HOME » NEWS » National-international » BOMBAY HC SEEKS DETAILS OF PM CARES FUND FROM CENTRE WITHIN TWO WEEKS MAK

ಪಿಎಂ-ಕೇರ್ಸ್‌ ಹಣ ಸಂಗ್ರಹದ ವಿವರವನ್ನು ಎರಡು ವಾರದಲ್ಲಿ ನೀಡಿ; ಕೇಂದ್ರಕ್ಕೆ ಬಾಂಬೆ ಹೈಕೋರ್ಟ್‌ ತಾಕೀತು

ಬಾಂಬೆ ಹೈಕೋರ್ಟ್‌‌ನ ನಾಗ್ಪುರ ನ್ಯಾಯಪೀಠವು ಪಿಎಂ-ಕೇರ್ಸ್‌ ನಿಧಿಯಲ್ಲಿ ಸಂಗ್ರಹಿಸಿದ ಹಣದ ವಿವರಗಳನ್ನು ಮತ್ತು ಅದರ ಲೆಕ್ಕಪರಿಶೋಧನೆಯನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ತಿಳಿಯಲು ಪ್ರಯತ್ನಿಸಿದೆ ಎಂದು ಅಭಿಪ್ರಾಯಪಟ್ಟಿದೆ.

MAshok Kumar | news18-kannada
Updated:June 5, 2020, 6:08 PM IST
ಪಿಎಂ-ಕೇರ್ಸ್‌ ಹಣ ಸಂಗ್ರಹದ ವಿವರವನ್ನು ಎರಡು ವಾರದಲ್ಲಿ ನೀಡಿ; ಕೇಂದ್ರಕ್ಕೆ ಬಾಂಬೆ ಹೈಕೋರ್ಟ್‌ ತಾಕೀತು
ಪಿಎಂ-ಕೇರ್ಸ್‌.
  • Share this:
ಮುಂಬೈ: ನಾಗ್ಪುರ ಮೂಲದ ವಕೀಲ ಅರವಿಂದ್ ವಾಘಮರೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್, “ಕೊರೋನಾ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಪಿಎಂ-ಕೇರ್ಸ್ ನಿಧಿಯಲ್ಲಿ ಸಂಗ್ರಹಿಸಿದ ಮೊತ್ತದ ವಿವರಗಳನ್ನು ಎರಡು ವಾರಗಳಲ್ಲಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವಂತೆ” ಕೇಂದ್ರ ಸರ್ಕಾರ ಮತ್ತು ಪಿಎಂ-ಕೇರ್ಸ್ ನಿಧಿಯ ಎಲ್ಲಾ ಟ್ರಸ್ಟಿಗಳಿಗೆ ನೋಟಿಸ್ ನೀಡಿದೆ.

ಪಿಎಂ-ಕೇರ್ಸ್ ಎಂಬುದು ನೂತನ ರಾಷ್ಟ್ರೀಯ ತುರ್ತುಸ್ಥಿತಿಯನ್ನು ಎದುರಿಸಲು ಮತ್ತು ಪೀಡಿತ ಜನರಿಗೆ ಪರಿಹಾರವನ್ನು ಒದಗಿಸಲು ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಕೇಂದ್ರ ಸರ್ಕಾರವು ಸ್ಥಾಪಿಸಿದ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿದೆ.

ಬಾಂಬೆ ಹೈಕೋರ್ಟ್‌‌ನ ನಾಗ್ಪುರ ನ್ಯಾಯಪೀಠವು ಪಿಎಂ-ಕೇರ್ಸ್‌ ನಿಧಿಯಲ್ಲಿ ಸಂಗ್ರಹಿಸಿದ ಹಣದ ವಿವರಗಳನ್ನು ಮತ್ತು ಅದರ ಲೆಕ್ಕಪರಿಶೋಧನೆಯನ್ನು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ತಿಳಿಯಲು ಪ್ರಯತ್ನಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಕೊರೋನಾ ಕಾಲದಲ್ಲಿ ಕಳೆ ಮೂರು ತಿಂಗಳಿನಿಂದ ಈ ಪಿಎಂ-ಕೇರ್ಸ್‌‌ನಲ್ಲಿ ಸಾಕಷ್ಟು ಹಣ ಸಂಗ್ರಹವಾಗಿದೆ. ಆದರೆ, ಈ ಹಣವನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡಲಾಗಿದೆ. ಸಂಗ್ರಹವಾದ ಒಟ್ಟಾರೆ ಹಣದ ಪ್ರಮಾಣ ಎಷ್ಟು ಎಂಬ ಕುರಿತು ಯಾವುದೇ ನಿಖರ ಮಾಹಿತಿ ಇಲ್ಲ. ಹೀಗಾಗಿ ಈ ಮಾಹಿತಿಯನ್ನು ಕೋರಿ ವಕೀಲ ವಾಘಮರೆ ಬಾಂಬೆ ಹೈ ಕೋರ್ಟ್‌‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಅನಿಲ್ ಕಿಲ್ಲೋರ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರಕ್ಕೆ ನೋಟಿಸ್ ನೀಡಿದ್ದು, ಎರಡು ವಾರಗಳಲ್ಲಿ ಈ ಕುರಿತು ಸಂಪೂರ್ಣ ಅಫಿಡವಿಟ್‌ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಕೇಂದ್ರ ಸರ್ಕಾರದ ಪಿಎಂ-ಕೇರ್ಸ್‌‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅಧ್ಯಕ್ಷರಾಗಿ ಮತ್ತು ರಕ್ಷಣಾ, ಗೃಹ ಮತ್ತು ಹಣಕಾಸು ಇಲಾಖೆಗಳ ಮಂತ್ರಿಗಳನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಹೀಗಾಗಿ ಪಿಎಂ-ಕೇರ್ಸ್ ಟ್ರಸ್ಟ್ ಸ್ವತಂತ್ರ ಲೆಕ್ಕ ಪರಿಶೋಧಕರ ಬದಲು ಸಿಎಜಿಯಿಂದ ಹಣವನ್ನು ಲೆಕ್ಕಪರಿಶೋಧಿಸಲು ಕೋರ್ಟ್‌ ನಿರ್ದೇಶಿಸಿದೆ. ಅಲ್ಲದೆ, ಭಾರತೀಯ ಸಂವಿಧಾನ ರಚಿಸಿದ ದೇಶದ ಉನ್ನತ ಸಂಸ್ಥೆಯ ಗೌರವವನ್ನು ಕಾಪಾಡಿಕೊಳ್ಳಲು ಪಿಎಂ-ಕೇರ್ಸ್ ನಿಧಿಯನ್ನು ಸಿಎಜಿ ಲೆಕ್ಕಪರಿಶೋಧಿಸಬೇಕು ಎಂದು ತಿಳಿಸಲಾಗಿದೆ.

ಇದನ್ನೂ ಓದಿ : ಜಾರ್ಜ್‌ ಫ್ಲಾಯ್ಡ್‌ ಹತ್ಯೆ ಬೆನ್ನಿಗೆ ಜೋಧಪುರದಲ್ಲೂ ಅದೇ ರೀತಿಯ ಅಮಾನವೀಯ ಘಟನೆ; ವೈರಲ್‌ ಆಗುತ್ತಿದೆ ವಿಡಿಯೋ
First published: June 5, 2020, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading