ವಕೀಲರು ಮಾಸ್ಕ್ ತೆಗೆದಿದ್ದಕ್ಕೆ ಅಹವಾಲು ಆಲಿಸಲ್ಲ ಎಂದ ಬಾಂಬೆ ಹೈಕೋರ್ಟ್..!

ಬಾಂಬೆ ಹೈಕೋರ್ಟ್​

ಬಾಂಬೆ ಹೈಕೋರ್ಟ್​

ಫೆಬ್ರವರಿ 22ರಂದು ನ್ಯಾ.ಪೃಥ್ವಿರಾಜ್ ಚವ್ಹಾಣ್ ಅವರಿದ್ದ ಏಕ ನ್ಯಾಯಾಧೀಶರ ಪೀಠವು ಅಹವಾಲು ಆಲಿಸುತ್ತಿದ್ದರು. ಈ ಸಂದರ್ಭದಲ್ಲಿ ಕಕ್ಷಿದಾರರ ಪರ ವಕೀಲರು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ನ್ಯಾಯಾಲಯದ ಕೊಠಡಿಯಲ್ಲಿ ಮಾಸ್ಕ್ ತೆಗೆದುಹಾಕಿದ್ದರು.

  • Share this:

ಮೇಲ್ಮನವಿ (ಕಕ್ಷಿದಾರರ)ಯನ್ನು ಪ್ರತಿನಿಧಿಸುವ ವೇಳೆ ವಕೀಲರೊಬ್ಬರು ನ್ಯಾಯಾಲಯದ ಕೊಠಡಿಯಲ್ಲಿ ತಮ್ಮ ಮುಖಕ್ಕೆ ಧರಿಸಿದ್ದ ಮಾಸ್ಕ್ ತೆಗೆದುಹಾಕಿದ್ದಕ್ಕೆ ಪ್ರಕರಣದ ಅಹವಾಲು ಆಲಿಸುವುದನ್ನು ಬಾಂಬ್ ಹೈಕೋರ್ಟ್ ನಿರಾಕರಿಸಿದೆ. ಫೆಬ್ರುವರಿ 22ರಂದು ನಡೆದ ಘಟನೆಯ ಈ ಆದೇಶವು ಶನಿವಾರದಂದು(ಫೆಬ್ರುವರಿ 27) ಲಭ್ಯವಾಗಿದೆ. ಫೆಬ್ರವರಿ 22 ರಂದು ನ್ಯಾಯಮೂರ್ತಿ ಪೃಥ್ವಿರಾಜ್ ಚವಾನ್ ಅವರ ಏಕ-ನ್ಯಾಯಾಧೀಶರ ಪೀಠವು ಮೇಲ್ಮನವಿ ವಿಷಯವನ್ನು ಆಲಿಸಿತ್ತು, ಈ ಸಮಯದಲ್ಲಿ ಮೇಲ್ಮನವಿಯ ವಕೀಲರು ನ್ಯಾಯಾಲಯದ ಕೋಣೆಯಲ್ಲಿ ಅವರ ಮಾಸ್ಕ್‌ ಅನ್ನು ಮಾರ್ಗಸೂಚಿಗಳಿಗೆ ವಿರುದ್ಧವಾಗಿ ತೆಗೆದುಹಾಕಿದರು.


ಫೆಬ್ರವರಿ 22ರಂದು ನ್ಯಾ.ಪೃಥ್ವಿರಾಜ್ ಚವ್ಹಾಣ್ ಅವರಿದ್ದ ಏಕ ನ್ಯಾಯಾಧೀಶರ ಪೀಠವು ಅಹವಾಲು ಆಲಿಸುತ್ತಿದ್ದರು. ಈ ಸಂದರ್ಭದಲ್ಲಿ ಕಕ್ಷಿದಾರರ ಪರ ವಕೀಲರು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿ ನ್ಯಾಯಾಲಯದ ಕೊಠಡಿಯಲ್ಲಿ ಮಾಸ್ಕ್ ತೆಗೆದುಹಾಕಿದ್ದರು. ವ್ಯಕ್ತಿಗಳ ಉಪಸ್ಥಿತಿಯಲ್ಲಿಯೇ ಪ್ರಕರಣದ ಅಹವಾಲು ಕೇಳುವ ವೇಳೆ ಪಾಲಿಸಲೇಬೇಕೆಂದು ಹೈಕೋರ್ಟ್ ರೂಪಿಸಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(SOPs) ಬಗ್ಗೆ ನ್ಯಾ. ಚವ್ಹಾಣ್ ಮಾತನಾಡಿ, ಎಲ್ಲ ಸಮಯದಲ್ಲಿಯೂ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವೆಂದು ಹೇಳಿದ್ದರು. ಬಳಿಕ ಇದೇ ಪ್ರಕರಣದ ವಿಚಾರಣೆ ಬಂದಾಗ ಅದರ ಅಹವಾಲು ಆಲಿಸುವುದಕ್ಕೆ ನ್ಯಾ.ಚವ್ಹಾಣ್ ನಿರಾಕರಿಸಿದ್ದಾರೆ. ‘ಈ ವಿಷಯವನ್ನು ಬೋರ್ಡ್ ನಿಂದ ತೆಗೆದುಹಾಕಬೇಕು’ ಎಂದು ಆದೇಶ ಹೇಳಿದೆ.


ಉತ್ತರ ಕರ್ನಾಟಕದ ಜೀವನಾಡಿ ಮಲಪ್ರಭೆಗೆ ಸೇರುತ್ತಿದೆ ಚರಂಡಿ ನೀರು...!


ನ್ಯಾ.ಚವ್ಹಾಣ್ ಅವರು ಪ್ರಕರಣಗಳಿಗೆ ಸಂಬಂಧಿಸಿದ ವಕೀಲರಿಗೆ ಮಾತ್ರ ನ್ಯಾಯಾಲಯ ಕೊಠಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇತರ ವಕೀಲರು ಮತ್ತು ಅವರ ಕಕ್ಷಿದಾರರು ತಮ್ಮ ಸರದಿ ಸಂಖ್ಯೆ ಬರುವತನಕವೂ ಮತ್ತೊಂದು ಕೊಠಡಿಯಲ್ಲಿ ಕಾಯಬೇಕಾಗಿದೆ. ಪುಣೆ ಹೊರತುಪಡಿಸಿ ಮಹಾರಾಷ್ಟ್ರದಲ್ಲಿ ಹೈಕೋರ್ಟ್ ಮತ್ತು ಎಲ್ಲಾ ಅಧೀನ ನ್ಯಾಯಾಲಯಗಳು ಡಿಸೆಂಬರ್‌ನಲ್ಲಿ 8 ತಿಂಗಳ ಅಂತರದ ನಂತರ ವೈಯಕ್ತಿಕವಾಗಿ ವಿಚಾರಣೆಯನ್ನು ಪುನರಾರಂಭಿಸಿವೆ.


ಕೊರೋನಾ ವೈರಸ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ನ್ಯಾಯಾಲಯಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಅಹವಾಲು ಆಲಿಸುತ್ತಿದ್ದವು. ಫೆಬ್ರುವರಿ ತಿಂಗಳ ಮಧ್ಯಭಾಗದಿಂದ ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಹೊಸದಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಫೆಬ್ರವರಿ 26ರ ಹೊತ್ತಿಗೆ ಮಹಾರಾಷ್ಟ್ರದಲ್ಲಿ 21,38,154 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮುಂಬೈನಲ್ಲಿ 3,23,879 ಪ್ರಕರಣಗಳು ದಾಖಲಾಗಿವೆ.

First published: