ಹುಡುಗಿಯೊಂದಿಗೆ ಮಾತನಾಡಿದ ಎಂದು 16 ವರ್ಷದ ಬಾಲಕನ ಮೇಲೆ ಹಲ್ಲೆ


Updated:September 7, 2018, 2:52 PM IST
ಹುಡುಗಿಯೊಂದಿಗೆ ಮಾತನಾಡಿದ ಎಂದು 16 ವರ್ಷದ ಬಾಲಕನ ಮೇಲೆ ಹಲ್ಲೆ

Updated: September 7, 2018, 2:52 PM IST
ನ್ಯೂಸ್​ 18 ಕನ್ನಡ

ಖಾನಪುರ​ (ಸೆ.07):  ಹುಡುಗಿಯೊಂದಿಗೆ ಮಾತನಾಡಿದ ಎಂಬ ಒಂದೇ ಕಾರಣಕ್ಕೆ 16 ವರ್ಷದ ಬಾಲಕನನ್ನು ಮನಸೋಇಚ್ಛೆ ಥಳಿಸಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಖಾನಾಪುರದಲ್ಲಿ ನಡೆದಿದೆ.

11 ನೇ ತರಗತಿ ಓದುತ್ತಿದ್ದ ಯುವಕ ತನ್ನ ನೆರೆಮನೆಯ ಬಾಲಕಿಯೊಂದಿಗೆ ಮಾತನಾಡುತ್ತಿದ್ದ. ಆದರೆ ಆಕೆಯೊಂದೊಗೆ ಮಾತನಾಡದಂತೆ ಬಾಲಕಿಯ ಬಾಯ್​ಫ್ರೆಂಡ್​ ಮಾತನಾಡದಂತೆ ತಾಕೀತು ಮಾಡಿದ್ದ. ಆದರೂ ಕೂಡ ಬಾಲಕ ಬಾಲಕಿಯೊಂದಿಗೆ ಮಾತನಾಡಿದ್ದಾನೆ,

ಇದರಿಂದ ಕೋಪಗೊಂಡ ಬಾಲಕಿಯ ಬಾಯ್​ಫ್ರೆಂಡ್​ ಆತನ ಸ್ನೇಹಿತರೊಂದಿಗೆ ಸೇರಿಕೊಂಡು ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆ.

ಬಾಲಕನನ್ನು ತಕ್ಷಣಕ್ಕೆ ಹತ್ತಿರದಲ್ಲಿದ್ದ ಲಾಲ ಲಜಪತ್​ ರಾಯ್​ ಆಸ್ಪತ್ರೆಗೆ ದಾಖಲಿಸಲಾತಾದರೂ, ಆತ ಬದುಕಲಿಲ್ಲ ಎಂದು ಕಿದ್ವಾಯಿ ನಗರ ಪೊಲೀಸ್​ ಅಧಿಕಾರಿ ಅನುರಾಗ್​ ಮಿಶ್ರಾ ತಿಳಿಸಿದ್ದಾರೆ.

ಹಲ್ಲೆ ಮಾಡಿದ ಹುಡಗರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೂಡ ಅವರು ತಿಳಿಸಿದ್ದಾರೆ.
First published:September 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ