ಆರ್​ಎಸ್​ಎಸ್​ ಕಾರ್ಯಕರ್ತನ ಮನೆ ಮುಂದೆ ಬಾಂಬ್​ ಸ್ಫೋಟ; ಇಬ್ಬರು ಗಾಯಾಳು

ಆರ್​ಎಸ್​ಎಸ್​ ಕಾರ್ಯಕರ್ತ ಶಿಬು ಎಂಬುವವರ ಮನೆ ಮುಂದೆಯೇ ಈ ಘಟನೆ ನಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇರಳದಲ್ಲಿ ಆರ್​ಎಸ್​ಎಸ್​ ಮತ್ತು ಸಿಪಿಐಎಂ ನಡುವಿನ ಕಲಹಗಳು ತೀರಾ ಸಾಮಾನ್ಯ ಮತ್ತು ಅದು ತಾರಕಕ್ಕೇರಿರುವ ಸಂದರ್ಭಗಳೂ ಸಾಕಷ್ಟಿವೆ


Updated:March 23, 2019, 5:25 PM IST
ಆರ್​ಎಸ್​ಎಸ್​ ಕಾರ್ಯಕರ್ತನ ಮನೆ ಮುಂದೆ ಬಾಂಬ್​ ಸ್ಫೋಟ; ಇಬ್ಬರು ಗಾಯಾಳು
ಬಾಂಬ್​ ಬ್ಲಾಸ್ಟ್​ ಸಾಂದರ್ಭಿಕ ಚಿತ್ರ

Updated: March 23, 2019, 5:25 PM IST
ಕಣ್ಣೂರು: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ದೇಶಾದ್ಯಂತ ಗರಿಗೆದರಿವೆ. ಅದರಲ್ಲೂ ಕೇರಳ ರಾಜಕೀಯ ಹಲವು ಸೈದ್ಧಾಂತಿಕ ಸಂಘರ್ಷಗಳಿಗೆ ವೇದಿಕೆಯಾಗಿದೆ. ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್​ ಗಾಂಧಿ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಬೆಳಗ್ಗೆಯಿಂದ ಸುದ್ದಿಯಲ್ಲಿದ್ದ ಕೇರಳ ಈಗ ಮತ್ತೊಂದು ಮಜಲಿಗೆ ತಿರುಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಕಾರ್ಯಕರ್ತನೊಬ್ಬನ ಮನೆಯ ಮುಂದೆ ಬಾಂಬ್​ ಸ್ಫೋಟಗೊಂಡಿದ್ದು ಇಬ್ಬರು ಮಕ್ಕಳಿಗೆ ಗಾಯಗಳಾಗಿವೆ.

ಕಣ್ಣೂರಿನ ತಲಿಪರಂಬ ರಸ್ತೆಯ ಮಧ್ಯದಲ್ಲೇ ಬಾಂಬ್​ ಸ್ಫೋಟವಾಗಿದ್ದು, ದಾರಿಯಲ್ಲಿ ಹೋಗುತ್ತಿದ್ದ ಎಮ್​.ಎಸ್​. ಗೋಕುಲಗಗ (8) ಮತ್ತು ಕಂಚಿನ್​ ಕುಮಾರ್​ (12) ಎಂಬ ಮಕ್ಕಳಿಗೆ ಗಂಭೀರ ಗಾಯಗಳಾಗಿವೆ. ರಸ್ತೆಯ ಪಕ್ಕದಲ್ಲೇ ಆರ್​ಎಸ್​ಎಸ್​ ಕಾರ್ಯಕರ್ತ ಶಿಬು ಎಂಬುವವರ ಮನೆ ಮುಂದೆಯೇ ಈ ಘಟನೆ ನಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇರಳದಲ್ಲಿ ಆರ್​ಎಸ್​ಎಸ್​ ಮತ್ತು ಸಿಪಿಐಎಂ ನಡುವಿನ ಕಲಹಗಳು ತೀರಾ ಸಾಮಾನ್ಯ ಮತ್ತು ಅದು ತಾರಕಕ್ಕೇರಿರುವ ಸಂದರ್ಭಗಳೂ ಸಾಕಷ್ಟಿವೆ.

ಇಬ್ಬರೂ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಪೊಲಿಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

First published:March 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ