ಕಾಬೂಲ್​ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 4 ಜನ ಸಾವು

ಕಾಬೂಲ್​ನಲ್ಲಿರುವ ಶೇರ್​ ಶಾಹ್ ಸೂರಿ ಮಸೀದಿಯಲ್ಲಿನ ಬಾಂಬ್ ದಾಳಿಗೆ ಯಾರು ಕಾರಣ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾಬೂಲ್ (ಜೂ. 12): ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಇಂದು ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿರುವಾಗ ಬಾಂಬ್ ಸ್ಫೋಟಗೊಂಡಿದೆ. ಈ ದುರಂತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನದ ಸಚಿವರು ಮಾಹಿತಿ ನೀಡಿದ್ದಾರೆ.

ಕಾಬೂಲ್​ನಲ್ಲಿರುವ ಶೇರ್​ ಶಾಹ್ ಸೂರಿ ಮಸೀದಿಯಲ್ಲಿ ಶುಕ್ರವಾರವಾದ ಇಂದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟಗೊಂಡಿದ್ದು, ಮಸೀದಿಯ ಮುಖ್ಯಸ್ಥ ಅಜೀಜುಲ್ಲಾ ಮೊಫ್ಲೆಕ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಫಸ್ಟ್​ ನೈಟ್​ನಲ್ಲೇ ಗಂಡನಿಂದ ಹೆಂಡತಿಯ ಬರ್ಬರ ಹತ್ಯೆ!ಮಸೀದಿಯಲ್ಲಿನ ಬಾಂಬ್ ದಾಳಿಗೆ ಯಾರು ಕಾರಣ ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಘಟನೆ ನಡೆದ ಕೂಡಲೆ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಕಳೆದ ತಿಂಗಳು ಕೂಡ ಈ ಮಸೀದಿಯಲ್ಲಿ ದಾಳಿ ನಡೆದಿತ್ತು. ಆ ದಾಳಿಯ ಹಿಂದೆ ಇಸ್ಲಾಮಿಕ್ ಸ್ಟೇಟ್ ಗ್ರೂಪ್​ ಕೈವಾಡವಿದೆ ಎನ್ನಲಾಗಿತ್ತು.
First published: