• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಇಲ್ಲಿ ಬೇಧವಿಲ್ಲ, ಕಾಲಿಲ್ಲದ ಮುಸ್ಲಿಂ ಕ್ಲಾಸ್​​ಮೇಟ್​ನ್ನು ಎತ್ತಿ ಕರೆದೊಯ್ತಾರೆ ಹಿಂದೂ ಹೆಣ್ಮಕ್ಕಳು

ಇಲ್ಲಿ ಬೇಧವಿಲ್ಲ, ಕಾಲಿಲ್ಲದ ಮುಸ್ಲಿಂ ಕ್ಲಾಸ್​​ಮೇಟ್​ನ್ನು ಎತ್ತಿ ಕರೆದೊಯ್ತಾರೆ ಹಿಂದೂ ಹೆಣ್ಮಕ್ಕಳು

ವೈರಲ್ ಆದ ಕೇರಳ ವಿದ್ಯಾರ್ಥಿಗಳ ಫ್ರೆಂಡ್​ಶಿಪ್

ವೈರಲ್ ಆದ ಕೇರಳ ವಿದ್ಯಾರ್ಥಿಗಳ ಫ್ರೆಂಡ್​ಶಿಪ್

ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರ ಮನ ಸೆಳೆಯುತ್ತಿದೆ. ವೀಡಿಯೊದಲ್ಲಿ ಯುವಕ ತನ್ನ ಸಹಪಾಠಿಗಳಾದ ಅರ್ಚನಾ ಮತ್ತು ಆರ್ಯ ಸುತ್ತಲೂ ತೋಳುಗಳನ್ನು ಹಿಡಿದಿರುವುದನ್ನು ತೋರಿಸುತ್ತದೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಕೊಲ್ಲಂ(ಏ.08): ದೇಶಾದ್ಯಂತ ಹಲವು ಭಾಗಗಳಲ್ಲಿ ಮುಸ್ಲಿಂ-ಹಿಂದೂ ನಡುವಿನ ಒಡಕಿನ ಸುದ್ದಿಗಳನ್ನೇ ಕೇಳುತ್ತಿದ್ದೇವೆ. ಹಿಜಾಬ್ ವಿವಾದದ ನಂತರ ಇಂತಹ ಬಹಳಷ್ಟು ವಿಚಾರಗಳು ದೇಶದಲ್ಲಿ ಚರ್ಚೆಯಾಗುತ್ತಿವೆ. ಕರ್ನಾಟಕದಲ್ಲಿ (Karnataka News) ಹಿಜಾಬ್ (Hijab) ಕಿಡಿ ಹತ್ತಿಕೊಂಡಿದ್ದೇ ತಡ ಧರ್ಮಗಳ ನಡುವೆ ಬೆಂಕಿ ಹಚ್ಚಿ ತುಪ್ಪ ಸುರಿಯುವ ಕೆಲಸ ಭರದಿಂದ ಸಾಗಿದೆ. ಆರಂಭದಲ್ಲಿ ಹಿಜಾಬದ, ನಂತರ ಹಲಾಲ್ ಮಾಂಸ, ಮಾವಿನ ವ್ಯಾಪಾರದಲ್ಲಿ (Mango Business) ಮುಸ್ಲಿಂ ವ್ಯಾಪಾರಿಗಳ (Muslim Merchants) ಬೇಧ, ಜಾತ್ರೆ, ಮಹೋತ್ಸವಗಳಲ್ಲಿ ವ್ಯಾಪಾರ ನಿಷೇಧ ಹೀಗೆ ಒಂದರ ಹಿಂದೆ ಒಂದು ಪ್ರೀ ಪ್ಲಾನ್ಡ್​ ಯೋಜನೆಯಂತೆ ವಿವಾದಗಳು ಸೃಷ್ಟಿಯಾಗುತ್ತಲೇ ಇದೆ. ಇದಕ್ಕೆ ಸರಿಯಾಗಿ ಪ್ರಮುಖ ಸ್ಥಾನಗಳಲ್ಲಿರುವವರು ರಾಜಕೀಯ ಲಾಭಕ್ಕಾಗಿ ವಿವೇಚನಾರಹಿತ ಹೇಳಿಕೆಗಳನ್ನು ಕೊಟ್ಟು ಮತ್ತಷ್ಟು ತೊಂದರೆ ಸೃಷ್ಟಿಸುತ್ತಿದ್ದಾರೆ. 


ಇವೆಲ್ಲದರ ಮಧ್ಯೆ ಹಿತಕರವಾದ ಸುದ್ದಿ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ. ಯಾವುದೇ ಬೇಧವಿಲ್ಲದೆ, ಆತ್ಮೀಕ ಸಹಪಾಠಿಗಳಾಗಿ, ಉತ್ತಮ ಸ್ನೇಹಿತರಾಗಿ ಕಳೆಯುತ್ತಿರುವ ವಿದ್ಯಾರ್ಥಿಗಳ ಸ್ಟೋರಿ ಈಗ ಮಾದರಿಯಾಗಿದೆ. ಕೇರಳ ಕಾಲೇಜಿನ ವಿದ್ಯಾರ್ಥಿಗಳ ಈ ಸ್ನೇಹ ಹಿಜಾಬ್ ಹೆಸರಲ್ಲಿ ಕಿತ್ತಾಡುವವರಿಗೆ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.


ಅಲಿಫ್ ಮೊಹಮ್ಮದ್ ಎಂಬ ಗುಡ್ ಫ್ರೆಂಡ್


ಕೇರಳದ ಕಾಲೇಜು ವಿದ್ಯಾರ್ಥಿ ಅಲಿಫ್ ಮೊಹಮ್ಮದ್‌ಗೆ ಉತ್ತಮ ಸ್ನೇಹಿತರಿದ್ದಾರೆ. ಉತ್ತಮ ಸ್ನೇಹಿತರಿದ್ದಾರೆ ಎನ್ನುವುದಕ್ಕಿಂತ ಆತನೂ ಎಲ್ಲರಿಗೂ ಉತ್ತಮ ಸ್ನೇಹಿತನಾಗಿದ್ದಾನೆ ಎನ್ನಬಹುದು.




ಕಾಲಿಲ್ಲದಿದ್ದರೂ ಕಾಲೇಜಿಗೆ ಬರಲು ತೊಂದರೆಯೇ ಇಲ್ಲ


ಮೊಹಮ್ಮದ್‌ ಕಾಲೇಜಿಗೆ ಹಾಜರಾಗಲು ಅವನ ಅಂಗವೈಕಲ್ಯವನ್ನು ಅಡ್ಡಿಪಡಿಸುವುದಿಲ್ಲ. ಏಕೆಂದರೆ ಅವನಿಗೆ ಸ್ನೇಹಿತರಿದ್ದಾರೆ. ಅವನ ಕೊರತೆ ಅವನನ್ನು ಬಾಧಿಸದಂತೆ ನೋಡಿಕೊಳ್ಳುತ್ತಾರೆ ಅವನ ಸ್ನೇಹಿತರು. ಕೊಲ್ಲಂ ಜಿಲ್ಲೆಯ ಸಾಸ್ತಮಕೋಟಾದ ಡಿಬಿ ಕಾಲೇಜಿನ ಬಿಕಾಂ ವಿದ್ಯಾರ್ಥಿಗೆ ತನ್ನ ತರಗತಿಗಳಿಗೆ ಹಾಜರಾಗಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ ಅವನ ಸಹಪಾಠಿಗಳು.




ಮೊಹಮ್ಮದ್​ನನ್ನು ಎತ್ತಿ ಕರೆದೊಯ್ತಾರೆ ಸ್ನೇಹಿತರು


ಆತನ ಇಬ್ಬರು ಸ್ನೇಹಿತರು ಮೊಹಮ್ಮದ್‌ನನ್ನು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಅವರ ಕಾಲೇಜಿನ ಆವರಣದ ಸುತ್ತಲೂ ಹೊತ್ತೊಯ್ದಿದ್ದಾರೆ. ಮದುವೆಯ ಛಾಯಾಗ್ರಾಹಕರೊಬ್ಬರು ಸೆರೆಹಿಡಿದ ಈ ಸನ್ನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಕ್ಷಕರ ಮನ ಸೆಳೆಯುತ್ತಿದೆ.


ಕಾಲಿಲ್ಲದ ಸ್ನೇಹಿತನಿಗೆ ತೋಳು ಕೊಡೋ ಸ್ನೇಹಿತೆಯರಿವರು


ವೀಡಿಯೊದಲ್ಲಿ ಯುವಕ ತನ್ನ ಸಹಪಾಠಿಗಳಾದ ಅರ್ಚನಾ ಮತ್ತು ಆರ್ಯ ಸುತ್ತಲೂ ತೋಳುಗಳನ್ನು ಹಿಡಿದಿರುವುದನ್ನು ತೋರಿಸುತ್ತದೆ.


ಒಬ್ಬರಲ್ಲ ಇನ್ನೊಬ್ಬರು ತೋಳು ಕೊಡೋರಿದ್ದಾರೆ


ವಿಡಿಯೋ ಚಿತ್ರೀಕರಿಸಿದ ಜಗತ್ ತುಳಸೀಧರನ್, “ಇದೊಂದು ಉತ್ತಮ ಕ್ಷಣ. ಕಾಲೇಜಿನ ಒಳಗಿರುವ ಪ್ರತಿಯೊಬ್ಬರಿಗೂ ಇದು ಸಾಮಾನ್ಯ ದೃಶ್ಯವಾಗಿದೆ, ಏಕೆಂದರೆ ಅಲಿಫ್ ಅನ್ನು ಯಾವಾಗಲೂ ಅವನ ಒಬ್ಬ ಅಥವಾ ಇತರ ಸ್ನೇಹಿತರು ಸಾಗಿಸುತ್ತಾರೆ.


ಯುವಜನೋತ್ಸವ ಶೂಟ್​ನಲ್ಲಿ ಸೆರೆ ಸಿಕ್ಕಿತು ಅದ್ಭುತ ಕ್ಷಣ


ತುಳಸೀಧರನ್ ಅವರು ಕಾಲೇಜಿನಲ್ಲಿ ನಡೆದ ಯುವಜನೋತ್ಸವದಲ್ಲಿ ಛಾಯಾಚಿತ್ರಗಳನ್ನು ತೆಗೆಯುತ್ತಿದ್ದಾಗ ಮೊಹಮ್ಮದ್ ಅವರನ್ನು ಅವರ ಸ್ನೇಹಿತರು ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಿದರು. ಆ ಕ್ಷಣವನ್ನು ತ್ವರಿತವಾಗಿ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದರು ನಂತರ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Threat: ಮುಸ್ಲಿಂ ಮಹಿಳೆಯನ್ನು ಕಿಡ್ನಾಪ್ ಮಾಡಿ, ಪಬ್ಲಿಕ್​ನಲ್ಲಿ ರೇಪ್ ಮಾಡ್ತೀನಿ ಎಂದ ಸ್ವಾಮೀಜಿ


ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಫೋಟೋಗ್ರಫರ್ ಆಗಿರುವ ತುಳಸೀಧರನ್ ಪ್ರತಿವರ್ಷ ಆರ್ಟ್ಸ್​ ಫೆಸ್ಟ್​ಗೆ ಕಾಲೇಜಿಗೆ ಬರುತ್ತಾರೆ. ಇಬ್ಬರು ವಿದ್ಯಾರ್ಥಿನಿಯರು ಅವರ ಸಹಪಾಠಿಗೆ ಸಹಾಯ ಮಾಡುವ ದೃಶ್ಯ ನನ್ನನ್ನು ಒಂದು ಕ್ಷಣ ಸ್ತಬ್ಧವಾಗಿಸಿತು. ನಾನು ಕಾದುಕುಳಿತು ಅವರ ವಿಡಿಯೋ ಮಾಡಿದೆ ಎಂದಿದ್ದಾರೆ.

Published by:Divya D
First published: