CPM Head Office: ಕೇರಳದಲ್ಲಿ ಸಿಪಿಎಂ ಹೆಡ್ ಆಫೀಸ್​ಗೆ ಬಾಂಬ್! ಹೆಚ್ಚಿದ ಆತಂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಘಟನೆಯ ನಂತರ ಹಲವಾರು ಹಿರಿಯ ಸಿಪಿಐ(ಎಂ) ನಾಯಕರು ರಾಜ್ಯ ಕೇಂದ್ರ ಕಚೇರಿಗೆ ಧಾವಿಸಿದರು. ದಾಳಿಯ ವೇಳೆ ಹಲವು ಸಿಪಿಐ(ಎಂ) ಮುಖಂಡರು ಪಕ್ಷದ ಕಚೇರಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

  • Share this:

ತಿರುವನಂತಪುರಂ(ಜು.01): ಕೇರಳದ (Kerala) ಆಡಳಿತಾರೂಢ CPI(M)ನ ರಾಜ್ಯ ಪ್ರಧಾನ ಕಛೇರಿ ಎಕೆಜಿ ಸೆಂಟರ್‌ನಲ್ಲಿ (AKG Center) ಗುರುವಾರ ರಾತ್ರಿ 11.30ರ ಸುಮಾರಿಗೆ ಕಚ್ಚಾ ಬಾಂಬ್‌ (Crude Bomb) ಎಸೆಯಲಾಯಿತು. ಪಕ್ಷದ ಕಚೇರಿಯ ಮುಖ್ಯ ಗೇಟ್ ಮುಂದೆ ಬಾಂಬ್ (Bomb) ಸ್ಫೋಟಗೊಂಡಿದೆ. ಘಟನೆಯ ನಂತರ, ಹಲವಾರು ಹಿರಿಯ ಸಿಪಿಐ(ಎಂ) ನಾಯಕರು ರಾಜ್ಯ ಕೇಂದ್ರ ಕಚೇರಿಗೆ ಧಾವಿಸಿದರು. ದಾಳಿಯ ವೇಳೆ ಹಲವು ಸಿಪಿಐ(ಎಂ) ಮುಖಂಡರು ಪಕ್ಷದ ಕಚೇರಿ (Party Office) ಬಳಿಯ ಅಪಾರ್ಟ್‌ಮೆಂಟ್‌ನಲ್ಲಿದ್ದರು (Apartment) ಎಂದು ಮೂಲಗಳು ತಿಳಿಸಿವೆ.


ಟೂವೀಲ್ಹರ್​ನಲ್ಲಿ ಬಂದ ವ್ಯಕ್ತಿ ವಸ್ತು ಎಸೆದು ಹೋಗೋ ವಿಡಿಯೋ ಸೆರೆ


ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ವಸ್ತುವನ್ನು ಎಸೆದು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ವರದಿಯನ್ನು ಸಲ್ಲಿಸುವ ಸಮಯದಲ್ಲಿ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಇರಲಿಲ್ಲ. ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ.


ಘಟನೆಯ ಅರ್ಧ ಗಂಟೆಯಲ್ಲಿ ಪ್ರತಿಭಟನೆ


ಕೇರಳದಲ್ಲಿ ಕಾಂಗ್ರೆಸ್ ಹಿಂಸಾಚಾರವನ್ನು ಪ್ರೋತ್ಸಾಹಿಸುವ ನಾಯಕತ್ವವನ್ನು  ಹೊಂದಿದೆ. ನಾವು ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಸಿಪಿಐ(ಎಂ) ಪಾಲಿಟ್‌ಬ್ಯೂರೊ ಸದಸ್ಯ ಎ ವಿಜಯರಾಘವನ್ ಹೇಳಿದ್ದಾರೆ. ಘಟನೆಯ ಅರ್ಧ ಗಂಟೆಯ ನಂತರ ನಗರದಲ್ಲಿ ಸಿಪಿಐ(ಎಂ) ಮತ್ತು ಡಿವೈಎಫ್‌ಐ ಬೆಂಬಲಿಗರು ಪ್ರತಿಭಟನಾ ಮೆರವಣಿಗೆ ನಡೆಸಿದರು.


ಇದನ್ನೂ ಓದಿ: 'ಮಹಾ' ಸಿಎಂ ಆಗಿ ಏಕನಾಥ್​ ಶಿಂಧೆ; ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್​ ಪ್ರಮಾಣವಚನ


ಕಳೆದ ಒಂದು ತಿಂಗಳಿನಿಂದ ಸಿಪಿಐ(ಎಂ) ಮತ್ತು ಕಾಂಗ್ರೆಸ್‌ನ ಹಲವು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಕಾಂಗ್ರೆಸ್ ರಾಜ್ಯ ಕೇಂದ್ರ ಕಚೇರಿಯ ಮೇಲೂ ದಾಳಿ ನಡೆದಿದೆ. ಕಳೆದ ವಾರ, ಎಸ್‌ಎಫ್‌ಐ ಬೆಂಬಲಿಗರು ವಯನಾಡ್‌ನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಭದ್ರತೆಯನ್ನು ಬಲಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

top videos
    First published: