ಮುಂಬಯಿ: ಯಾವುದೇ ಪುರುಷ ಲೈಂಗಿಕ ಉದ್ದೇಶವಿಲ್ಲದೆ (Sexual Abuse) ಅಪ್ರಾಪ್ತ ಬಾಲಕಿಯ ತಲೆ ಹಾಗೂ ಬೆನ್ನು ನೇವರಿಸಿ ಆಕೆ ಪ್ರಬುದ್ಧಳಾಗಿದ್ದಾಳೆ ಎಂದು ತಿಳಿಸಿದರೆ ಅದು ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳೋದು ಅಥವಾ ಆಕೆಯ ಮರ್ಯಾದೆಗೆ ಭಂಗ ತರೋದು ಅಲ್ಲ ಎಂದು ಬಾಂಬೆ ಹೈಕೋರ್ಟ್ (Bombay Highcourt) ತಿಳಿಸಿದೆ.
ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ಪೀಠ, ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಅತಿಕ್ರಮಣ ಮತ್ತು ಮಹಿಳೆಯ ಇಚ್ಛೆಯ ವಿರುದ್ಧ ನಡೆದುಕೊಂಡ ಆರೋಪದಡಿ ಆರೋಪಿ ಮಯೂರ್ ಯೆಲೋರ್‌ಗೆ ನೀಡಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ್ದಾರೆ.
ಕೆಟ್ಟ ಉದ್ದೇಶವಿರಲಿಲ್ಲ
ಆರೋಪಿಯು ಆರೋಪಿಸಿದ್ದಕ್ಕಿಂತ ಹೆಚ್ಚಿನ ಕೃತ್ಯವನ್ನು ನಡೆಸಿದ್ದಾನೆ ಎಂಬುದು ಪ್ರಕರಣದಲ್ಲಿ ಉಲ್ಲೇಖಗೊಂಡಿಲ್ಲ, ಹಾಗೂ ಆತ 12-13 ರ ಹರೆಯದ ಹುಡುಗಿಯ ಬೆನ್ನು ಹಾಗೂ ತಲೆಯನ್ನು ಯಾವುದೇ ಕೆಟ್ಟ ಉದ್ದೇಶದಿಂದ ನೇವರಿಸಿಲ್ಲ. ಇದನ್ನು ಆ ಹುಡುಗಿ ಕೂಡ ಬಹಿರಂಗಪಡಿಸಿದ್ದಾಳೆ. ಅವನ ಮಾತುಗಳು ಕೂಡ ಸಂತ್ರಸ್ತೆಯನ್ನು ಬಾಲಕಿಯ ರೀತಿಯಲ್ಲಿ ನೋಡಿದ್ದನ್ನು ಸೂಚಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: Cow Slaughter: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಮನವಿ
ಪುರಾವೆ ಹಾಗೂ ದಾಖಲೆಗಳಿಲ್ಲ
ಹುಡುಗಿಯನ್ನು ಆತ ಕೆಟ್ಟ ದೃಷ್ಟಿಯಿಂದ ನೋಡಿದ್ದಾನೆ ಅಥವಾ ಆತ ಕೆಟ್ಟ ಉದ್ದೇಶದಿಂದ ಹುಡುಗಿಯ ತಲೆ ಹಾಗೂ ಬೆನ್ನನ್ನು ನೇವರಿಸಿದ್ದಾನೆ ಎಂಬುದನ್ನು ನಿರ್ದಿಷ್ಟಪಡಿಸುವ ಯಾವುದೇ ಅಂಶವನ್ನು ಮೇಲ್ಮನವಿದಾರರು ಪ್ರಾಸಿಕ್ಯೂಷನ್ ದಾಖಲೆಯಲ್ಲಿ ಹಾಜರುಪಡಿಸಲಿಲ್ಲ ಎಂದು ನ್ಯಾಯಮೂರ್ತಿ ಡಾಂಗ್ರೆ ಅವರು ಹೇಳಿದ್ದಾರೆ.
ಆರೋಪಿಯು ಯಾವುದೇ ನಿರ್ದಿಷ್ಟ ಉದ್ದೇಶವನ್ನಿಟ್ಟುಕೊಂಡು ಈ ಕೃತ್ಯವನ್ನು ನಡೆಸದೇ ಇದ್ದ ಕಾರಣ ಸೆಕ್ಷನ್ 354 ಅನ್ನು ಹೇಗೆ ಆತನ ವಿರುದ್ಧ ಹಾಕಲಾಯಿತು? ಮತ್ತು ಹೇಗೆ ಸಾಬೀತುಪಡಿಸಲಾಗಿದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಿಲ್ಲ ಎಂದ ನ್ಯಾಯಮೂರ್ತಿಗಳು, ಆರೋಪಿಯು ಹುಡುಗಿಯ ತಲೆ ಹಾಗೂ ಬೆನ್ನು ನೇವರಿಸಿದಾಗ ಆಕೆ ಭಯಭೀತಳಾಗಿದ್ದು ನಿಜವಾಗಿದ್ದು, ಆದರೆ ಆಕೆ ಪ್ರಬುದ್ಧಾವಸ್ಥೆಗೆ ಬಂದಿದ್ದಾಳೆ ಎಂಬುದನ್ನು ತಿಳಿಸಲು ಆರೋಪಿಯು ಆಕೆಯನ್ನು ಸ್ಪರ್ಶಿಸಿದ್ದಾನೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಹುಡುಗಿಯು ಪುಟ್ಟ ಮಗುವಾಗಿದ್ದಾಗಿನಿಂದಲೂ ಆರೋಪಿಗೆ ಪರಿಚಯವಿರುವುದರಿಂದ ಹಾಗೂ ಬಾಲ್ಯದಲ್ಲಿ ಆತ ನೋಡಿದ್ದರಿಂದ ಈಗ ದೊಡ್ಡವಳಾಗಿದ್ದಾಳೆ ಎಂಬರ್ಥದಲ್ಲಿ ಆತ ಹುಡುಗಿಯನ್ನು ಸ್ಪರ್ಶಿಸಿದ್ದಾನೆ ಎಂದು ನ್ಯಾಯಾಲಯ ಸ್ಪಷ್ಟೀಕರಣ ನೀಡಿದೆ.
2012ರ ಮಾರ್ಚ್ 15 ರಂದು, 18ರ ಹರೆಯದ ಸಂತ್ರಸ್ತೆಯ ಮನೆಗೆ ಆಕೆ ಒಬ್ಬಂಟಿಯಾಗಿದ್ದಾಗ ಆರೋಪಿ ಭೇಟಿ ನೀಡಿದ್ದರು. ಆಗ ಆತ ಮನೆಯನ್ನು ಪ್ರವೇಶಿಸಿ ಕುಡಿಯಲು ನೀರು ಕೇಳಿ ಅಲ್ಲಿಯೇ ಇದ್ದ ಕುರ್ಚಿಯ ಮೇಲೆ ಕುಳಿತಿದ್ದ. ನೀರು ಕುಡಿದ ನಂತರ ಆತ ಹುಡುಗಿಯ ಬಳಿ ಬಂದು ಆಕೆಯ ಬೆನ್ನು ಹಾಗೂ ತಲೆಯನ್ನು ನೇವರಿಸಿ ನೀನು ಬೆಳೆದು ದೊಡ್ಡವಳಾಗಿದ್ದೀಯಾ ಎಂದು ಹೇಳಿರುವುದಾಗಿ ಹುಡುಗಿ ನ್ಯಾಯಾಲಯದಲ್ಲಿ ತಿಳಿಸಿದ್ದಾಳೆ.
ಈ ಸಮಯದಲ್ಲಿ ಸಂಪೂರ್ಣವಾಗಿ ಹೆದರಿದ್ದ ಹುಡುಗಿ ಭಯದಿಂದ ಕೂಗಿದ ಪರಿಣಾಮ ನೆರೆಹೊರೆಯವರು ಸೇರಿ ಆರೋಪಿಯನ್ನು ಸೆರೆ ಹಿಡಿದಿದ್ದರು. ನಂತರ ಹುಡುಗಿಯ ತಾಯಿಗೆ ಕರೆಮಾಡಿ ಆಕೆಯನ್ನು ಬರಲು ತಿಳಿಸಿದ್ದರು. ಆರೋಪಿಯು ಆಕೆಯ ತಾಯಿಗೆ ಪರಿಚಯವಿದ್ದುದರಿಂದ ಆತನನ್ನು ಹೋಗಲು ಹೇಳಿದರು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ಓದಿ: Bombay High Court: ಭೂ ಮಾಲೀಕರು ವಿಧಿಸುವ ಶುಲ್ಕಗಳ ಮೇಲೆ ಹೊಸ ನಿಯಮ; ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು
ಹುಡುಗಿಯ ತಾಯಿ ಎಫ್‌ಐಆರ್ ದಾಖಲಿಸಿದ್ದು ಏಕೆ?
ಬಳಿಕ ಹುಡುಗಿಯ ತಾಯಿ ಆರೋಪಿಯ ಮನೆಗೆ ಹೋಗಿ ಆತನಿಗೆ ಎಚ್ಚರಿಕೆ ನೀಡಿದ್ದು, ಈ ಸಮಯದಲ್ಲಿ ಆರೋಪಿ ಹುಡುಗಿಯ ತಾಯಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಹುಡುಗಿಯ ತಾಯಿ ಆರೋಪಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದು, ತದನಂತರ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ಹೈಕೋರ್ಟ್ ನೀಡಿದ ತೀರ್ಪು ಏನು?
ನಂತರ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಪ್ಪಿತಸ್ಥರೆಂದು ನಿರ್ಣಯಿಸಿತು, ಇದರ ಪರಿಣಾಮ ಆರೋಪಿಗೆ ಕ್ರಮವಾಗಿ ನಾಲ್ಕು ತಿಂಗಳು ಮತ್ತು ಆರು ತಿಂಗಳ ಕಾಲದ ಶಿಕ್ಷೆಯನ್ನು ವಿಧಿಸಿತು. ಈ ತೀರ್ಪಿನ ವಿರುದ್ಧ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದ.
ಸಂತ್ರಸ್ತೆ, ಆಕೆಯ ತಾಯಿ, ನೆರೆಹೊರೆಯವರು, ತನಿಖಾಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿದ ಹೈಕೋರ್ಟ್ ಜಡ್ಜ್, ಸಂತ್ರಸ್ತೆಯ ಭಯಭೀತ ವರ್ತನೆ ಹಾಗೂ ದೌರ್ಬಲ್ಯಗಳನ್ನು ಗಮನಿಸಿದ್ದಾರೆ. ಹಾಗೂ ಅಪರಾಧಿಯು ಉದ್ದೇಶಪೂರ್ವಕವಾಗಿ ಸಂತ್ರಸ್ತೆಯನ್ನು ಸ್ಪರ್ಶಿಸಿಲ್ಲ ಎಂದು ಆದೇಶ ನೀಡಿ ಆತನ ಅಪರಾಧ ಹಾಗೂ ಶಿಕ್ಷೆ ಎರಡನ್ನೂ ರದ್ದುಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ