ಕೇರಳಕ್ಕೆ 12 ಕೋಟಿ ನೀಡಿದ್ರಾ ಸಲ್ಮಾನ್​ ಖಾನ್?: ಟ್ವಿಟರ್​ನಲ್ಲಿ ಬಯಲಾಯ್ತು ಸತ್ಯ!


Updated:August 27, 2018, 1:18 PM IST
ಕೇರಳಕ್ಕೆ 12 ಕೋಟಿ ನೀಡಿದ್ರಾ ಸಲ್ಮಾನ್​ ಖಾನ್?: ಟ್ವಿಟರ್​ನಲ್ಲಿ ಬಯಲಾಯ್ತು ಸತ್ಯ!

Updated: August 27, 2018, 1:18 PM IST
ನ್ಯೂಸ್​ 18 ಕನ್ನಡ

ಮುಂಬೈ(ಆ.27): ಕೇರಳ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಹಲವಾರು ಮಂದಿ ನೆರವಿನ ಹಸ್ತ ಚಾಚಿದ್ದಾರೆ. ಸೆಲೆಬ್ರಿಟಿಗಳೂ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇತ್ತೀಚೆಗಷ್ಟೇ ತನ್ನ ಡೆಬ್ಯೂ ಮಾಡಿದ್ದ, ಇಂಟರ್ನೆಟ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ದ ಪ್ರಿಯಾ ವಾರಿಯರ್​ನಿಂದ ಶತಮಾನದ ಮಹಾನ್​ ನಟರೆನಿಸಿರುವ ಅಮಿತಾಬ್​ ಬಚ್ಚನ್​ ಹಾಗೂ 'ಬಾಹುಬಲಿ' ಪ್ರಭಾಸ್​ ಕೂಡಾ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.

ಇದನ್ನು ಹೊರತುಪಡಿಸಿ ಸನಿ ಲಿಯೋನ್​ ಕೇರಳಹಕ್ಕೆ ಆಹಾರ ಸಾಮಾಗ್ರಿ ಕಳುಹಿಸಿಕೊಟ್ಟರೆ, ರಣ್ದೀಪ್​ ಹೂಡಾ ಖುದ್ದು ಅಲ್ಲಿಗೆ ತೆರಳಿ ನಿರಾಶ್ರಿತರ ಕೇಂದ್ರಗಳಲ್ಲಿ ಕೆಲಸ ಮಾಡುವ ದೃಶ್ಯಗಳು ಕಂಡು ಬಂದಿದ್ದವು.

ಇವೆಲ್ಲದರ ಬಳಿಕ ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎಂದೇ ಖ್ಯಅತರಾಗಿರುವ ಸಲ್ಮಾನ್​ ಖಾನ್​ ಕೂಡಾ 12 ಕೋಟಿ ರೂಪಾಯಿ ಮೊತ್ತ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತ್ತು. ಸಲ್ಮಾನ್​ ಖಾನ್​ ಈ ದಿನಗಳಲ್ಲಿ ತನ್ನ 'ಭಾರತ್​' ಎಂಬ ಸಿನಿಮಾ ಶೂಟಿಂಗ್​ನಲ್ಲಿ ತೊಡಗಿದ್ದಾರೆ. ಅಲ್ಲದೇ ಟ್ವಿಟರ್​ನಲ್ಲಿ ತನ್ನ ತಾಯಿಯೊಂದಿಗಿರುವ ಫೋಟೋಗಳನ್ನೂ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಸಲ್ಮಾನ್​ ಕೇರಳ ಸಂತ್ರಸ್ತರಿಗಾಗಿ 12 ಕೋಟಿ ನೀಡಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಅಮಿತಾಬ್​ ಜಾವೆದ್​ ಜಾಫರಿ 'ಸಲ್ಮಾನ್​ ಖಾನ್​ ಅನೇಕರ ಆಶೀರ್ವಾದ ಪಡೆದಿದ್ದಾರೆ' ಎಂದು ಟ್ವೀಟ್​ ಮಾಡಿದ್ದರು. ಆದರೆ ಟ್ವಿಟರ್​ ಬಳಕೆದಾರರು ಮಾತ್ರ ಸಲ್ಮಾನ್​ ಖಾನ್​ ಡೊನೇಷನ್​ ನೀಡಿದ್ದಾರೆ ಎಂಬುವುದಕ್ಕೆ ಸಾಕ್ಷಿ ನೀಡಿ ಎಂದು ಕೇಳಿದ್ದಾರೆ. ಈ ವೇಳೆ ಜಾವೆದ್​ ತನ್ನ ಬಳಿ ಯಅವುದೇ ಸಾಕ್ಷಿ ಇಲ್ಲವೆಂದು ಉತ್ತರಿಸಿದ್ದಾರೆ.

ಇನ್ನು ಈ ವಿಚಾರವಾಗಿ ಖುದ್ದು ಸಲ್ಮಾನ್​ ಖಾನ್​ ಕೂಡಾ ಎಲ್ಲೂ ಮಾತನಾಡಿಲ್ಲ. ಇನ್ನು ಕೇರಳದ ಮುಖ್ಯಮಂತ್ರಿ ಬಿಡುಗಡೆಗೊಳಿಸಿರುವ ದಾನಿಗಳ ಪಟ್ಟಿಯಲ್ಲೂ ಸಲ್ಮಾನ್​ ಖಾನ್​ ಹೆಸರಿಲ್ಲ ಎಂಬುವುದು ಗಮನಾರ್ಹ.

ಇವೆಲ್ಲದರ ಬಳಿಕ ಜಾವೆದ್​ ತಮ್ಮ ಟ್ವೀಟ್​ ತೆಗೆಯಲು ಯೋಚಿಸಿದ್ದಾರೆ. ಹೀಗಾಗಿ ಮತ್ತೊಂದು ಟ್ವೀಟ್​ ಮಾಡಿ ಸ್ಪಷ್ಟನೆ ನಿಡಿರುವ ಅವರು ತಾನು ಈ ಸುದ್ದಿಯನ್ನು ಕೇಳಿದ್ದೆ. ಆದರೆ ಈವರೆಗೂ ಸಲ್ಮಾನ್​ ಖಾನ್​ರಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ., ಈ ಕಾರಣದಿಂದ ತಾನು ಈ ಹಿಂದೆ ಮಾಡಿರುವ ಟ್ವೀಟ್​ನ್ನು ಡಿಲೀಟ್​ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
First published:August 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ