ಲಕ್ನೋ ನ್ಯಾಯಾಲಯದ ಆವರಣದಲ್ಲಿ ಸಜೀವ ಬಾಂಬ್​ ಸ್ಫೋಟ; ಅನೇಕ ವಕೀಲರಿಗೆ ಗಾಯ

ಇಲ್ಲಿನ ಜಿಲ್ಲಾ ನ್ಯಾಯಾಲಯದ ವಕೀಲ ಸಂಜೀವ್​ ಲೋದಿ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಲೋದಿ ಪಾರಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಉತ್ತರ ಪ್ರದೇಶ (ಫೆ.13): ವಕೀಲರನ್ನು ಗುರಿಯಾಗಿಸಿಕೊಂಡು ಲಕ್ನೋ ನ್ಯಾಯಾಲಯದಲ್ಲಿ ಸಜೀವ ಬಾಂಬ್​ ಸ್ಪೋಟಿಸಲಾಗಿದ್ದು, ಘಟನೆಯಲ್ಲಿ ಅನೇಕ ವಕೀಲರು ಗಾಯಗೊಂಡಿದ್ದಾರೆ.

ಬಾಂಬ್​ ಸ್ಪೋಟ ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗಾಯಗೊಂಡ ವಕೀಲರನ್ನು ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ವಸಿರ್ಗಂಜ್​ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದರು. ಈ ವೇಳೆ ಮೂರು ಸಜೀವ ಬಾಂಬ್​ ಪತ್ತೆಯಾಗಿದೆ.

ಇದನ್ನು ಓದಿ: ಭೀಕರ ರಸ್ತೆ ಅಪಘಾತಕ್ಕೆ 14 ಜನರು ಬಲಿ!; 31 ಮಂದಿಗೆ ಗಂಭೀರ ಗಾಯ

ಇಲ್ಲಿನ ಜಿಲ್ಲಾ ನ್ಯಾಯಾಲಯದ ವಕೀಲ ಸಂಜೀವ್​ ಲೋದಿ ಅವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಕೂದಲೆಳೆ ಅಂತರದಲ್ಲಿ ಲೋದಿ ಪಾರಾಗಿದ್ದಾರೆ.

ಬಾಂಬ್​ ಸ್ಪೋಟಿಸಿದ ವ್ಯಕ್ತಿಯನ್ನು ಜೀತು ಯಾದವ್​ ಎಂದು ಗುರುತಿಸಲಾಗಿದ್ದು, ಈತ ಕಚ್ಛಾ ಸಾಮಾಗ್ರಿ ಬಳಸಿ ಈ ಸ್ಪೋಟ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
First published: