Big Breaking: ಹಬ್ಬದ ದಿನವೇ ದೆಹಲಿಯ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಪತ್ತೆ.. ಬೆಚ್ಚಿಬಿತ್ತು ರಾಷ್ಟ್ರ ರಾಜಧಾನಿ!

ಇದ್ದಕಿದ್ದ ಹಾಗೇ ಪೊಲೀಸ(Police)ರ ವಾಹನಗಳು ಒಂದೇ ಸಮನೆ ಇಲ್ಲಿಗೆ ಬರಲು ಶುರುಮಾಡಿತ್ತು. ಇದನ್ನು ನೋಡಿದ ಗ್ರಾಹಕರು ಮೊದಲಿಗೆ ಸುಮ್ಮನಾಗಿದ್ದರು. ಯಾವಾಗ ಅಗ್ನಿಶಾಮಗ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಜೊತೆಗೆ ಬಾಂಬ್(Bomb) ನಿಷ್ಕ್ರಿಯ ದಳ ಸ್ಥಳಕ್ಕೆ ಬಂದಿದ ತಕ್ಷಣ ಅಲ್ಲಿ ನರೆದಿದ್ದ ಜನರು ಬೆಚ್ಚಿಬಿದ್ದರು.

ದೆಹಲಿಯ ಮಾರುಕಟ್ಟೆಯಲ್ಲಿ ಬಾಂಬ್​ ಪತ್ತೆ

ದೆಹಲಿಯ ಮಾರುಕಟ್ಟೆಯಲ್ಲಿ ಬಾಂಬ್​ ಪತ್ತೆ

  • Share this:
ಅಲ್ಲಿ ಎಲ್ಲ ಹಬ್ಬ(Festival)ದ ಸಂಭ್ರಮದಲ್ಲಿದ್ದರು. ಹೂ(Flower), ಹಣ್ಣು(Fruits) ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಆದರೆ, ಅಲ್ಲಿ ಒಂದು ವಸ್ತು ಪತ್ತೆಯಾಗಿರುವುದನ್ನು ಕಂಡು ಅಲ್ಲಿ ನೆರೆದಿದ್ದವರೆಲ್ಲ ಗಾಬರಿಗೊಂಡಿದ್ದರು. ಅಷ್ಟು ಜನರ ಖುಷಿಯನ್ನು ಈ ವಸ್ತು ಒಂದು ಸೆಂಕೆಂಡ್​ನಲ್ಲಿ ಕಸಿದುಕೊಂಡಿತ್ತು. ಎಲ್ಲರೂ ತಮ್ಮ ಪಾಡಿಗೆ ಖರೀದಿಯಲ್ಲಿ ತೊಡಗಿಕೊಂಡಿದ್ದರು. ಇದ್ದಕಿದ್ದ ಹಾಗೇ ಪೊಲೀಸ(Police)ರ ವಾಹನಗಳು ಒಂದೇ ಸಮನೆ ಇಲ್ಲಿಗೆ ಬರಲು ಶುರುಮಾಡಿತ್ತು. ಇದನ್ನು ನೋಡಿದ ಗ್ರಾಹಕರು ಮೊದಲಿಗೆ ಸುಮ್ಮನಾಗಿದ್ದರು. ಯಾವಾಗ ಅಗ್ನಿಶಾಮಗ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಜೊತೆಗೆ ಬಾಂಬ್(Bomb) ನಿಷ್ಕ್ರಿಯ ದಳ ಸ್ಥಳಕ್ಕೆ ಬಂದಿದ ತಕ್ಷಣ ಅಲ್ಲಿ ನರೆದಿದ್ದ ಜನರು ಬೆಚ್ಚಿಬಿದ್ದರು. ಯಾಕೆಂದರರ ದೆಹಲಿ(Delhi) ಹೂವಿನ ಮಾರ್ಕೆಟ್(Flower MArket)​ನಲ್ಲಿ ಬಾಂಬ್​ ಪತ್ತೆಯಾಗಿತ್ತು. ಈ ವಿಷಯ ಕೆಲವೇ ಸೆಕೆಂಡುಗಳಲ್ಲಿ ಇಡೀ ರಾಷ್ಟ್ರರಾಜಧಾನಿಗೆ ಹಬ್ಬಿತ್ತು. ಹೌದು, ಇಂದು ಮಕರ ಸಂಕ್ರಾಂತಿಯಾದ್ದರಿಂದ ದೆಹಲಿ ಮಾರ್ಕೆಟ್​ನಲ್ಲಿ ಸಾಕಷ್ಟು ಜನರು ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಈ ವೇಳೆ ಬಾಂಬ್ ಇರಿಸಲಾಗಿರುವ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಜೊತೆಗೆ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ನಿಯೋಜಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ ಬಾಂಬ್ ಸ್ಫೋಟಿಸುವಲ್ಲಿ ಯಶಸ್ವಿಯಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ(Rakesh Astana) ತಿಳಿಸಿದ್ದಾರೆ.


ಗಾಜಿಪುರದ ಮಾರ್ಕೆಟ್​ನಲ್ಲಿ ಪತ್ತೆಯಾದ ಬಾಂಬ್​!

ರಾಷ್ಟ್ರ ರಾಜಧಾನಿ ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರ್ಕೆಟ್​ನಲ್ಲಿ ಇಂದು ಅನುಮಾನಾಸ್ಪದವಾದ ಚೀಲವೊಂದು ಪತ್ತೆಯಾಗಿದ್ದು, ಆ ಚೀಲದಲ್ಲಿ ಬಾಂಬ್ ಇರಿಸಲಾಗಿತ್ತು. ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಇರಿಸಲಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಐಇಡಿ ಇರಿಸಲಾಗಿದ್ದ ಬ್ಯಾಗನ್ನು ವಶಕ್ಕೆ ಪಡೆದಿದ್ದರು. ಅಲ್ಲಿ ನೆರೆದಿದ್ದವರನ್ನೆಲ್ಲ ದೂರ ಕಳಸಿ, ಬಾಂಬ್​ ನಿಷ್ಕ್ರಿಯಗೊಳಿಸುವ ಕೆಲಸ ನಡೀತು. ಗಾಜಿಪುರ ಮಂಡಿಯಲ್ಲಿನ ಪತ್ತೆಯಾದ ಬಾಂಬ್​ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಎಂದು ತಿಳಿದುಬಂದಿದೆ. ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ತೆರೆದ ಮೈದಾನದಲ್ಲಿ ಬಾಂಬ್​ ಸ್ಫೋಟ!

ಹಬ್ಬದ ಸಂಭ್ರಮದಲ್ಲಿದ್ದವರಿಗೆ ಈ ಬಾಂಬ್​ ವಿಚಾರ ಶಾಕ್​ ನೀಡಿತ್ತು. ಮಂಡಿಯಲ್ಲಿ ಪತ್ತೆಯಾದ ಬಾಂಬ್​ ಇದ್ದ ಚೀಲವನ್ನು ನೆಲದಲ್ಲಿ ಗುಂಡಿ ತೋಡಿ 8 ಅಡಿಗಳಷ್ಟು ಆಳದಲ್ಲಿ ಹೂತು ಹಾಕಲಾಯಿತು. ಇನ್ನೂ ಬಾಂಬ್​ ಪತ್ತೆಯಾದ ಪ್ರದೇಶವನ್ನು ಎನ್​ಎಸ್​ಜಿ ತಂಡವು  ಸುತ್ತುವರೆದಿದೆ. ಮತ್ತೆ ಎಲ್ಲಾದರೂ ಬಾಂಬ್​ ಇಟ್ಟಿರಬಹುದಾ ಎಂದು ಹುಡುಕುತ್ತಿದೆ. . ಮೂಲಗಳ ಪ್ರಕಾರ, ಐಇಡಿಯನ್ನು ತೆರೆದ ಮೈದಾನದಲ್ಲಿ ಸ್ಫೋಟಿಸಲಾಗಿದೆ. ಆ ಚೀಲವನ್ನು ಮಾತ್ರ ಹೂತು ಹಾಕಲಾಗಿದೆ. ಆದರೆ, ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ..
Published by:Vasudeva M
First published: