• Home
  • »
  • News
  • »
  • national-international
  • »
  • AIDS: ಮೊದಲ ಮಹಾಯುದ್ಧದ ವೇಳೆಯೇ ಹರಡಿತ್ತಾ ಏಡ್ಸ್?; ಪುಸ್ತಕದಲ್ಲಿ ಪ್ರಕಟವಾಯ್ತು ಭೀಕರ ಸತ್ಯ!

AIDS: ಮೊದಲ ಮಹಾಯುದ್ಧದ ವೇಳೆಯೇ ಹರಡಿತ್ತಾ ಏಡ್ಸ್?; ಪುಸ್ತಕದಲ್ಲಿ ಪ್ರಕಟವಾಯ್ತು ಭೀಕರ ಸತ್ಯ!

ಏಡ್ಸ್​

ಏಡ್ಸ್​

ಜಾಕ್ವೆಸ್ ಪೆಪಿನ್ ಅವರು ಬರೆದಿರುವ ಪುಸ್ತಕದ ಪ್ರಕಾರ ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಏಡ್ಸ್ ಸೋಂಕು ಕಾಣಿಸಿಕೊಂಡಿದೆ ಎಂಬುದನ್ನು ಹೇಳುತ್ತದೆ. ಇನ್ನು, ಜೂನ್ 5, 1981ರಂದು ಹೆಚ್ಐವಿ ಅನ್ನು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಯಿತು.

  • Share this:

    ಯುದ್ದ ಎಂದರೆ ಸಾಕು ನಾವು ಕೆಲವು ವರ್ಷಗಳ ಹಿಂದೆ ತೆರೆಕಂಡ ಬಾಹುಬಲಿ, ಕೇಸರಿ ಸಿನಿಮಾಗಳನ್ನು ನೆನಪಿಸಿಕೊಳ್ಳುತ್ತೇವೆ. ಸಿನಿಮಾಗಳಲ್ಲಿ ಬರುವ ದೃಶ್ಯಗಳನ್ನು ನೋಡಿ ಯುದ್ಧದ ಭೀಕರತೆಯನ್ನು ಅರಿತು ಮೈ ಜುಂ ಎನ್ನುತ್ತದೆ. ಇನ್ನು ವಿಶ್ವದ ಮೊದಲನೇ ಮಹಾಯುದ್ಧ ನಡೆದ ಘಟನೆಗಳು ಇತಿಹಾಸ ತೆರೆದು ನೋಡಿದಾಗ ಸಾವು-ನೋವುಗಳ ಬಗ್ಗೆ ಅರಿವು ಆಗುತ್ತದೆ. ಈ ನಡುವೆ ಮೊದಲ ಮಹಾಯುದ್ಧ ಸಂದರ್ಭದಲ್ಲಿಯೇ ಏಡ್ಸ್ ರೋಗ ಕಾಣಿಸಿಕೊಂಡಿತ್ತು ಎಂಬ ಭಯಾನಕ ಸತ್ಯವೊಂದು ಪುಸ್ತಕದಲ್ಲಿ ಪ್ರಕಟಿಸಲಾಗಿದೆ.


    ಕೆನಡಿಯನ್ ಲೇಖಕ ಸೂಕ್ಷ್ಮ ಜೀವವಿಜ್ಞಾನಿ ಜಾಕ್ವೆಸ್ ಪೆಪಿನ್ ಅವರು ಬರೆದಿರುವ ಪುಸ್ತಕದಲ್ಲಿನ ಮಾಹಿತಿಯಂತೆ, ಒಂದನೇ ಮಹಾಯುದ್ಧ ಸಂದರ್ಭದಲ್ಲಿ ಆಹಾರವಿಲ್ಲದೇ ನರಳುತ್ತಿದ್ದ ಸೈನಿಕನೊಬ್ಬ ಸೋಂಕಿತ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದ್ದ. ಇದನ್ನು ವಿವಿಧ ಮಾಧ್ಯಮಗಳು ಕೂಡ ವರದಿ ಮಾಡಿದ್ದವು. ಯುದ್ಧದ ಸಂದರ್ಭದಲ್ಲಿ ಈ ಸೈನಿಕನಿಗೆ ಮೊದಲು ಏಡ್ಸ್ ಸೋಂಕು ತಗುಲಿದೆ ಎಂದು ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ.


    ಜಾಕ್ವೆಸ್ ಪೆಪಿನ್ ಅವರು ಬರೆದಿರುವ ಪುಸ್ತಕದ ಪ್ರಕಾರ ಒಂದನೇ ಮಹಾಯುದ್ಧದ ಸಂದರ್ಭದಲ್ಲಿ ಏಡ್ಸ್ ಸೋಂಕು ಕಾಣಿಸಿಕೊಂಡಿದೆ ಎಂಬುದನ್ನು ಹೇಳುತ್ತದೆ. ಇನ್ನು, ಜೂನ್ 5, 1981ರಂದು ಹೆಚ್ಐವಿ ಅನ್ನು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಯಿತು.


    ಕ್ಯಾಮರೂನ್‌ಗೆ ಸೈನಿಕರು ಹೋದ ವೇಳೆ ಸೋಂಕು!:


    'Origins of AIDS' ಎಂಬ ಶೀರ್ಷಿಕೆಯನ್ನು ಹೊಂದಿರುವ ಪುಸ್ತಕದಲ್ಲಿ ಫ್ರೆಂಚ್ರ ಮೇಲೆ ಯುದ್ಧ ಸಾರಲು ಬೆಲ್ಜಿಯಂನ 1,600 ಸೈನಿಕರು ಯುದ್ಧಕ್ಕಾಗಿ ಬೆಲ್ಜಿಯಂನಿಂದ ಕ್ಯಾಮರೂನ್‌ಗೆ ಪ್ರಯಾಣ ಬೆಳೆಸಿದರು. ಈ ವೇಳೆ ಸೈನಿಕನೊಬ್ಬನು ಹೆಚ್ಐವಿ ಸೋಂಕು ಹೊಂದಿರುವ ಚಿಂಪಾಂಜಿಯನ್ನು ಕೊಂದಿದ್ದನು. ಆದರೆ, ಈ ವೇಳೆ ಸೈನಿಕ ಗಾಯಗೊಂಡಿದ್ದರಿಂದ ಚಿಂಪಾಂಜಿಯಲ್ಲಿನ ಸೋಂಕು ಸೈನಿಕನ ದೇಹ ಪ್ರವೇಶ ಮಾಡಿತ್ತು ಎಂದು ಲೇಖಕರು ಈ ಪುಸ್ತಕದಲ್ಲಿ ಹೇಳುತ್ತಾರೆ.


    ಆದರೆ, ಹಿಂದಿನ ಆವೃತ್ತಿಯಲ್ಲಿ 1921ರಲ್ಲಿ ಹೆಚ್ಐವಿ ಸೋಂಕಿತ ಕೋತಿಯನ್ನು ಕೊಂದ ಆಫ್ರಿಕನ್ ಬೇಟೆಗಾರನಿಗೆ ಸೋಂಕು ಹರಡಿತು. ಇದು ಮನಷ್ಯರಿಗೆ ಮೊದಲ ಬಾರಿಗೆ ಸೋಂಕು ಹರಡಿತು ಎಂದು ಜಾಕ್ವೆಸ್ ಪೆಪಿನ್ ಬರೆದಿದ್ದಾರೆ.


    ಮೈಕ್ರೋಬಯಾಲಜಿಸ್ಟ್ ಪ್ರಕಾರ, ಒಂದನೇ ಮಹಾಯುದ್ಧದ ವೇಳೆ ಕ್ಯಾಮರೂನ್ನ ಮೊಲೌಂಡಾ ಸುತ್ತಿನ ಕಾಡು ಪ್ರದೇಶದಲ್ಲಿ ಆಹಾರ ಸರಬರಾಜು ವ್ಯವಸ್ಥೆ ಇರಲಿಲ್ಲ. ಆಗ ಹಸಿವಿನಿಂದ ಬಳಲಿದ ಸೈನಿಕ ಹೆಚ್ಐವಿ ಸೋಂಕಿನಿಂದ ಬಳಲುತ್ತಿದ್ದ ಚಿಂಪಾಂಜಿಯನ್ನು ಹೊಡೆದು ಕೊಂದು ಮಾಂಸ ಸೇವಿಸಿದ್ದಾನೆ. ಬಳಿಕ ಈತನಿಗೂ ಹೆಚ್ಐವಿ ಕಾಣಿಸಿಕೊಂಡಿದೆ ಎಂಬುದನ್ನು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.


    ಇನ್ನು, ಹೆಚ್ಐವಿಯನ್ನು 1981ರಲ್ಲಿ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಲಾಗಿದೆ. ಜಾಗತಿಕವಾಗಿ ಸುಮಾರು 76 ಮಿಲಿಯನ್ ಜನರು ಈ ಸೋಂಕು ತಗುಲಿದೆ. ಅಷ್ಟೇ ಅಲ್ಲದೇ ಹೆಚ್ಐವಿ ಸೋಂಕಿನಿಂದ 33 ಮಿಲಿಯನ್ ಜನರು ಪ್ರಾಣ ಕಳೆದುಕೊಂಡಿದ್ದಾರೆ.

    Published by:Sushma Chakre
    First published: