ ಸಂಕಷ್ಟದಲ್ಲಿದ್ದರೂ ಅದನ್ನು ಭರಿಸುವ ಶಕ್ತಿ ತಾಯಿಗೆ ಮಾತ್ರ ಇರುವುದು. ಇದೇ ರೀತಿ ಅತಿ ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದ ತನ್ನ 9 ವರ್ಷದ ಮಗನನ್ನು ಹುಟ್ಟಿದಾಗಿನಿಂದ ಆರೈಕೆ ಮಾಡಿದ್ದ ಪ್ರೀತಿ ಆತನಿಗೆ ದಯಾ ಮರಣ ಕಲ್ಪಿಸುವಂತೆ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ, ವಿಧಿ ನಿಯಮವೇ ಬೇರೆ ಎಂಬಂತೆ ತಾಯಿ ಕೋರ್ಟ್​ ಮೆಟ್ಟಿಲೇರಿ ಬರುತ್ತಿದ್ದಂತೆ ಮಗನನ್ನು ಕಳೆದುಕೊಂಡಿದ್ದಾರೆ. ಮಗನ ನೋವಿಗೆ ದಯಾಮರಣ ಕಲ್ಪಿಸಲು ಮುಂದಾದ ತಾಯಿಯ ಸ್ಥಿತಿ ಕಂಡು ವಿಧಿಯೇ ಇದಕ್ಕೊಂದು ಮುಕ್ತಿ ನೀಡಿರುವ ಘಟನೆ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. 

  ಏನಿದು ಘಟನೆ

  ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಹಳ್ಳಿಯೊಂದರ ನಿವಾಸಿ ಅರುಣಾ ಮಗನಿಗೆ ದಯಾ ಮರಣ ನೀಡುವಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 9 ವರ್ಷದ ಮಗ ಹುಟ್ಟಿನಿಂದಲೇ ವಿಚಿತ್ರ ರಕ್ತ ಕಾಯಿಲೆಗೆ ಒಳಗಾಗಿದ್ದ. ಇದಕ್ಕೆ ಚಿಕಿತ್ಸೆಯನ್ನು ಕೊಡಿಸುತ್ತಿದ್ದ ಕುಟುಂಬಕ್ಕೆ ಕಳೆದ ನಾಲ್ಕು ವರ್ಷಗಳ ಹಿಂದೆ ಮತ್ತೊಂದು ಆಘಾತ ಎದುರಾಗಿತ್ತು.

  ಕಳೆದ ನಾಲ್ಕು ವರ್ಷದ ಹಿಂದೆ ಅಪಘಾತವೊಂದರಲ್ಲಿ ಮಗ ಹಾಸಿಗೆ ಹಿಡಿಯುವಂತೆ ಆಯಿತು. ಈ ಆಘಾತದಿಂದ ಕುಟುಂಬ ಇನ್ನಷ್ಟು ಜರ್ಜರಿತಗೊಂಡಿತು. ಹೇಗಾದರೂ ಮಾಡಿ ಮಗನ ಆರೋಗ್ಯ ಕಾಪಾಡೋಣ ಎಂದು ಮುಂದಾದ ಆಶಾ ದಂಪತಿಗಳು ಹೋರಾಟ ಫಲ ನೀಡಲೇ ಇಲ್ಲ.

  ಇದನ್ನು ಓದಿ: ಸಿದ್ದರಾಮಯ್ಯ ಸೋಲು, ಮೈತ್ರಿ ಸರ್ಕಾರ ಪತನ ಸೇರಿದಂತೆ ಹಲವು ವಿಚಾರಕ್ಕೆ ಶ್ರೀನಿವಾಸ್​ ಮನೆಯಲ್ಲಿ ಮುಹೂರ್ತ ಇಟ್ಟಿದ್ದೇವೆ; ವಿಶ್ವನಾಥ್

  ಮಗನ ಚಿಕಿತ್ಸೆಗಾಗಿ ಅವರು ತಮ್ಮ ಬಳಿ ಇದ್ದ ಬಂಗಾರ, ಆಸ್ತಿ ಎಲ್ಲವನ್ನೂ ಮಾರಾಟ ಮಾಡಿ ದೊಡ್ಡ ದೊಡ್ಡ ವೈದ್ಯರಿಗೆಲ್ಲಾ ತೋರಿಸಿದರೂ ಪ್ರಯೋಜನವಾಗಲಿಲ್ಲ. ಅಷ್ಟೇ ಅಲ್ಲದೇ ಮಗನ ಚಿಕಿತ್ಸೆಗಾಗಿ 4 ಲಕ್ಷ ಹಣವನ್ನು ಸಾಲ ಪಡೆದರು. ಮಗ ಚೇತರಿಕೆ ಕಾಣುವುದಿಲ್ಲ ಎಂಬ ಸತ್ಯ ಅರಿವಾದಾಗ ಆತನ ಚಿಕಿತ್ಸೆ ಭಾರವಾಗಿದೆ. ಈ ವೇಳೆ ಮಗನ ನರಳಾಟ ನೋಡಲಾರದೇ ಆತನಿಗೆ ದಯಾ ಮರಣ ಒದಗಿಸುವಂತೆ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಕಳೆದೆರಡು ದಿನಗಳ ಹಿಂದೆ ಈ ಅರ್ಜಿ ವಿಚಾರಣೆ ಮುಗಿಸಿಕೊಂಡು ಆಟೋದಲ್ಲಿ ಬರುತ್ತಿರುವಾಗ ಮಗು ರಕ್ತದ ವಾಂತಿ ಮಾಡಿ ಜೀವ ಬಿಟ್ಟಿದೆ.
  ದಯಾಮರಣಕ್ಕೆ ಮುಂದಾಗುತ್ತಿದ್ದಂತೆ ಹೆತ್ತವರ ಕಷ್ಟ ಕಂಡು ವಿಧಿಯೇ ಈ ರೀತಿ ಮಗುವನ್ನು ಕರೆದುಕೊಂಡಿತೇ ಎಂಬ ಕಣ್ಣೀರಲ್ಲಿ ದಂಪತಿಗಳಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.)
  Published by:Seema R
  First published: