ನವದೆಹಲಿ(ಡಿ. 15): ಜನವರಿ 16ರಂದು ನಡೆಯಲಿರುವ ಗಣರಾಜ್ಯೋತ್ಸವ ದಿನದ ಪೆರೇಡ್ನಲ್ಲಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಲಿದ್ದಾರೆ. ಕಳೆದ ತಿಂಗಳು ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿಗೆ ದೂರವಾಣಿ ಕರೆ ಮೂಲಕ ಈ ಆಹ್ವಾನ ನೀಡಿದ್ದು, ಅದಕ್ಕೆ ಬೋರಿಸ್ ಜಾನ್ಸನ್ ಒಪ್ಪಿಕೊಂಡಿದ್ದಾರೆ. 1993ರಲ್ಲಿ ಅಂದಿನ ಬ್ರಿಟನ್ ಪ್ರಧಾನಿ ಜಾನ್ ಮೇಜರ್ ಅವರು ಭಾರತದ ಗಣರಾಜ್ಯೋತ್ಸವ ಪೆರೇಡ್ಗೆ ಚೀಫ್ ಗೆಸ್ಟ್ ಆಗಿದ್ದರು. ಆ ನಂತರ ಕಳೆದ 27 ವರ್ಷಗಳಲ್ಲಿ ಭಾರತದ ರಿಪಬ್ಲಿಕ್ ಡೇ ಪೆರೇಡ್ನಲ್ಲಿ ಮುಖ್ಯ ಅತಿಥಿಯಾಗುವ ಅವಕಾಶ ಪಡೆದಿರುವ ಮೊದಲ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂದಿನ ವರ್ಷ ಬ್ರಿಟನ್ ದೇಶದಲ್ಲಿ ನಡೆಯಲಿರುವ ಜಿ7 ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ಸಿಕ್ಕಿದೆ.
ಬ್ರಿಟನ್ ಐತಿಹಾಸಿಕವಾಗಿ ಬಹಳ ಮಹತ್ವದ ಕಾಲಘಟ್ಟದಲ್ಲಿದೆ. ಈ ಹಂತದಲ್ಲೇ ಭಾರತದೊಂದಿಗಿನ ಅದರ ಸಂಬಂಧವೂ ಪ್ರಾಮುಖ್ಯತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ಭಾರತದ ಗಣರಾಜ್ಯೋತ್ಸವ ಪೆರೇಡ್ಗೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ವಿಶೇಷ.
ಇದನ್ನೂ ಓದಿ: ರೈತರ ಅನಿಸಿಕೆ ಕೇಳಲು, ಚರ್ಚಿಸಲು ಸದಾ ಸಿದ್ಧರಿದ್ದೇವೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಜನವರಿ 31ರಂದು ಬ್ರಿಟನ್ ದೇಶ ಐರೋಪ್ಯ ಒಕ್ಕೂಟದಿಂದ ಅಧಿಕೃತವಾಗಿ ಬೇರ್ಪಟ್ಟಿದೆ. ಈ ವರ್ಷದ ಅಂತ್ಯದವರೆಗೆ, ಅಂದರೆ ಡಿ. 31ರವರೆಗೆ ಬ್ರಿಟನ್ ದೇಶದಲ್ಲಿ ಐರೋಪ್ಯ ಒಕ್ಕೂಟದ ಕಾನೂನುಗಳೇ ಅನ್ವಯವಾಗುತ್ತದೆ. ಮುಂದಿನ ವರ್ಷದಿಂದ ಬ್ರಿಟನ್ ದೇಶಕ್ಕೆ ಪ್ರತ್ಯೇಕ ವ್ಯಾವಹಾರಿಕ ನೀತಿ ಜಾರಿಗೆ ಬರುತ್ತದೆ. ಐರೋಪ್ಯ ಒಕ್ಕೂಟದ ಜೊತೆ ವ್ಯಾಪಾರ ಮಾತುಕತೆಗಳನ್ನ ಬ್ರಿಟನ್ ಇನ್ನೂ ನಡೆಸುತ್ತಲೇ ಇದೆ. ಭಾರತದೊಂದಿಗೂ ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಉತ್ಸಾಹ ತೋರಿದೆ. ಈಗಾಗಲೇ ಕಳೆದ ತಿಂಗಳು ಈ ನಿಟ್ಟಿನಲ್ಲಿ ಆನ್ಲೈನ್ನಲ್ಲಿ ಮಾತುಕತೆಯೂ ಆಗಿದೆ. ಎರಡು ದೇಶಗಳ ನಡುವಿನ ವ್ಯವಹಾರಕ್ಕೆ ಇರುವ ಅಡೆತಡೆಗಳನ್ನ ನಿವಾರಿಸುವ ನಿಟ್ಟಿನಲ್ಲಿ ಸಮಾಲೋಚನೆಗಳು ನಡೆಸಿವೆ. ಲೈಫ್ ಸೈನ್ಸಸ್, ಇನ್ಫಾರ್ಮೇಶನ್ ಕಮ್ಯೂನಿಕೇಶನ್ಸ್ ಟೆಕ್ನಾಲಜಿ, ಆಹಾರ-ಪಾನೀಯ, ರಾಸಾಯನಿಕ ಮತ್ತು ಸೇವೆಗಳು ಈ ಐದು ಕ್ಷೇತ್ರಗಳಿಗೆ ವ್ಯವಹಾರದಲ್ಲಿ ಆದ್ಯತೆ ಕೊಡಲು ಗುರುತಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ