Two Face Boy: 18ನೇ ಹುಟ್ಟುಹಬ್ಬ ಆಚರಿಸಿಕೊಂಡ 2 ಮುಖದ ಬಾಲಕ!

ಎರಡು ಮುಖದ ಬಾಲಕ

ಎರಡು ಮುಖದ ಬಾಲಕ

ಹುಟ್ಟುವಾಗಲೇ ಎರಡು ಮುಖಗಳನ್ನು ಹೊಂದಿರುವಂತೆ ಅಸಾಮಾನ್ಯ ಕಾಯಿಲೆಯೊಂದಿಗೆ ಜನಿಸಿದ ಹುಡುಗನೊಬ್ಬ, ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ತಾನು ಬದುಕುಳಿಯುವುದಿಲ್ಲ ಎಂಬ ವೈದ್ಯರ ಊಹೆಗಳನ್ನು ತಪ್ಪಾಗಿಸುತ್ತಾ ಈಗ ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ.

 • Trending Desk
 • Last Updated :
 • Karnataka, India
 • Share this:

  ಅನುವಂಶಿಕ ಕಾಯಿಲೆಯು (Genetic Disease) ವಂಶವಾಹಿಗಳು ಅಥವಾ ಕ್ರೋಮೋಸೋಮ್ ಗಳಲ್ಲಿನ ಅಪಸಾಮಾನ್ಯತೆಯಿಂದ ಉಂಟಾಗುವ ಅಸ್ವಸ್ಥತೆಯಾಗಿದ್ದು, ಕೆಲವು ಮಕ್ಕಳು (Children) ಹುಟ್ಟಿನಿಂದಲೇ ಒಂದು ರೀತಿಯ ಶಾರೀರಿಕ ಅಸ್ವಸ್ಥತೆಗೆ ಗುರಿಯಾಗಿರುತ್ತಾರೆ ಎಂದು ಹೇಳಬಹುದು. ಈ ರೀತಿಯ ಅಸ್ವಸ್ಥತೆಗೆ ಗುರಿಯಾದ ಮಕ್ಕಳು ಜಾಸ್ತಿ ವರ್ಷಗಳ ಕಾಲ ಬದುಕಿರುವುದು ತುಂಬಾನೇ ಕಷ್ಟ ಅಂತಲೂ ಹಾಗೂ ಸಾಕಷ್ಟು ವಿಧದ ಔಷಧೋಪಚಾರಗಳನ್ನು ಮಾಡಿದರೂ ಅವರು ದೀರ್ಘ ಕಾಲ ಬದುಕುಳಿಯುವುದು ಕಷ್ಟ ಎಂತಲೂ ವೈದ್ಯರು ಸಾಮಾನ್ಯವಾಗಿ ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಎಲ್ಲವೂ ಬರೀ ಔಷಧ (Medicine) ಮತ್ತು ಮಾತ್ರೆಗಳ ಮೇಲೆ ಅವಲಂಬಿತವಾಗಿರುವುದಿಲ್ಲ ಅಲ್ಲವೇ? ಕೆಲವೊಮ್ಮೆ ಪವಾಡ ಎಂಬಂತೆ ಇಂತಹ ಅಸ್ವಸ್ಥತೆಗೆ ಗುರಿಯಾದ ಮಕ್ಕಳು ಚೆನ್ನಾಗಿಯೇ ಬದುಕುಳಿಯುತ್ತವೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದೆ ನೋಡಿ.


  18ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪವಾಡ ಹುಡುಗ


  ಹೌದು.. ಹುಟ್ಟುವಾಗಲೇ ಎರಡು ಮುಖಗಳನ್ನು ಹೊಂದಿರುವಂತೆ ಅಸಾಮಾನ್ಯ ಕಾಯಿಲೆಯೊಂದಿಗೆ ಜನಿಸಿದ ಹುಡುಗನೊಬ್ಬ, ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ತಾನು ಬದುಕುಳಿಯುವುದಿಲ್ಲ ಎಂಬ ವೈದ್ಯರ ಊಹೆಗಳನ್ನು ತಪ್ಪಾಗಿಸುತ್ತಾ ಈಗ ತನ್ನ 18ನೇ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಎಲ್ಲಾ ವೈದ್ಯರು ಅಚ್ಚರಿಪಡುವಂತೆ ಮಾಡಿದ್ದಾನೆಂದರೆ ತಪ್ಪಾಗದು.


  ಯುನೈಟೆಡ್ ಸ್ಟೇಟ್ಸ್ ನ ಮಿಸ್ಸೌರಿಯ ಟ್ರೆಸ್ ಜಾನ್ಸನ್ ಎಂಬ ಬಾಲಕ ಹುಟ್ಟುತ್ತಲೇ ಕ್ರಾನಿಯೋಫೇಸಿಯಲ್ ಎಂಬ ವಿಶೇಷ ಸ್ಥಿತಿಯನ್ನು ಹೊಂದಿದ್ದ, ಇದನ್ನು ಡಿಪ್ರೋಸೊಪಸ್ ಎಂದೂ ಸಹ ಕರೆಯಲಾಗುತ್ತದೆ. ಇದು "ಎರಡು ಮುಖಗಳು" ಎಂಬ ಅರ್ಥ ಬರುವ ಗ್ರೀಕ್ ಪದವಾಗಿದೆ.


  ಈ ರೋಗವು ಯಾವ ಜೀನ್ ನಿಂದ ಉಂಟಾಗುತ್ತದೆ?


  ಈ ರೋಗವು 'ಸೋನಿಕ್ ದಿ ಹೆಡ್ಜ್ ಹಾಗ್' (ಎಸ್ಎಚ್ಎಚ್) ಎಂಬ ಜೀನ್ (ವಂಶವಾಹಿ)ನಿಂದ ಉಂಟಾಗುತ್ತದೆ. ಈ ವಂಶವಾಹಿಯ ಹೆಸರು ಅದರ ಡೆಂಟಿಕಲ್ ಗಳಿಂದ ಬಂದಿದೆ ಎಂದು ಮಾಧ್ಯಮದ ವರದಿಯೊಂದು ಹೇಳಿದೆ.


  ಟ್ರೆಸ್, ಎರಡು ಭಿನ್ನವಾಗಿರುವ ಮೂಗಿನ ಹೊಳ್ಳೆಗಳೊಂದಿಗೆ ಜನಿಸಿದ್ದ, ವಿಶಿಷ್ಟವಾದ ಇನ್ನೊಂದು ತಲೆಬುರುಡೆ ಹೊಂದಿರುವ ಟ್ರೆಸ್ ಅರಿವಿನ ಕೊರತೆ ಹಾಗೂ ಸೆಳೆತಗಳುಂಟಾಗುವ ಸ್ಥಿತಿಯಿಂದ ಬಳಲುತ್ತಿದ್ದಾನೆ. ಅವನ ಮುಖದಲ್ಲಿ ಒಂದು ದೊಡ್ಡ ಸೀಳು ಇದೆ, ಅದು ಎಷ್ಟು ದೊಡ್ಡದಿದೆಯೆಂದರೆ ಅದು ಅವನ ಮೂಗಿನ ಮೇಲೆ ಹಾಯ್ದು ಹೋಗಿದೆ. ಇದರಿಂದಾಗಿ ಟ್ರೆಸ್ ಪ್ರತಿದಿನ ಸುಮಾರು 400 ಸೆಳೆತಗಳನ್ನು (ಸೀಸರ್) ಅನುಭವಿಸುತ್ತಿದ್ದ.


  ಇದನ್ನೂ ಓದಿ: ಭಾರತ ಪ್ರವಾಸ ರದ್ದುಗೊಳಿಸಿದ ಬ್ರಿಟಿಷ್ ಹಾಲಿಡೇ ಮೇಕರ್‌ಗಳು, ಕಾರಣ ಇಲ್ಲಿದೆ ನೋಡಿ


  ಆದರೆ ಇಂದು ಟ್ರೆಸ್ ಜಾನ್ಸನ್ ಬಾಲಕನ ಜೀವನವು ಔಷಧೋಪಚಾರದಿಂದ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಅವನ ಪೋಷಕರು ಹೇಳುವಂತೆ, ಕ್ಯಾನ್ನಾಬೀಸ್ ತೈಲ ಬಳಸಲು ಪ್ರಾರಂಭಿಸಿದಾಗಿನಿಂದ ಟ್ರೆಸ್ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು ಹಿಂದೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ಸೆಳೆತದ ಅಟ್ಯಾಕ್ ಗಳು ಈಗ ಕೇವಲ 40 ರಷ್ಟಕ್ಕೆ ಕುಸಿತವಾಗಿದೆಯಂತೆ. ಏಳು ವರ್ಷಗಳ ಹಿಂದೆ ಟ್ರೆಸ್ಸ್ ನಪೋಷಕರು ಈ ನಿರ್ದಿಷ್ಟ ತೈಲವನ್ನು ಬಳಸಲು ನಿರ್ಧರಿಸಿದರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.


  ಮಗು ಜನಿಸಿದ ಮೊದಲ ಕ್ಷಣವನ್ನು ನೆನಪು ಮಾಡಿಕೊಂಡ ತಾಯಿ


  ಟ್ರೆಸ್ ಜಾನ್ಸನ್ ನ 40 ವರ್ಷದ ತಾಯಿ ಬ್ರ್ಯಾಂಡಿ, ತಮ್ಮ ಮಗನು ಜನಿಸಿದ ಸಮಯವನ್ನು ನೆನಪಿಸಿಕೊಳ್ಳುತ್ತ ಹೀಗೆ ನುಡಿಯುತ್ತಾರೆ, "ವೈದ್ಯರು ನನ್ನ ಮಗುವನ್ನು ನನ್ನ ಕೋಣೆಗೆ ಮೊದಲ ಬಾರಿಗೆ ಕರೆತಂದಾಗ, ಅವನು ತನ್ನ ಎಲ್ಲಾ ಅಂಗಾಂಗಗಳಿಗೆ ಮಾನಿಟರ್ ಗಳನ್ನು ಹೊಂದಿದ್ದನು ಮತ್ತು ನಾನು ಅವನ ಮೃದುವಾದ ಕಾಲುಗಳನ್ನು ಮಾತ್ರವೇ ಮುಟ್ಟಲು ಸಾಧ್ಯವಾಯಿತು".


  ಮುಂದುವರೆಯುತ್ತ ಅವರು "ನನ್ನ ಗಂಡ ವೈದ್ಯರೊಂದಿಗೆ ಮಾತುಕತೆ ಆಡಿ ಅವರ ಮನವೊಲಿಸದೆ ಹೋಗಿದ್ದರೆ, ವೈದ್ಯರು ಟ್ರೆಸ್ ನನ್ನು ಹಾಗೆಯೇ ಬಿಟ್ಟು ಬಿಡುತ್ತಿದ್ದರು. ಆದರೆ ಹಾಗಾಗಲಿಲ್ಲ. ಸದ್ಯ ಅವನು ಈಗಲೂ ಜೀವಿತನಾಗಿದ್ದಾನೆಂಬುದೇ ನಮಗೆ ದೊಡ್ಡ ವಿಷಯ" ಎಂದು ಹೇಳುತ್ತಾರೆ.


  ಟ್ರೆಸ್, ಬಾಲ್ಯಾವಸ್ಥೆಯ ಮಾನಸಿಕ ಸ್ಥಿತಿಯನ್ನು ಹೊಂದಿದ್ದರೂ, ನಿತ್ಯ ಜೀವನದ ಪ್ರತಿಯೊಂದು ಅಂಶದಲ್ಲೂ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದಾನೆ ಎಂದು ಹೇಳುವ ಬ್ರ್ಯಾಂಡಿ ಅವರು ಟ್ರೆಸ್ ನ ಕಾಯಿಲೆಯು ತುಂಬಾ ಅಸಾಮಾನ್ಯವಾಗಿರುವುದರಿಂದ, ಅವರ ಕುಟುಂಬವು ವೈದ್ಯಕೀಯ ಸಹಾಯವನ್ನು ಪಡೆಯುವಲ್ಲಿ ತುಂಬಾನೇ ತೊಂದರೆ ಅನುಭವಿಸಿರುವುದಾಗಿಯೂ ತಿಳಿಸುತ್ತಾರೆ.


  ಸಾನಿಕ್ ಹೆಡ್ಜ್ ಹಾಗ್ ಹೆಸರು ಬಂದಿದ್ದು ಹೇಗೆ?


  ಈಗಾಗಲೇ ಟ್ರೆಸ್, ಸಾನಿಕ ಹೆಡ್ಜ್ ಹಾಗ್ ಎಂಬ ಅನುವಂಶೀಯ ಸ್ಥಿತಿಯಿಂದ ಬಳಲುತ್ತಿರುವ ಕುರಿತು ನೀವು ಓದಿದ್ದೀರಿ. ಆದರೆ ಅದಕ್ಕೆ ಈ ಹೆಸರು ಹೇಗೆ ಬಂದಿತು ಎಂಬುದಕ್ಕೆ ಡೈಲಿ ಸ್ಟಾರ್ ವರದಿ ಹೀಗೆ ಹೇಳುತ್ತದೆ. ಟ್ಯಾಬಿನ್ ಲ್ಯಾಬ್ ಎಂಬ ಸಂಸ್ಥೆಯಲ್ಲಿದ್ದ ರಾಬರ್ಟ್ ರಿಡಲ್ ಎಂಬ ವದ್ಯ ಪರಿಣಿತರೊಬ್ಬರು ಇದಕ್ಕೆ ಈ ಹೆಸರನ್ನು ನೀಡಿದ್ದಾರೆ.


  ಅಸಲಿಗೆ ರಿಡಲ್, ಅವರು ತಮ್ಮ ಹೆಂಡತಿ ಸೋನಿಕ್ ದಿ ಹೆಡ್ಜ್ ಹಾಗ್ ಎಂಬ ವೀಡಿಯೋ ಗೇಮಿನ ಜಾಹೀರಾತನ್ನು ಹೊಂದಿರುವ ನಿಯತಕಾಲಿಕವೊಂದನ್ನು ಮನೆಗೆ ತಂದಿದ್ದಾಗ ಅದರಿಂದ ಪ್ರಭಾವಿತರಾಗಿ, ಸೋನಿಕ್ ದಿ ಹೆಡ್ಜ್ ಹಾಗ್ ಜೀನ್ ಎಂದು ಹೆಸರಿಸಿದರೆನ್ನಲಾಗಿದೆ.

  Published by:ಪಾವನ ಎಚ್ ಎಸ್
  First published: