ಬಾಲಿವುಡ್​ನಲ್ಲಿ ಡ್ಯಾನ್ಸ್ ಕಡಿಮೆ; ಡೊನಾಲ್ಡ್ ಟ್ರಂಪ್ ಮಗ ಹೀಗೆ ಹೇಳಿದ್ದೇಕೆ?

ಅಮೆರಿಕ ಈ ಸ್ಥಾನದಲ್ಲೇ ಮುಂದುವರಿಯಬೇಕು. ವಿಶ್ವವನ್ನು ಸುರಕ್ಷಿತವಾಗಿಡಲು ಭಾರತದಂತಹ ಮಿತ್ರ ರಾಷ್ಟ್ರಗಳೊಂದಿಗೆ ಅಮೆರಿಕ ಸಂಬಂಧ ಮುಂದುವರಿಸಬೇಕು ಎಂದರು ಟ್ರಂಪ್​ ಜೆಆರ್​.

news18-kannada
Updated:December 15, 2019, 10:05 AM IST
ಬಾಲಿವುಡ್​ನಲ್ಲಿ ಡ್ಯಾನ್ಸ್ ಕಡಿಮೆ; ಡೊನಾಲ್ಡ್ ಟ್ರಂಪ್ ಮಗ ಹೀಗೆ ಹೇಳಿದ್ದೇಕೆ?
ಟ್ರಂಪ್​ ಜೆಆರ್​
  • Share this:
ನ್ಯೂಯಾರ್ಕ್ (ಡಿ.15)​​: ಅಮೆರಿಕ ಅಧ್ಯಕ್ಷ ಡೊನಲ್ಡ್​ ಟ್ರಂಪ್​ ಅಧಿಕಾರದ ಅವಧಿ ಪೂರ್ಣಗೊಳ್ಳುತ್ತ ಬಂದಿದೆ. ಹೊಸ ವರ್ಷದ ಆರಂಭದಲ್ಲಿ ಅಮೆರಿಕದಲ್ಲಿ ಚುನಾವಣೆ ಕೂಡ ನಡೆಯಲಿದೆ. ಅದಕ್ಕೂ ಮೊದಲು ಟ್ರಂಪ್​ ಮಗ ಡೊನಾಲ್ಡ್​ ಟ್ರಂಪ್​ ಜೆಆರ್​ ಮಾತನಾಡಿದ್ದು, ಬಾಲಿವುಡ್​ನಲ್ಲಿ ಡ್ಯಾನ್ಸ್​ ಕಡಿಮೆ ಎಂದಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ? ಅದಕ್ಕೆ ಇಲ್ಲಿದೆ ಉತ್ತರ.

“ಅಮೆರಿಕ ಈ ಸ್ಥಾನದಲ್ಲೇ ಮುಂದುವರಿಯಬೇಕು. ವಿಶ್ವವನ್ನು ಸುರಕ್ಷಿತವಾಗಿಡಲು ಭಾರತದಂತಹ ಮಿತ್ರ ರಾಷ್ಟ್ರಗಳೊಂದಿಗೆ ಅಮೆರಿಕ ಸಂಬಂಧ ಮುಂದುವರಿಸಬೇಕು,” ಎಂದರು ಟ್ರಂಪ್​ ಜೆಆರ್​.

ಐದು ವರ್ಷದಲ್ಲಿ ತಂದೆ ನಡೆದು ಬಂದ ಹಾದಿಯನ್ನು ವಿವರಿಸಿದ ಅವರು, “ನಮಗಿನ್ನೂ ಬಹಳ ವರ್ಷಗಳಿವೆ. ಮುಂಬರುವ ವರ್ಷಗಳು ತುಂಬಾ ಮರನಂಜನಾತ್ಮಕವಾಗಿರುತ್ತದೆ. ನನ್ನ ತಂದೆ ಈ ಭರವಸೆ ಈಡೇರಿಸುತ್ತಾರೆ. ಇದು ನಿಜಕ್ಕೂ ಬಾಲಿವುಡ್​ನಂತೆ ಇರಲಿದೆ. ಅಲ್ಲಿ ಡಾನ್ಸ್​ ಕಡಿಮೆ, ಆದರೆ ಫನ್​ ಜಾಸ್ತಿ,” ಎಂದರು.

2020ರ ವೇಳೆಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಪದವಿಗೆ ಚುನಾವಣೆ ನಡೆಯಲಿದೆ. ರಿಪಬ್ಲಿಕ್ ಪಕ್ಷದಿಂದ ಪ್ರಸ್ತುತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಸ್ಪರ್ಧೆ ನಡೆಸುವುದು ಬಹುತೇಕ ಖಚಿತವಾಗಿದೆ. ಮತ್ತೊಂದು ಪ್ರಮುಖ ಪಕ್ಷವಾದ ಡೆಮಾಕ್ರಟಿಕ್ ಪಕ್ಷದಿಂದ ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರೀಸ್ ಸ್ಫರ್ಧೆ ನಡೆಸುವವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
Published by: Rajesh Duggumane
First published: December 15, 2019, 10:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading