ಮುಂಬೈ ದಾಳಿ ಮಾಸ್ಟರ್​ ಮೈಂಡ್​ ಹಫೀಸ್​​ ಸಯೀದ್ ಲಾಹೋರ್​ ಮನೆ ಬಳಿ ಬಾಂಬ್​ ಸ್ಪೋಟ​

ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತದ ಮಾಸ್ಟರ್​ ಮೈಂಡ್​ ಆಗಿದ್ದ ಜಮಾತ್​-ಉದ್​-ದಾವಾ ಮುಖ್ಯಸ್ಥ ಹಫೀಜ್​ ಸಯೀದ್​ ಅವರ ನಿವಾಸದ ಬಳಿ ಈ ಬಾಂಬ್​ ಸ್ಪೋಟ ಪ್ರಕರಣ ನಡೆದಿದೆ

ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತದ ಮಾಸ್ಟರ್​ ಮೈಂಡ್​ ಆಗಿದ್ದ ಜಮಾತ್​-ಉದ್​-ದಾವಾ ಮುಖ್ಯಸ್ಥ ಹಫೀಜ್​ ಸಯೀದ್​ ಅವರ ನಿವಾಸದ ಬಳಿ ಈ ಬಾಂಬ್​ ಸ್ಪೋಟ ಪ್ರಕರಣ ನಡೆದಿದೆ

ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತದ ಮಾಸ್ಟರ್​ ಮೈಂಡ್​ ಆಗಿದ್ದ ಜಮಾತ್​-ಉದ್​-ದಾವಾ ಮುಖ್ಯಸ್ಥ ಹಫೀಜ್​ ಸಯೀದ್​ ಅವರ ನಿವಾಸದ ಬಳಿ ಈ ಬಾಂಬ್​ ಸ್ಪೋಟ ಪ್ರಕರಣ ನಡೆದಿದೆ

 • Share this:
  ಪಾಕಿಸ್ತಾನದ ಲಾಹೋರ್​ನಲ್ಲಿ ಇಂದು ಪ್ರಬಲ ಬಾಂಬ್​ ಸ್ಪೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮುಂಬೈ ಮೇಲೆ ನಡೆದ ಭಯೋತ್ಪಾದಕ ಕೃತದ ಮಾಸ್ಟರ್​ ಮೈಂಡ್​ ಆಗಿದ್ದ ಜಮಾತ್​-ಉದ್​-ದಾವಾ ಮುಖ್ಯಸ್ಥ ಹಫೀಜ್​ ಸಯೀದ್​ ಅವರ ನಿವಾಸದ ಬಳಿ ಈ ಬಾಂಬ್​ ಸ್ಪೋಟ ಪ್ರಕರಣ ನಡೆದಿದೆ.  ಲಾಹೋರ್​ನ ಜೋಹರ್​ ಪಟ್ಟಣದ ಬಳಿಕ ಈ ಸ್ಪೋಟ ಸಂಭವಿಸಿದ್ದು, ತಕ್ಷಣಕ್ಕೆ ಪೊಲೀಸರು ಮತ್ತು ಬಾಂಬ್​ ನಿಷ್ಕ್ರಿಯ ದಳ ಅಧಿಕಾರಿಗಳು ಆಗಮಿಸಿ, ರಕ್ಷಣಾ ಕಾರ್ಯ ನಡೆಸಿದರು. ಘಟನೆಯಲ್ಲಿ ಗಾಯಗೊಂಡರವನ್ನು ಲಾಹೋರ್​ನ ಜಿನ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ 

  ಘಟನೆ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿ ಪ್ರಕಾರ, ಬಾಂಬ್​ ಸ್ಪೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳ ಕಿಟಕಿ ಗಾಜು ಪುಡಿಯಾಗಿವೆ. ಅಲ್ಲದೇ ಕೆಲ ಕಟ್ಟಡಗಳು ಕೂಡ ಹಾನಿಯಾಗಿವೆ.

  ಅಪರಿಚಿತ ವ್ಯಕ್ತಿಯೊಬ್ಬ ಸ್ಪೋಟ ಸಂಭವಿಸಿದ ಮನೆಯ ಮುಂದೆ ಮೋಟರ್​ ಸೈಕಲ್​ ನಿಲ್ಲಿಸಿದ್ದ, ಅದರಲ್ಲಿ ಬಾಂಬ್​ ಇಟ್ಟಿದ್ದ ಸಾಧ್ಯತೆ ಇದೆ ಎನ್ನಲಾಗಿದೆ ಘಟನೆ ಕುರಿತು ಪೊಲೀಸರು ತನಿಖೆ ಮುಂದಾಗಿದ್ದಾರೆ.  ಘಟನೆ ಕುರಿತ ಅನೇಕ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

  ಘಟನೆ ಕುರಿತು ಖಂಡಿಸಿರುವ ಪಂಜಾಬ್​ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್​ ಬುಜ್ಧಾರ್​, ಸ್ಪೋಟ ನಡೆಸಿದ ಆರೋಪಿಗಳು ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ‘ಟ್ವೀಟ್​ ಮೂಲಕ ಈ ಕೃತ್ಯದ ಹಿಂದಿನ ಕೈಗಳನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ತಿಳಿಸಿದ್ದಾರೆ.

  ಇದನ್ನು ಓದಿ: ರಾಹುಲ್ ಗಾಂಧಿಯವರ ವಿಡಿಯೋದ ಹಿನ್ನೆಲೆಯಲ್ಲಿರುವ ಈ ಫೋಟೋ ತೆಗೆದವರು ಯಾರು ಗೊತ್ತಾ..?

  ಘಟನೆ ಹಿನ್ನಲೆ ಜಿನ್ನಾ ಆಸ್ಪತ್ರೆಯಲ್ಲಿ ತುತ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಗಾಯಗೊಂಡ ಜನರನ್ನು ಸ್ಥಳೀಯ ಆಟೋ, ಕಾರುಗಳ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಸಲಾಗುತ್ತಿದೆ.

  ಇತ್ತೀಚೆಗೆ ಪಾಕಿಸ್ತಾನ ನ್ಯಾಯಾಲಯ ಉಗ್ರಗಾಮಿ ಸಂಘಟನೆಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಹಫೀಸ್​ ಸಯೋದ್​ಗೆ 15 ವರ್ಷಗಳ ಜೈಲು ಹಾಗೂ 2 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ಒದಗಿಸುತ್ತಿದ್ದ ಆರೋಪದಡಿ ಲಾಹೋರ್​ನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ಶಿಕ್ಷೆ ನೀಡಿತ್ತು.
  Published by:Seema R
  First published: