Shocking News: ಪುಲ್ವಾಮಾ ದಾಳಿಯಲ್ಲಿ ಬಳಸಿದ ಬಾಂಬ್​ಗಳಿಗೆ ಅಮೇಜಾನ್​ ಮೂಲಕ ರಾಸಾಯನಿಕ ಪೂರೈಕೆ!

Pulwama Attack: ಪುಲ್ವಾಮಾ ದಾಳಿ (Pulwama attack) ಪ್ರಕರಣದ ಆರೋಪಿಯು ಐಇಡಿ(IED), ಬ್ಯಾಟರಿ(Battery)ಗಳು ಮತ್ತು ಇತರ ಸ್ಫೋಟಕ ಪರಿಕರಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳನ್ನು ಪಡೆಯಲು ಅಮೆಜಾನ್ ಆನ್‌ಲೈನ್ ಶಾಪಿಂಗ್ ಖಾತೆ(Amazon Online Shopping account)ಯನ್ನು ಬಳಸಿದ್ದಾನೆ ಎಂದು ಎನ್‌ಐಎ ಪ್ರಾಥಮಿಕ ವಿಚಾರಣೆಯ ವೇಳೆ ಬಹಿರಂಗವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:


2019 ಫೆಬ್ರವರಿ 14 ರಂದು ಇಡೀ ದೇಶವೇ ಪ್ರೇಮಿಗಳ ದಿನಾಚರಣೆ(Valentine's Day)ಯನ್ನು ಆಚರಿಸುತ್ತಿತ್ತು. ಆದರೆ ಮಧ್ಯಾಹದ ಸಮಯಕ್ಕೆ ನಡೆಯಬಾರದ ದುರಂತವೊಂದು ನಡೆದು ಹೋಗಿತ್ತು. ರಕ್ಕಸ ಉಗ್ರರು(Terrorist) ಪುಲ್ವಾಮ(Pulwama) ದಲ್ಲಿ ಬಾಂಬ್​ ಸ್ಫೋಟಿ(Bomb Bklast)ಸಿದ್ದರು. ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರು ಹುತಾತ್ಮರಾಗಿದ್ದರು. ಆ ಕರಾಳ ದಿನವನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಇದೀಗ ಮತ್ತೊಂದು ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದು ಎಲ್ಲರಿಗೂ ಶಾಕ್​ ಆಗಿದೆ. ಅದು ಏನೆಂದರೆ ಇ-ಕಾಮರ್ಸ್​ ದೈತ್ಯ ಅಮೆಜಾನ್​(Amazon) ವಿರುದ್ಧ ಪುಲ್ವಾಮಾ ದಾಳಿ ವೇಳೆ (Pulwama attack) ಸ್ಫೋಟಕ್ಕೆ ಬಳಸಲಾಗುವ ರಾಸಾಯನಿಕಗಳನ್ನು ಸರಬರಾಜು ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ. ಪುಲ್ವಾಮಾ ದಾಳಿ (Pulwama attack) ಪ್ರಕರಣದ ಆರೋಪಿಯು ಐಇಡಿ(IED), ಬ್ಯಾಟರಿ(Battery)ಗಳು ಮತ್ತು ಇತರ ಸ್ಫೋಟಕ ಪರಿಕರಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳನ್ನು ಪಡೆಯಲು ಅಮೇಜಾನ್ ಆನ್‌ಲೈನ್ ಶಾಪಿಂಗ್ ಖಾತೆ(Amazon Online Shopping account)ಯನ್ನು ಬಳಸಿದ್ದಾನೆ ಎಂದು ಎನ್‌ಐಎ ಪ್ರಾಥಮಿಕ ವಿಚಾರಣೆಯ ವೇಳೆ ಬಹಿರಂಗವಾಗಿದೆ.ಅಮೇಜಾನ್​ನಲ್ಲಿ ರಾಸಾಯನಿಕ ಖರೀದಿ! 


2019ರಲ್ಲಿ 40 ಸಿಆರ್​ಪಿಎಫ್​ ಯೋಧರ ಮಾರಣಹೋಮಕ್ಕೆ ಕಾರಣವಾದ ಸುಧಾರಿತ ಸ್ಫೋಟಕ ಸಾಧನಗಳನ್ನು(IED) ತಯಾರಿಸಲು ಬಳಸುವ ರಾಸಾಯನಿಕಗಳನ್ನು ಇದೇ ಅಮೇಜಾನ್ ​ಮೂಲಕವೇ ಭಯೋತ್ಪಾದಕರು ಪಡೆದುಕೊಂಡಿದ್ದರು ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ(CAIT Offence against Amazon)ಆರೋಪಿಸಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಅಮೇಜಾನ್​ ಸಂಸ್ಥೆ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ.  ಪುಲ್ವಾಮಾ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಭಾರತದಲ್ಲಿ ನಿಷಿದ್ಧ ವಸ್ತುವಾಗಿರುವ ಅಮೋನಿಯಂ ನೈಟ್ರೇಟ್ ಅನ್ನು ಅಮೇಜಾನ್ ​ ಪೋರ್ಟಲ್​ ಮೂಲಕವೇ ಭಯೋತ್ಪಾದಕರು ಖರೀದಿಸಿದ್ದಾರೆ ಎಂದು ಎನ್​ಐಎ(NIA) ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಈ ಬಗ್ಗೆ ಮಾಧ್ಯಮಗಳು ಕೂಡ ಸುದ್ದಿ ಮಾಡಿತ್ತು ಎಂದು CAIT ತನ್ನ ವರದಿಯಲ್ಲಿ ತಿಳಿಸಿದೆ.


ಇದನ್ನು ಓದಿ : Winter Sessionಗೂ ಮುನ್ನ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗುವ ಸಾಧ್ಯತೆ

ಪರಿಣಾಮಕಾರಿ ನೀತಿಗಳನ್ನು ರೂಪಿಸಲಾಗಿಲ್ಲ

ಇ-ಕಾಮರ್ಸ್​ ಪೋರ್ಟಲ್​ಗಳ ಮೇಲೆ ಪರಿಣಾಮಕಾರಿ ನೀತಿಗಳನ್ನು ರೂಪಿಸಲಾಗಿಲ್ಲ. ನಿಷೇಧಿತ ವಸ್ತುಗಳನ್ನು ಇ-ಕಾಮರ್ಸ್​ ಪೋರ್ಟಲ್​ಗಳು ಪೂರೈಕೆ ಮಾಡುವುದು ಬೆಳಕಿಗೆ ಬಂದರೂ ಅಧಿಕಾರಿಗಳು ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳದೇ ಇರುವುದು ಇಂತಹ ಘಟನೆಗಳು ಮರುಕಳಿಸಲು ಕಾರಣವಾಗಿವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ತಿಳಿಸಿದೆ. 'ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿಯು ಐಇಡಿ, ಬ್ಯಾಟರಿಗಳು ಮತ್ತು ಇತರ ಸ್ಫೋಟಕ ಪರಿಕರಗಳನ್ನು ತಯಾರಿಸಲು ಬಳಸುವ ರಾಸಾಯನಿಕಗಳನ್ನು ಪಡೆಯಲು ಅಮೇಜಾನ್ ಆನ್‌ಲೈನ್ ಶಾಪಿಂಗ್ ಖಾತೆಯನ್ನು ಬಳಸಿದ್ದಾನೆ ಎಂದು ಎನ್‌ಐಎ ಪ್ರಾಥಮಿಕ ವಿಚಾರಣೆಯ ವೇಳೆ ಬಹಿರಂಗವಾಗಿದೆ.


ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯ

ಅಮೇಜಾನ್​ ಮೂಲಕ ಪಡೆದ ರಾಸಾಯನಿಕದಿಂದ ತಯಾರಿಸಿದ ಅಮೋನಿಯಂ ನೈಟ್ರೇಟ್, ನೈಟ್ರೋ-ಗ್ಲಿಸರಿನ್ ಇತ್ಯಾದಿಗಳನ್ನು ಪುಲ್ವಾಮಾ ದಾಳಿಯಲ್ಲಿ ಬಳಸಲಾಗಿತ್ತು' ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ ಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ದೂರಿದ್ದಾರೆ. ನಿಷಿದ್ಧ ವಸ್ತುಗಳ ಮಾರಾಟಕ್ಕೆ ವೇದಿಕೆಯಾಗಿರುವ ಅಮೆಜಾನ್ ಮತ್ತು ಅದರ ಅಧಿಕಾರಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಇದೇ ವೇಳೆ ಸಿಎಐಟಿ ಒತ್ತಾಯಿಸಿದೆ. ಇದರ ಜೊತೆ ನೆಟ್ಟಿಗರು ಕೂಡ ಆಕ್ರೋಶ ಹೊರಹಾಕಿದ್ದಾರೆ.


ಇದನ್ನು ಓದಿ : ಪಾಕ್​ ಯುದ್ಧ ವಿಮಾನ ಹೊಡೆದುರುಳಿಸಿದ್ದ ಗ್ರೂಪ್​ ಕ್ಯಾಪ್ಟನ್ ಅಭಿನಂದನ್​ ವರ್ಧಮಾನ್​ಗೆ ವೀರ ಚಕ್ರ ಪ್ರದಾನ

ಅಮೇಜಾನ್​ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪವೊಂದು ಈ ಹಿಂದೆ ಕೇಳಿಬಂದಿತ್ತು. ಭಾರತದಲ್ಲಿ ನಿಷೇಧವಿರುವ ವಸ್ತುಗಳು ಅಮೇಜಾನ್​ನಲ್ಲಿ ಸುಲಭವಾಗಿ ಸಿಗುತ್ತೆ. ಇದೀಗ ಪುಲ್ವಾಮ ದಾಳಿಗೆ ಬಳಸಲಾಗಿದ್ದ ಬಾಂಬ್​ಗಳಿಗೆ ಅಮೇಜಾನ್​ ಮೂಲಕ ರಾಸಾಯನಿಕ ಸಿಕ್ಕಿರುವ ವಿಚಾರ ಅಲ್ಲೋಲ, ಕಲ್ಲೋಲ ಸೃಷ್ಟಿಸಿದೆ.

Published by:Vasudeva M
First published: