News18 India World Cup 2019

14 ವರ್ಷದ ಅಪ್ರಾಪ್ತೆಯ ಮದುವೆಯನ್ನು ಕಾನೂನು ಬಾಹಿರವಲ್ಲ ಎಂದ ಬಾಂಬೆ ಹೈಕೋರ್ಟ್​!

ಅಪ್ರಾಪ್ತೆಯನ್ನು ವರಿಸಿದ ವ್ಯಕ್ತಿಯನ್ನು 2017ರಲ್ಲಿ ಬಂಧಿಸಲಾಗಿತ್ತು. ಕೆಲ ತಿಂಗಳುಗಳ ಕಾಲ ಆತ ಜೈಲಿನಲ್ಲಿದ್ದ. ನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ. 

Rajesh Duggumane | news18
Updated:May 6, 2019, 4:46 PM IST
14 ವರ್ಷದ ಅಪ್ರಾಪ್ತೆಯ ಮದುವೆಯನ್ನು ಕಾನೂನು ಬಾಹಿರವಲ್ಲ ಎಂದ ಬಾಂಬೆ ಹೈಕೋರ್ಟ್​!
ಪ್ರಾತಿನಿಧಿಕ ಚಿತ್ರ
Rajesh Duggumane | news18
Updated: May 6, 2019, 4:46 PM IST
ನವದೆಹಲಿ (ಮೇ 6): 56 ವರ್ಷದ ವಕೀಲನೋರ್ವ ಅಪ್ರಾಪ್ತೆ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಈ ಮದುವೆ ಮಾನ್ಯ ಎಂದು ಕೋರ್ಟ್​ ಹೇಳಿದೆ.

2014ರಲ್ಲಿ ವಕೀಲನೋರ್ವ 14 ವರ್ಷದ ಬಾಲಕಿಯನ್ನು ವರಿಸಿದ್ದ. ಹಾಗಾಗಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ರದ್ದು ಮಾಡುವಂತೆ ವಕೀಲ ಕೋರ್ಟ್​​ ಮೆಟ್ಟಿಲೇರಿದ್ದ. ಇತ್ತೀಚೆಗೆ ಅಪ್ರಾಪ್ತೆ 18 ವರ್ಷಕ್ಕೆ ಕಾಲಿಟ್ಟಿದ್ದಳು. “ನಾನು ಪ್ರಾಪ್ತ ವಯಸ್ಸಿಗೆ ಕಾಲಿಟ್ಟಿದ್ದೇನೆ. ನಾನು ಹಾಗೂ ಪತಿ ವ್ಯಾಜ್ಯವನ್ನು ಬಗೆಹರಿಸಿಕೊಂಡಿದ್ದೇವೆ. ಗಂಡನೊಂದಿಗೆ ಬಾಳಲು ಇಷ್ಟಪಡುತ್ತೇನೆ. ಅವರ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಲು ಯಾವುದೇ ವಿರೋಧ ಇಲ್ಲ,” ಎಂದು ಆಕೆ ಹೈಕೋರ್ಟ್​ಗೆ ತಿಳಿಸಿದ್ದಾಳೆ.

“ಆಕೆ ಮದುವೆಯಾಗುವ ಸಂದರ್ಭದಲ್ಲಿ ಅಪ್ರಾಪ್ತೆಯಾಗಿದ್ದಳು. ಆದರೆ, ಈಗ ಅವಳು ಈಗ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಹೊಂದಿದ್ದಾಳೆ. ಈಗ ಆಕೆ ಗಂಡನ ಜೊತೆ ಬಾಳುವ ಇಚ್ಛೆ ವ್ಯಕ್ತಪಡಿಸಿದ್ದಾಳೆ,” ಎಂದು ಕೋರ್ಟ್​ ಹೇಳಿದೆ.

“ಒಂದೊಮ್ಮೆ ನಾವು ಈ ಪ್ರಕರಣವನ್ನು ಕೈಗೆತ್ತಿಕೊಂಡರೆ ಮುಂದೆ ಆಕೆಯ ಬದುಕಿಗೆ ತೊಂದರೆ ಉಂಟಾಗಬಹುದು. ಆಕೆ ಅಪ್ರಾಪ್ತ ವಯಸ್ಸಿನಲ್ಲೇ ಮದುವೆ ಆದ್ದರಿಂದ ಆಕೆಯನ್ನು ಯಾರೊಬ್ಬರೂ ಹೆಂಡತಿ ಎಂದು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ಆಕೆಯ ಹಿತದೃಷ್ಟಿಯಿಂದ ನಾವು ಈ ರೀತಿ ಆದೇಶ ಹೊರಡಿಸಿದ್ದೇವೆ,” ಎಂದು ಸುಪ್ರೀಂಕೋರ್ಟ್​ ಹೇಳಿದೆ. 10 ಎಕರೆ ಭೂಮಿ ಹಾಗೂ 7 ಲಕ್ಷ ರೂಪಾಯಿ ಎಫ್​ಡಿಯನ್ನು ಹೆಂಡತಿ ಹೆಸರಿಗೆ ಬರೆಯುವಂತೆ ಕೋರ್ಟ್​​ ಆಕೆಯ ಗಂಡನಿಗೆ ಆದೇಶಿಸಿದೆ.

ಅಪ್ರಾಪ್ತೆಯನ್ನು ವರಿಸಿದ ವ್ಯಕ್ತಿಯನ್ನು 2017ರಲ್ಲಿ ಬಂಧಿಸಲಾಗಿತ್ತು. ಕೆಲ ತಿಂಗಳುಗಳ ಕಾಲ ಆತ ಜೈಲಿನಲ್ಲಿದ್ದ. ನಂತರ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ.

ಇದನ್ನೂ ಓದಿ: CBSE 10th result 2019: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ; ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ..!
Loading...

First published:May 6, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...