• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ನಟ ಸುಶಾಂತ್​ ಸಿಂಗ್ ಸಹೋದರಿ ಮೀತು ಸಿಂಗ್ ವಿರುದ್ಧ ನಟಿ ರಿಯಾ ಸಲ್ಲಿಸಿದ ಪ್ರಕರಣ ರದ್ದುಪಡಿಸಿದ ಬಾಂಬೆ ಹೈಕೊರ್ಟ್​

ನಟ ಸುಶಾಂತ್​ ಸಿಂಗ್ ಸಹೋದರಿ ಮೀತು ಸಿಂಗ್ ವಿರುದ್ಧ ನಟಿ ರಿಯಾ ಸಲ್ಲಿಸಿದ ಪ್ರಕರಣ ರದ್ದುಪಡಿಸಿದ ಬಾಂಬೆ ಹೈಕೊರ್ಟ್​

ನಟ ಸುಶಾಂ‌ತ್-ರಿಯಾ ಚಕ್ರವರ್ತಿ .

ನಟ ಸುಶಾಂ‌ತ್-ರಿಯಾ ಚಕ್ರವರ್ತಿ .

ಪ್ರಿಯಾಂಕಾ ಸಿಂಗ್ ವಿರುದ್ಧ ಪ್ರೈಮಾ ಫೇಸಿ ಪ್ರಕರಣ ಕಂಡುಬಂದಿದೆ ಮತ್ತು ಆಕೆಯ ವಿರುದ್ಧ ತನಿಖೆಗೆ ಯಾವುದೇ ಅಡೆತಡೆಗಳು ಉಂಟಾಗಬಾರದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

  • Share this:

ಮುಂಬೈ (ಫೆಬ್ರವರಿ 15); ದಿವಂಗತ ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​ ಸಹೋದರಿ ಮೀತು ಸಿಂಗ್​ ವಿರುದ್ಧ ಈ ಹಿಂದೆ ನಟಿ ರಿಯಾ ಚಕ್ರವರ್ತಿ ಕೇಸ್​ ದಾಖಲಿಸಿದ್ದರು. ಈ ಸಂಬಂಧ ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿತ್ತು. ಆದರೆ, ಬಾಂಬೆ ಹೈಕೋರ್ಟ್ ಇಂದು ಆ ಎಫ್​ಐಆರ್​ ಅನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಎಸ್‌.ಎಸ್. ಶಿಂಧೆ ಮತ್ತು ಎಂ.ಎಸ್. ಕಾರ್ಣಿಕ್​ ಮೀತು ಸಿಂಗ್ ವಿರುದ್ಧದ ಎಫ್​ಐಆರ್​ ಅನ್ನು ರದ್ದುಗೊಳಿಸಿದ್ದಾರೆ. ಆದರೆ, ಸುಶಾಂತ್​ ಸಿಂಗ್ ಮತ್ತೋರ್ವ ಸೋದರಿಯಾದ ಪ್ರಿಯಾಂಕಾ ಸಿಂಗ್​ ವಿರುದ್ಧದ ಪ್ರಕರಣವನ್ನು ಖುಲಾಸೆಗೊಳಿಸಲು ಬಾಂಬೆ ಹೈಕೋರ್ಟ್​ ಒಪ್ಪಿಗೆ ನೀಡಿಲ್ಲ ಎಂದು ತಿಳಿದುಬಂದಿದೆ.


"ಪ್ರಿಯಾಂಕಾ ಸಿಂಗ್ ವಿರುದ್ಧ ಪ್ರೈಮಾ ಫೇಸಿ ಪ್ರಕರಣ ಕಂಡುಬಂದಿದೆ ಮತ್ತು ಆಕೆಯ ವಿರುದ್ಧ ತನಿಖೆಗೆ ಯಾವುದೇ ಅಡೆತಡೆಗಳು ಉಂಟಾಗಬಾರದು" ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.


ದಿವಂಗತ ನಟ ಸುಶಾಂತ್​ ಸಿಂಗ್ ಅವರಿಗೆ "ನಕಲಿ" ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಮೂಲಕ ಔಷಧಿ ನೀಡಲಾಗಿದೆ ಎಂದು ಆರೋಪಿಸಿ ನಟಿ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ಸೋದರಿಯರಾದ ಪ್ರಿಯಾಂಕಾ ಸಿಂಗ್, ಮೀತು ಸಿಂಗ್ ಮತ್ತು ದೆಹಲಿ ಮೂಲದ ವೈದ್ಯರ ವಿರುದ್ಧ ದೂರು ದಾಖಲಿಸಿದ್ದರು.


ಸೆಪ್ಟೆಂಬರ್ 7, 2020 ರಂದು ಸಲ್ಲಿಸಿದ ಆರು ಪುಟಗಳ ಸುದೀರ್ಘ ದೂರಿನಲ್ಲಿ, ಸುಶಾಂತ್ ಅವರು ಪ್ರಿಸ್ಕ್ರಿಪ್ಷನ್ ಪಡೆದ ಐದು ದಿನಗಳ ನಂತರ ನಿಧನರಾದರು ಎಂದು ಉಲ್ಲೇಖಿಸಲಾಗಿತ್ತು. ಅಲ್ಲದೆ, ಸಹೋದರಿಯರು ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ.ತರುಣ್ ಕುಮಾರ್ ಅವರು ಕೆಲವು ಔಷಧಿಗಳನ್ನು ಕಾನೂನುಬಾಹಿರವಾಗಿ ಶಿಫಾರಸು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.


ಇದನ್ನೂ ಓದಿ: ಟೂಲ್​ಕಿಟ್​ ಹಗರಣ; ದಿಶಾ ರವಿ ಬೆನ್ನಿಗೆ ಬಾಂಬೆ ಹೈಕೋರ್ಟ್​ ವಕೀಲೆ ನಿಕಿತಾ ಜಾಕೋಬ್​ ಬಂಧನಕ್ಕೆ ಸಿದ್ಧತೆ


ರಿಯಾ ಅವರ ದೂರಿನ ಆಧಾರದ ಮೇಲೆ, ಮುಂಬೈ ಪೊಲೀಸರು 2020 ರ ಸೆಪ್ಟೆಂಬರ್ 8 ರಂದು ಐಪಿಸಿ ಮತ್ತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಿಯಾಂಕಾ, ಮೀತು ಮತ್ತು ಡಾ.ತರುಣ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.


ಅಕ್ಟೋಬರ್ 6, 2020 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲ ಮಾಧವ್ ಥೋರತ್ ಮೂಲಕ ಬಾಂದ್ರಾ ಪೊಲೀಸರು ಪ್ರಕರಣವನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು.

First published: