Bomb Blast: ಅಫ್ಘಾನಿಸ್ತಾನದ ಮಸೀದಿ ಮೇಲೆ ಬಾಂಬ್ ದಾಳಿ, ಮೃತರ ಸಂಖ್ಯೆ 18ಕ್ಕೆ ಏರಿಕೆ!

ನಿನ್ನೆ ಮಧ್ಯಾಹ್ನ 12.45ರ ಸುಮಾರಿಗೆ ಮಸೀದಿ ಮೇಲೆ ಉಗ್ರರು ಏಕಾಏಕಿ ದಾಳಿ ಮಾಡಿದ್ದಾರೆ. ಆತ್ಮಹತ್ಯಾ ಬಾಂಬರ್‌ಗಳಲ್ಲಿ ಒಬ್ಬನು ತನ್ನ ಕೈಗಳನ್ನು ಚುಂಬಿಸುವಾಗ ತನ್ನನ್ನು ತಾನು ಸ್ಫೋಟಿಸಿಕೊಂಡನು.

ಬಾಂಬ್ ಬ್ಲಾಸ್ಟ್‌ನ ತೀವ್ರತೆ

ಬಾಂಬ್ ಬ್ಲಾಸ್ಟ್‌ನ ತೀವ್ರತೆ

  • Share this:
ಕಾಬೂಲ್, ಅಫ್ಘಾನಿಸ್ತಾನ: ಮತ್ತೊಂದು ಭೀಕರ ಬಾಂಬ್ ಸ್ಫೋಟಕ್ಕೆ (Bomb Blast) ಅಘ್ಫಾನಿಸ್ತಾನ (Afghanistan) ಸಾಕ್ಷಿಯಾಗಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ಹೆರಾತ್ ನಗರದ (Herat city) ಗುಜರ್ಗಾ ಮಸೀದಿಯಲ್ಲಿ (Gujarga Mosque) ಶುಕ್ರವಾರದ ಪ್ರಾರ್ಥನೆ (Friday Prayer) ವೇಳೆ ಉಗ್ರರು (Terrorist) ಭೀಕರವಾಗಿ ದಾಳಿ (Attack) ಮಾಡಿದ್ದಾರೆ. ಪ್ರಾರ್ಥನೆಗೆ ಬಂದಿದ್ದ ಜನರ ಮೇಲೆ ಉಗ್ರರು ಬಾಂಬ್ (Bomb) ದಾಳಿ ನಡೆಸಿದ್ದಾರೆ. ಪರಿಣಾಮ ಅಪಾರ ಪ್ರಮಾಣದ ಸಾವು, ನೋವು ಸಂಭವಿಸಿದೆ. ಇದೀಗ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ (Dead) ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಇನ್ನು ಈ ಭೀಕರ ಬಾಂಬ್​​ ಸ್ಫೋಟಕ್ಕೆ ಕಾರಣರಾದವರನ್ನು ತಾಲಿಬಾನ್ ಸರ್ಕಾರ (Taliban Government) ಉಗ್ರವಾಗಿ ಶಿಕ್ಷೆ ಕೊಡಲಿದೆ ಎಂದು ತಾಲಿಬಾನ್​ ವಕ್ತಾರ ಮುಜಾಹಿದ್ ಘೋಷಣೆ ಮಾಡಿದ್ದಾರೆ. 

ಶುಕ್ರವಾರದ ಪ್ರಾರ್ಥನೆ ವೇಳೆ ಉಗ್ರರಿಂದ ಬಾಂಬ್ ದಾಳಿ

ಅಫ್ಘಾನಿಸ್ತಾನದ ಇತಿಹಾಸ ಪ್ರಸಿದ್ಧ ಹೆರಾತ್ ನಗರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಗೈದಿದ್ದಾರೆ. ಇಲ್ಲಿನ ಗುಜರ್ಗಾ ಮಸೀದಿಯಲ್ಲಿ ನಿನ್ನೆ ಶುಕ್ರವಾರದ ಪ್ರಾರ್ಥನೆ ವೇಳೆ ಉಗ್ರರು ಭೀಕರವಾಗಿ ದಾಳಿ ಮಾಡಿದ್ದಾರೆ. ಪ್ರಾರ್ಥನೆಗೆ ಬಂದಿದ್ದ ಜನರ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ.

ಹೆರಾತ್ ನಗರದ ಗುಜರ್ಗಾ ಮಸೀದಿ


ನಿನ್ನೆ ಮಧ್ಯಾಹ್ನ 12.45ರ ಸುಮಾರಿಗೆ ಉಗ್ರರ ದಾಳಿ

ನಿನ್ನೆ ಮಧ್ಯಾಹ್ನ 12.45ರ ಸುಮಾರಿಗೆ ಮಸೀದಿ ಮೇಲೆ ಉಗ್ರರು ಏಕಾಏಕಿ ದಾಳಿ ಮಾಡಿದ್ದಾರೆ. ಆತ್ಮಹತ್ಯಾ ಬಾಂಬರ್‌ಗಳಲ್ಲಿ ಒಬ್ಬನು ತನ್ನ ಕೈಗಳನ್ನು ಚುಂಬಿಸುವಾಗ ತನ್ನನ್ನು ತಾನು ಸ್ಫೋಟಿಸಿಕೊಂಡನು. ಇನ್ನು ಮಸೀದಿಯ ಇಮಾಮ್ ಮುಜಿಬ್ ರಹಮಾನ್ ಅನ್ಸಾರಿ ಅವರ ಕೆಲವು ಗಾರ್ಡ್‌ಗಳು ಮತ್ತು ನಾಗರಿಕರು ಮಸೀದಿಯ ಕಡೆಗೆ ಹೋಗುವ ದಾರಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಮಸೀದಿಯ ಆವರಣದ ಸುತ್ತಲೂ ರಕ್ತಸಿಕ್ತ ದೇಹಗಳು ಹರಡಿಕೊಂಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Taliban Rules: ಅಫ್ಘನ್ ಯುವತಿಯರು ವಿದೇಶಕ್ಕೆ ಹೋಗುವಂತಿಲ್ಲ! ತಾಲಿಬಾನ್ ಸರ್ಕಾರದ ಹೊಸ ರೂಲ್ಸ್

ಸಾವಿನ ಸಂಖ್ಯೆ 20ಕ್ಕೆ ಏರಿಕೆ, 21ಕ್ಕೂ ಹೆಚ್ಚು ಮಂದಿಗೆ ಗಾಯ

ಮಸೀದಿ ಮೇಲೆ ನಡೆದ ದಾಳಿಯಿಂದ ಅಪಾರ ಪ್ರಮಾಣದ ಸಾವು, ನೋವು ಸಂಭವಿಸಿದೆ. 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಲವರು ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಇದೀಗ ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಇನ್ನು ಘಟನೆಯಲ್ಲಿ 23ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ಇವರ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಅಂತ ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಬಾಂಬ್ ದಾಳಿಗೆ ಒಳಗಾದ ಮಸೀದಿ


ಉಗ್ರರಿಗೆ ಎಚ್ಚರಿಕೆ ನೀಡಿದ ತಾಲಿಬಾನ್ ಸರ್ಕಾರ

ಇನ್ನು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಘಟನೆಯನ್ನು ಖಂಡಿಸಿದ್ದು, ಧರ್ಮ ಶತ್ರುಗಳು ನಡೆಸಿದ ಹೇಡಿತನದ ದಾಳಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭೀಕರ ಬಾಂಬ್​​ ಸ್ಫೋಟಕ್ಕೆ ಕಾರಣರಾದವರನ್ನು ತಾಲಿಬಾನ್ ಸರ್ಕಾರ ಉಗ್ರವಾಗಿ ಶಿಕ್ಷೆ ಕೊಡಲಿದೆ ಎಂದು ತಾಲಿಬಾನ್​ ವಕ್ತಾರ ಮುಜಾಹಿದ್ ಘೋಷಣೆ ಮಾಡಿದ್ದಾರೆ.

ಭೀಕರ ಬಾಂಬ್ ದಾಳಿ ನಡೆಸಿದ್ದು ಯಾರು?

ಇದುವರೆಗೂ ಈ ಭೀಕರ ಬಾಂಬ್ ಸ್ಫೋಟ ನಡೆಸಿದ ಉಗ್ರ ಸಂಘಟನೆ ಯಾವುದು ಎಂದು ಪತ್ತೆಯಾಗಿಲ್ಲ. ಯಾವೊಂದು ಉಗ್ರ ಸಂಘಟನೆ ಕೂಡ  ಈ ವಿದ್ವಂಸಕ ಕೃತ್ಯದ ಜವಾಬ್ದಾರಿ ಹೊತ್ತಿಲ್ಲ. ಆದರೆ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಭಯೋತ್ಪಾದಕ ಗುಂಪಿನ ವಿರುದ್ಧ ತಾಲಿಬಾನ್​ ಸರ್ಕಾರ ಹೋರಾಡುತ್ತಿದೆ. ಹೀಗಾಗಿ ಇದೇ ಸಂಘಟನೆ ಈ ಭಯೋತ್ಪಾದಕ ಕೃತ್ಯ ನಡೆಸಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: Explained: ಅಲ್ ಖೈದಾ ಮುಖ್ಯಸ್ಥನ ಹತ್ಯೆ ಹೇಗಾಯ್ತು? ಅಮೆರಿಕಾ ಇವನನ್ನೇ ಏಕೆ ಟಾರ್ಗೆಟ್ ಮಾಡಿತ್ತು?

ಅಫ್ಘನ್‌ನಲ್ಲಿ ಪದೇ ಪದೇ ಉಗ್ರರ ದಾಳಿ

ಕಳೆದ ತಿಂಗಳು ರಾಜಧಾನಿ ಕಾಬೂಲ್‌ನಲ್ಲಿ ಹಲವಾರು ಸ್ಫೋಟಗಳು ವರದಿಯಾಗಿದ್ದು, ಹತ್ತಾರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿವೆ. ರಹೀಮುಲ್ಲಾ ಹಕ್ಕಾನಿ ಕಾಬೂಲ್‌ನ ಮದರಸಾದಲ್ಲಿ ಆತ್ಮಹತ್ಯಾ ದಾಳಿಯಲ್ಲಿ ಸಾವನ್ನಪ್ಪಿದ ನಂತರ, ಒಂದು ತಿಂಗಳೊಳಗೆ ನಡೆದ ಭೀಕರ ದಾಳಿ ಇದಾಗಿದೆ. ಈ ಎಲ್ಲ ಸ್ಫೋಟಗಳ ಬೆನ್ನಲ್ಲೇ ಗುಜರ್ಗಾದಲ್ಲಿ ಭೀಕರ ಸ್ಫೋಟ ಸಂಭವಿಸಿದೆ.
Published by:Annappa Achari
First published: