• Home
  • »
  • News
  • »
  • national-international
  • »
  • ICICI-Videocon Loan Scam: ಚಂದಾ ಕೊಚ್ಚರ್ ಫ್ಯಾಮಿಲಿಗೆ ಬಿಗ್​ ರಿಲೀಫ್​; ಹೈಕೋರ್ಟ್​ನಿಂದ ಜಾಮೀನು ಮಂಜೂರು

ICICI-Videocon Loan Scam: ಚಂದಾ ಕೊಚ್ಚರ್ ಫ್ಯಾಮಿಲಿಗೆ ಬಿಗ್​ ರಿಲೀಫ್​; ಹೈಕೋರ್ಟ್​ನಿಂದ ಜಾಮೀನು ಮಂಜೂರು

ಚಂದಾ ಕೊಚ್ಚರ್

ಚಂದಾ ಕೊಚ್ಚರ್

ಇಬ್ಬರ ಅಹವಾಲುಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್ ಚಂದಾ ಕೊಚ್ಚರ್ ಹಾಗೂ ದೀಪಕ್ ಕೊಚ್ಚರ್ ಅವರ ಬಂಧನ ಕಾನೂನಿನ ಪ್ರಕಾರವಾಗಿಲ್ಲ ಎಂದು ಇಬ್ಬರ ಬಿಡುಗಡೆಗೆ ಆದೇಶ ಹೊರಡಿಸಿದೆ.

  • Trending Desk
  • Last Updated :
  • New Delhi, India
  • Share this:

ಭಾರತೀಯ ಬ್ಯಾಂಕಿಂಗ್ ಉದ್ಯಮವು ಕಂಡ ಅತ್ಯಂತ ಉನ್ನತ ಮಟ್ಟದ ಹಗರಣಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್-ವಿಡಿಯೋಕಾನ್ (ICICI Bank-Videocon loan fraud case) ಪ್ರಕರಣದ ಕುರಿತಾಗಿ ಬಾಂಬೆ ಹೈಕೋರ್ಟ್ (Bombay High Court) ಇಂದು ಮಹತ್ವದ ತೀರ್ಪನ್ನು ಹೊರಡಿಸಿದೆ. 3,250 ಕೋಟಿ ರೂಪಾಯಿ ವಿಡಿಯೋಕಾನ್ ವಂಚನೆ ಪ್ರಕರಣದಲ್ಲಿ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚರ್ (Chanda Kochhar) ಮತ್ತು ಅವರ ಪತಿ ದೀಪಕ್ ಕೊಚ್ಚರ್ (Deepak Kochhar) ಅವರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.


ಬಂಧನ ಕಾನೂನಿಗೆ ಅನುಗುಣವಾಗಿಲ್ಲ ಎಂದ ನ್ಯಾಯಾಲಯ


ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ತಮ್ಮ ಬಂಧನ ಕಾನೂನುಬಾಹಿರವಾಗಿದೆ, ತನಿಖೆಯನ್ನು ಪ್ರಾರಂಭಿಸಲು ಸಿಬಿಐ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಕೊಚ್ಚರ್‌ ದಂಪತಿ ನ್ಯಾಯಾಲಯದ ಮುಂದೆ ವಾದಿಸಿದ್ದರು.


ಇಬ್ಬರ ಅಹವಾಲುಗಳನ್ನು ಆಲಿಸಿದ ಬಾಂಬೆ ಹೈಕೋರ್ಟ್ ಚಂದಾ ಕೊಚ್ಚರ್ ಹಾಗೂ ದೀಪಕ್ ಕೊಚ್ಚರ್ ಅವರ ಬಂಧನ ಕಾನೂನಿನ ಪ್ರಕಾರವಾಗಿಲ್ಲ ಎಂದು ಇಬ್ಬರ ಬಿಡುಗಡೆಗೆ ಆದೇಶ ಹೊರಡಿಸಿದೆ.


ಚಂದಾ ಕೊಚ್ಚರ್ ಮತ್ತು ದೀಪಕ್ ಕೊಚ್ಚರ್


ಬಂಧನವು ಕಾನೂನಿನ ಪ್ರಕಾರವಾಗಿಲ್ಲ ಎಂದು ಉಲ್ಲೇಖಿಸಿದ ನ್ಯಾಯಾಲಯ ಚಂದಾ ಕೊಚ್ಚರ್ ಮತ್ತು ದೀಪಕ್ ಕೊಚ್ಚರ್ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಲು ಆದೇಶಿಸಿದೆ. ಹಾಗೆಯೇ ಇಬ್ಬರಿಗೂ ಅವರ ಪಾಸ್‌ಪೋರ್ಟ್‌ಗಳನ್ನು ಸಿಬಿಐಗೆ ಒಪ್ಪಿಸುವಂತೆ ತಿಳಿಸಿದೆ.


ಚಂದಾ ಕೊಚ್ಚರ್ ಅವರನ್ನು ಬೈಕುಲ್ಲಾ ಜಿಲ್ಲಾ ಕಾರಾಗೃಹದಲ್ಲಿ (ಮಹಿಳಾ ಜೈಲು) ಇರಿಸಿದ್ದರೆ, ದೀಪಕ್ ಕೊಚ್ಚರ್ ಆರ್ಥರ್ ರೋಡ್ ಜೈಲಿನಲ್ಲಿದ್ದರು.


ಕ್ರಿಮಿನಲ್‌ ಪಿತೂರಿ, ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕೇಸ್


ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಎಫ್ಐಆರ್‌ನಲ್ಲಿ ಕೊಚ್ಚರ್ ದಂಪತಿ ಮತ್ತು ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್, ನ್ಯೂಪವರ್ ರಿನ್ಯೂಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್‌ ಲಿಮಿಟೆಡ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.


ಚಂದಾ ಕೊಚ್ಚರ್ ಮತ್ತು ದೀಪಕ್ ಕೊಚ್ಚರ್


ಏನಿದು ಪ್ರಕರಣ?


2012 ರಲ್ಲಿ ಐಸಿಐಸಿಐ ಬ್ಯಾಂಕ್‌ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ರೂಪಾಯಿ ಸಾಲ ಪಡೆದು, ಕೆಲ ತಿಂಗಳ ನಂತರ ವಿಡಿಯೋಕಾನ್ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ಧೂತ್ ಅವರು ನ್ಯೂಪವರ್‌ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಕ್ವಿಡ್ ಪ್ರೊ ಕ್ವೋ ಡೀಲ್‌ನಲ್ಲಿ ಸಿಬಿಐ ಆರೋಪಿಸಿತ್ತು.


ಮತ್ತು ಪ್ರಕರಣಕ್ಕೆ ಸಂಬಂಧಿಸಂತೆ ಸಿಬಿಐ 2019 ರಲ್ಲಿ ಎಫ್‌ಐಆರ್ ದಾಖಲಿಸಿತ್ತು. ಪ್ರಕರಣದ ಎಲ್ಲಾ ಜಾಡುಗಳನ್ನು ಆಧರಿಸಿದ ಸಿಬಿಐ ಇದೊಂದು ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಎಂದು ಹೇಳಿತ್ತು.


ಇದನ್ನೂ ಓದಿ: Cheque Payment Fraud: ಬ್ಯಾಂಕ್​ಗೆ ಚೆಕ್​ ಹಾಕುವಾಗ ಜೋಪಾನ, ವಂಚಕರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ!


ಮೇ 2018 ರಲ್ಲಿ, ಐಸಿಐಸಿಐ ಬ್ಯಾಂಕ್ ತನ್ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚರ್ ವಿರುದ್ಧ ವಿಚಾರಣೆಯನ್ನು ಪ್ರಾರಂಭಿಸಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ಅವರು ರಜೆ ತೆಗೆದುಕೊಂಡರು ಮತ್ತು ಆರಂಭಿಕ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದರು. ಇವರ ನಿವೃತ್ತಿ ಕೋರಿದ ಅರ್ಜಿಯನ್ನು ಬ್ಯಾಂಕ್‌ ಕೂಡ ಸ್ವೀಕರಿಸಿತು.


ಜನವರಿ, 2019 ರಲ್ಲಿ ಸಲ್ಲಿಸಿದ ತನ್ನ ಚಾರ್ಜ್‌ಶೀಟ್‌ನಲ್ಲಿ, ಕೊಚ್ಚರ್ ಅಡಿಯಲ್ಲಿ ಐಸಿಐಸಿಐ ಬ್ಯಾಂಕ್, ಬ್ಯಾಂಕಿನ ಕ್ರೆಡಿಟ್ ನೀತಿಗಳನ್ನು ಉಲ್ಲಂಘಿಸಿ ವಿಡಿಯೋಕಾನ್‌ಗೆ ಸಾಲವನ್ನು ಮಂಜೂರು ಮಾಡಿದೆ ಎಂದು ಸಿಬಿಐ ಹೇಳಿದೆ. ಈ ಸಾಲಗಳು ನಂತರ ಅನುತ್ಪಾದಕ ಆಸ್ತಿಗಳಾಗಿ (NPA ಗಳು) ಬ್ಯಾಂಕ್‌ಗೆ ಭಾರಿ ನಷ್ಟವನ್ನು ಉಂಟುಮಾಡಿತ್ತು.


ವಿಡಿಯೊಕಾನ್‌ಗೆ ಸಾಲ ಮನ್ನಾ ಮಾಡಿರುವ ಮಂಜೂರಾತಿ ಸಮಿತಿಯ ಹಿರಿಯ ಅಧಿಕಾರಿಗಳ ಪಾತ್ರದ ಬಗ್ಗೆಯೂ ಸಿಬಿಐ ತನಿಖೆ ನಡೆಸುವಂತೆ ಕೋರಿದೆ.


ಇದನ್ನೂ ಓದಿ: Bank FD Rates: ಮೂರು ವರ್ಷದಲ್ಲಿ ಇದೇ ಮೊದಲ ಬಾರಿಗೆ; ಬ್ಯಾಂಕ್​ ಗ್ರಾಹಕರಿಗೆ ಬಂಪರ್ ಆಫರ್!


ಇದಲ್ಲದೆ, ಮೇ 2009 ರಲ್ಲಿ ಕೊಚ್ಚರ್ ಅವರು ಬ್ಯಾಂಕಿನ ಉನ್ನತ ಕಾರ್ಯನಿರ್ವಾಹಕರಾಗಿ ಅಧಿಕಾರ ವಹಿಸಿಕೊಂಡ ನಂತರ ವಿಡಿಯೋಕಾನ್ ಸಮೂಹ ಕಂಪನಿಗಳಿಗೆ ಸಾಲದ ಮಿತಿಯನ್ನು ಅನುಮೋದಿಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.


ಹುದ್ದೆಯ ದುರಪಯೋಗ ಎಂದ ಸಿಬಿಐ


ಜೂನ್ 2009 ಮತ್ತು ಅಕ್ಟೋಬರ್ 2011 ರ ನಡುವೆ ಐಸಿಐಸಿಐ ಬ್ಯಾಂಕ್ ವೀಡಿಯೊಕಾನ್ ಸಮೂಹ ಕಂಪನಿಗಳಿಗೆ ಆರು ಹೆಚ್ಚಿನ-ಮೌಲ್ಯದ ಸಾಲಗಳನ್ನು ಮಂಜೂರು ಮಾಡಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.


ಈ ಸಾಲಗಳನ್ನು ಮಂಜೂರು ಮಾಡುವ ಮೂಲಕ ಸಿಇಒ ಆಗಿ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಿಸಿಕೊಂಡು ಕೊಚ್ಚರ್ ಅವರು ಬ್ಯಾಂಕ್‌ಗೆ ವಂಚಿಸಿದ್ದಾರೆ ಎಂದು ಸಂಸ್ಥೆ ಆರೋಪಿಸಿತ್ತು.

Published by:Sumanth SN
First published: