Norway: ಅನಾಮಧೇಯ ವ್ಯಕ್ತಿಯಿಂದ ಬಿಲ್ಲು-ಬಾಣ ದಾಳಿ: ಐವರು ಸಾವು, ಇಬ್ಬರ ಸ್ಥಿತಿ ಗಂಭೀರ

Bow and Arrow Attack: ನಗರದ ಹಲವು ಕಡೆ ಇದೇ ವ್ಯಕ್ತಿ ಬಿಲ್ಲು-ಬಾಣಗಳಿಂದ ದಾಳಿ ನಡೆಸಿದ್ದಾನೆ. ರಸ್ತೆಯಲ್ಲಿ ತಮ್ಮ ಪಾಡಿಗೆ ಹೋಗುತ್ತದ್ದವರ ಮೇಲೆ ಅಟ್ಯಾಕ್​(Attack) ಮಾಡಿದ್ದಾನೆ. ಈತನ ದಾಳಿ ಕಂಡು ಅಲ್ಲಿ ನೆರೆದಿದ್ದ ಜನ ಎದ್ದು ಬಿದ್ದು ಓಡಿದ್ದಾರೆ.

(Photo: Google)

(Photo: Google)

 • Share this:
  ನಾರ್ವೆ (Norway) ದೇಶದಲ್ಲಿ ಅನಾಮಧೇಯ ವ್ಯಕ್ತಿ(Unknown Person) ಯೊಬ್ಬ ರಕ್ತದೋಕುಳಿ ಆಡಿದ್ದಾನೆ. ಜನನಿಬಿಡ ಪ್ರದೇಶದಲ್ಲಿ ಏಕಾಏಕಿ ಬಿಲ್ಲು - ಬಾಣ(Bow and Arrows)ಗಳಿಂದ ದಾಳಿ ಮಾಡಿದ್ದಾನೆ. ನೋಡ ನೊಡುತ್ತಿದ್ದಂತೆ ಸ್ಥಳದಲ್ಲೇ ಐವರು ಪ್ರಾಣ ಬಿಟ್ಟಿದ್ದಾರೆ. ನಾರ್ವೆಯ ರಾಜಧಾನಿ ಓಸ್ಲೋ(Oslo)ದ ಕಾಂಗ್ಸ್​ಬರ್ಗ್(Kongsberg) ನಗರದಲ್ಲಿ ಈ ದುರ್ಘಟನೆ ನಡೆದಿದೆ. ಕಾಂಬ್ಸ್​​ಬರ್ಗ್​ ನಗರದ ಹಲವು ಕಡೆ ಇದೇ ವ್ಯಕ್ತಿ ಬಿಲ್ಲು-ಬಾಣಗಳಿಂದ ದಾಳಿ ನಡೆಸಿದ್ದಾನೆ. ರಸ್ತೆಯಲ್ಲಿ ತಮ್ಮ ಪಾಡಿಗೆ ಹೋಗುತ್ತದ್ದವರ ಮೇಲೆ ಅಟ್ಯಾಕ್​(Attack) ಮಾಡಿದ್ದಾನೆ. ಈತನ ದಾಳಿ ಕಂಡು ಅಲ್ಲಿ ನೆರೆದಿದ್ದ ಜನ ಎದ್ದು ಬಿದ್ದು ಓಡಿದ್ದಾರೆ. ಈತನ ಕ್ರೌರ್ಯಕ್ಕೆ ಐವರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಐಸಿಯು(ICU)ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಗಾಯಗೊಂಡವರಲ್ಲಿ ಓರ್ವ ಪೊಲೀಸ್​(Police) ಅಧಿಕಾರಿಯೂ ಇದ್ದಾರೆ. ಈ ಪೊಲೀಸ್​ ಅಧಿಕಾರಿ ಕರ್ತವ್ಯಕ್ಕೆ ರಜೆ ಹಾಕಿ, ಮನೆಗೆ ಬೇಕಿರುವ ಸಾಮಾಗ್ರಿಗಳನ್ನು ಖರೀದಿಸಲು ಅಂಗಡಿಯೊಂದಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ಬಿಲ್ಲು- ಬಾಣಗಳಿಂದ ದಾಳಿ ನಡೆಸಿ ಇವರನ್ನೂ ಗಾಯಗೊಳಿಸಿದ್ದಾನೆ.

  ನಾರ್ವೆಯಲ್ಲಿ ನಡೆದಿದ್ದು ಉಗ್ರ ಕೃತ್ಯ?

  ಈ ಘಟನೆಯಾಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು, ಆತನನ್ನ ಸುತ್ತುವರೆದಿದ್ದಾರೆ. ಬಳಿಕ ಆತನನ್ನ ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಗ್ಗೆ ಕಾಂಗ್ಸ್​​ಬರ್ಗ್​ ಪೊಲೀಸ್​​ ಅಧಿಕಾರಿ ಓವಿಂದ್​ ಆಸ್​ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಇದೊಂದು ಉಗ್ರದಾಳಿಯೂ ಇರಬಹುದು, ಇದನ್ನ ಅಲ್ಲಗಳೆಯುವಂತಿಲ್ಲ. ಆತನನ್ನ ಸಂಪೂರ್ಣ ವಿಚಾರಣೆ ನಡೆಸಿದ ಬಳಿಕ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಆತ ಯಾರು? ಆತನ ಹಿನ್ನೆಲೆ ಏನು? ಎಂಬುದನ್ನು ಮೊದಲು ಪತ್ತೆ ಹಚ್ಚುವ ಕಾರ್ಯಗಳು ಆಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
  ಆಳವಾದ ತನಿಖೆ ನಂತರ ಹೊರಬರಲಿದೆ ಸತ್ಯ

  Read Also: Son Kills Father: ತಾಯಿಯನ್ನ ನಿಂದಿಸಿದ್ದಕ್ಕೆ ಮಗನಿಂದಲೇ ಅಪ್ಪನ ಬರ್ಬರ ಕೊಲೆ

  ಕಾಂಗ್ಸ್​ಬರ್ಗ್​ನ ವಿವಿಧೆಡೆ ಈ ಬಿಲ್ಲು-ಬಾಣಗಳ ದಾಳಿಯಾಗಿತ್ತು. ಎಲ್ಲ ಕಡೆ ದಾಳಿ ಮಾಡಿದವನು ಒಬ್ಬನೇ ಎಂದು ನಮ್ಮ ತನಿಖೆಯಿಂದ ತಿಳಿಯಿತು. ಕೂಡಲೇ ನಮ್ಮ ಪೊಲೀಸರು ಆತನನ್ನ ವಶಕ್ಕೆ ಪಡೆದು ಬಂಧಿಸಿದ್ದಾರೆ. ಯಾಕೆ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ತಿಳಿಯಲು ಆಳವಾದ ತನಿಖೆ ನಡೆದ ನಂತರವಷ್ಟೇ ತಿಳಿಯುತ್ತದೆ. ನಿನ್ನೆ ಸಂಜೆ 6:30 ರ ವೇಳೆ ಈ ದಾಳಿ ನಡೆದಿದೆ. ಇದಾದ 20 ನಿಮಿಷದಲ್ಲಿ ಆ ವ್ಯಕ್ತಿಯ ಬಂಧನವೂ ಕೂಡ ಆಗಿದೆ. ಆತನ ಹಿಂದೆ ಮತ್ತೆ ಬೇರೆಯವರು ಇದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಕಾರ್ಯಾಚರಣೆಯನ್ನ ಮುಂದುವರೆಸಿದ್ದಾರೆ ಎಂದು ಓವಿಂದ್​ ಆಸ್​ ಹೇಳಿದ್ದಾರೆ

  Read Also:85 Year Old Woman Becomes Panchayat President| ತಮಿಳುನಾಡಿನಲ್ಲಿ 85 ವರ್ಷದ ಅಜ್ಜಿಗೆ ಪಂಚಾಯತ್ ಅಧ್ಯಕ್ಷೆ ಪಟ್ಟ!

  ಕಂಡ ಕಂಡವರ ಮೇಲೆ ಅಟ್ಯಾಕ್​!

  ದಾಳಿ ಮಾಡಿದ ವ್ಯಕ್ತಿ ದಾಳಿಗೂ ಮುನ್ನ ಅದೇ ನಗರದಲ್ಲಿ ಓಡಾಡಿಕೊಂಡಿದ್ದನಂತೆ. ಕೈಯಲ್ಲಿ ಸುಮ್ಮನೆ ಬಿಲ್ಲು-ಬಾಣ ಹಿಡಿದುಕೊಂಡು ಇಡೀ ನಗರ ರೌಂಡ್ಸ್​ ಹಾಕಿದ್ದಾನೆ. ಈತನನ್ನ ಕಂಡು ಅಲ್ಲಿ ನೆರೆದಿದ್ದ ಜನ ಯಾರೋ ಯ್ಯೂಟ್ಯೂಬರ್​ ಇರಬೇಕೆಂದು ಸುಮ್ಮನಾಗಿದ್ದಾರೆ. ಮಧ್ಯಾಹ್ನದಿಂದ ಅದೇ ಪ್ರದೇಶದಲ್ಲಿ ಆತ ಓಡಾಡಿದ್ದ ಎಂದು ಹೇಳಲಾಗುತ್ತಿದೆ. ಸಂಜೆ 6:30ರ ಬಳಿಕ ಮನಸ್ಸಿಗೆ ಕಂಡ ಕಂಡಲ್ಲಿ ಬಾಣ ಬಿಟ್ಟಿದ್ದಾನೆ. ಇಂಗ್ಲೀಷ್​ ಮಾರ್ವೆಲ್ಸ್​ ಸಿನಿಮಾಗಳಲ್ಲಿ ಬಾಣ ಬಿಡುವ ದೃಶ್ಯದಂತೆ ಕಂಡ ಕಂಡವರ ಮೇಲೆ ಬಾಣ ಬಿಟ್ಟಿದ್ದಾನೆ. ಈತನ ಹುಚ್ಚಾಟ ಕಂಡು ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ನಾರ್ವೆ ಪ್ರಧಾನಿ ಎರ್ಲಾ ಸೋನ್ಬರ್ಗ್​, ಇದೊಂದು ಭೀಕರ ದಾಳಿ. ನಿಜಕ್ಕೂ ಭಯಹುಟ್ಟಿಸಿದೆ ಎಂದು ಹೇಳಿದ್ದಾರೆ.

  ವರದಿ - ವಾಸುದೇವ್​.ಎಂ
  Published by:Harshith AS
  First published: