Kolkata: ಕಲ್ಕತ್ತಾ ಬಿಜೆಪಿ ಸಂಸದ ಅರ್ಜುನ್​ ಸಿಂಗ್​ ಮನೆ ಮೇಲೆ ಎರಡನೇ ಬಾರಿ ಬಾಂಬ್​ ದಾಳಿ

"ಸಂಸದರು ಮತ್ತು ಶಾಸಕರ ಮನೆಗಳನ್ನು ಭದ್ರಪಡಿಸದಿದ್ದರೆ ದಿನಕ್ಕೊಬ್ಬರಂತೆ ಸಾಯಬೇಕಾಗುತ್ತದೆ, ಬಂಗಾಳದಲ್ಲಿ ಸಾಮಾನ್ಯ ಜನರ ಸ್ಥಿತಿಯನ್ನು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಹುದು ಅಂತಹ ಘೋರ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಬಿಜೆಪಿ ಬಂಗಾಳ ಘಟಕದ ಉಪಾಧ್ಯಕ್ಷ ರಿತೇಶ್ ತಿವಾರಿ ಹೇಳಿದರು.

ಸಂಸದ ಅರ್ಜುನ್​ ಸಿಂಗ್​

ಸಂಸದ ಅರ್ಜುನ್​ ಸಿಂಗ್​

 • Share this:
  Kolkata : ಕೋಲ್ಕತಾ ಬಳಿಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ (BJP MP Arjun Singh) ನಿವಾಸದ ಮೇಲೆ ಮತ್ತೊಮ್ಮೆ ಮಂಗಳವಾರ ಬಾಂಬ್ ದಾಳಿ ನಡೆಸಲಾಗಿದೆ, ಮೊದಲ ಘಟನೆ ವರದಿಯಾದ ಒಂದು ವಾರದ ನಂತರ ಮತ್ತೆ ಈ ಘಟನೆ ನಡೆದಿದ್ದು ಬಿಜೆಪಿ ಮುಖಂಡರು ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ 8: 30 ರ ಸುಮಾರಿಗೆ ಅವರ ಮನೆಯ ಹಿಂಭಾಗದಲ್ಲಿ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಂಸದರು, "ಅಪರಾಧಿಗಳು ಮುಕ್ತವಾಗಿ ನಮ್ಮ ಮನೆಯ ಮೇಲೆ ಬಾಂಬ್​ ದಾಳಿ ಮಾಡಿ ತಿರುಗಾಡುತ್ತಿದ್ದಾರೆ, ಆದರೆ ಪೊಲೀಸರು ತೃಣಮೂಲ ಕಾಂಗ್ರೆಸ್​ ಪಕ್ಷದ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಂತಹ ದಾಳಿಗಳಿಗೆ ನಾನು ಹೆದರುವುದಿಲ್ಲ, ನಾನು ಎಂದಿಗೂ ಇಂತಹ ಕೆಲಸಗಳಿಗೆ ಹೆದರುವುದಿಲ್ಲ." ಎಂದಿದ್ದಾರೆ.


  https://twitter.com/ArjunsinghWB/status/1437724062919245832

  ಬಂಗಾಳದ ಉತ್ತರ 24 ಪರಗಣ (North 24 Parganas) ಜಿಲ್ಲೆಯ ಜಗತ್ತಾಲ್‌ನಲ್ಲಿರುವ ಸಿಂಗ್ ನಿವಾಸದ ಮೇಲೆ ನಡೆದ ಬಾಂಬ್ ದಾಳಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸೋಮವಾರ ವಹಿಸಿಕೊಂಡಿದೆ. ಬಾಂಬ್​ ದಾಳಿಯ ವೇಳೆ ಯಾರಿಗೂ ಗಾಯವಾಗದಿದ್ದರೂ, ಸ್ಫೋಟದಿಂದಾಗಿ ಮನೆಯ ಕಬ್ಬಿಣದ ಗೇಟ್‌ಗಳಿಗೆ ಹಾನಿಯಾಗಿದೆ. ಘಟನೆ ನಡೆದಾಗ ಸಂಸದರು ಅವರ ಮನೆಯಲ್ಲಿ ಇರಲಿಲ್ಲ. ಆದರೆ ಅವರ ಕುಟುಂಬದ ಸದಸ್ಯರು ಒಳಗೆ ಇದ್ದರು.

  ರಾಜ್ಯ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ (Dilip Ghosh) ಅವರು ಮೊದಲ ದಾಳಿಯ ವೇಳೆಯ ತೃಣಮೂಲ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದರೆ, ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಖರ್ (Jagdeep Dhankhar) ಬಂಗಾಳದಲ್ಲಿ "ಹಿಂಸಾತ್ಮಕವಾಗಿ ನಡೆಯುತ್ತಿರುವ ಈ ಹಿಂಸಾಚಾರ" "ಕಡಿಮೆಯಾಗುವ ಲಕ್ಷಣವಿಲ್ಲ" ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯಪಾಲರು ತಮ್ಮ ಕಾಳಜಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪರ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  "ಸಂಸದರು ಮತ್ತು ಶಾಸಕರ ಮನೆಗಳನ್ನು ಭದ್ರಪಡಿಸದಿದ್ದರೆ ದಿನಕ್ಕೊಬ್ಬರಂತೆ ಸಾಯಬೇಕಾಗುತ್ತದೆ, ಬಂಗಾಳದಲ್ಲಿ ಸಾಮಾನ್ಯ ಜನರ ಸ್ಥಿತಿಯನ್ನು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಹುದು ಅಂತಹ ಘೋರ ಸ್ಥಿತಿಯಲ್ಲಿ ನಾವಿದ್ದೇವೆ. ಈ ಘಟನೆಯು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ (Trinamool Congress government)  ಗೂಂಡರಾಜ್ಯ ಮುಂದುವರಿದಿದೆ ಎಂದು ತೋರಿಸುತ್ತಿದೆ, "ಎಂದು ಬಿಜೆಪಿ ಬಂಗಾಳ ಘಟಕದ ಉಪಾಧ್ಯಕ್ಷ ರಿತೇಶ್ ತಿವಾರಿ ಹೇಳಿದರು.

  ಇದನ್ನೂ ಓದಿ: Kangana Ranaut: ಮಾನನಷ್ಟ ಮೊಕದ್ದಮೆ; ನಟಿ ಕಂಗನಾ ಬಂಧಿಸುವಂತೆ ನ್ಯಾಯಲಯದ ಮೊರೆ ಹೋದ ಜಾವೇದ್​ ಅಖ್ತರ್​

  ಬಂಗಾಳ ಸಿಎಂ ಸ್ನೇಹಿತನಾಗಿದ್ದ ಈಗ ಎದುರಾಳಿಯಾಗಿರುವ ಸುವೇಂದು ಅಧಿಕಾರಿಯು ಟ್ವೀಟ್ ಮಾಡಿದ್ದು, “ಸಂಸದ @ArjunsinghWB’s ನಿವಾಸದ ಮೇಲೆ ಬಾಂಬ್‌ಗಳನ್ನು ಎಸೆದವರಿಗೆ ಖಂಡಿತವಾಗಿಯೂ ಪಶ್ಚಿಮ ಬಂಗಾಳ ಆಡಳಿತ ಶಿಕ್ಷೆ ವಿಧಿಸುವುದಿಲ್ಲ ಎನ್ನುವುದು ನಮಗೆ ಗೊತ್ತಿರುವ ಸತ್ಯ. ಇಲ್ಲವಾದಲ್ಲಿ ಅವರು ಇಂತಹ ಕೃತ್ಯವನ್ನು ಎಸಗಲು ಧೈರ್ಯ ಮಾಡುವುದಿಲ್ಲ. ಆದಾಗ್ಯೂ, @ArjunsinghWB ಅವರು ಉಕ್ಕಿನ ಮನುಷ್ಯ, ಅವರನ್ನು ಎಂದಿಗೂ ಸಹ ಹೆದರಿಸಲಾಗುವುದಿಲ್ಲ. " ಎಂದು ಟ್ವೀಟ್​ ಮಾಡಲಾಗಿದೆ. 

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: