Sameer Wankhede: ಬಾಲಿವುಡ್​ ಅಲ್ಲ, ಡ್ರಗ್ಸ್​​ ಜಾಲವನ್ನು ಕಿತ್ತುಹಾಕುವುದು ನಮ್ಮ ಗುರಿ; ವಾಖೆಂಡೆ ಮಾತು

ಈ ಪ್ರಕರಣದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿರುವ ಎನ್​ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೆಡೆಯಂತೂ ಬಾಲಿವುಡ್​ ಮಂದಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ.

ಸಮೀರ್​​ ವಾಂಖೆಡೆ

ಸಮೀರ್​​ ವಾಂಖೆಡೆ

 • Share this:
  ಮುಂಬೈ ಮೂಲಕ ಗೋವಾಕ್ಕೆ ಹೊರಡುತ್ತಿದ್ದ ಕ್ರೂಸ್​ ಹಡಗಿನಲ್ಲಿ ಡ್ರಗ್ಸ್​ ಸುಳಿವು ಸಿಕ್ಕ ಹಿನ್ನಲೆ ಯಾರೂ ಊಹಿಸದಂತೆ ಕಾರ್ಯರೂಪಕ್ಕೆ ಇಳಿದ ಎನ್​ಸಿಬಿ ಅಧಿಕಾರಿಗಳು ಬಾಲಿವುಡ್​ ಅನ್ನು ನಡುಗಿಸಿದ್ದಾರೆ. ಈ ಮೂಲಕ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಾಜಪುತ್ (Sushanth singh Rajput)​ ಸಾವಿನ ಬೆನ್ನಲ್ಲೆ ಬಯಲಾಗಿದ್ದ ಬಾಲಿವುಡ್​ ಮಾದಕ ಲೋಕದ ಮತ್ತಷ್ಟು ಮುಖಗಳು (Bollywood Drugs cases) ಈಗ ಅನಾವರಣವಾಗಿದೆ.

  ಸೋಮವಾರದವರೆಗೂ ಸೆರೆವಾಸದಲ್ಲಿ ಕಿಂಗ್​ ಖಾನ್​ ಮಗ

  ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ಕಾರ್ಡೆಲಿಯಾ ಕ್ರೂಸ್​ ಕಂಪನಿಯಲ್ಲಿ 11 ಗ್ರಾಂ ಚರಾಸ್​ ಅನ್ನು ವಶಪಡಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಹಡಗಿನಲ್ಲಿದ್ದ  ಸ್ಟಾರ್​ ನಟನ ಪುತ್ರ ಈ ಡ್ರಗ್ಸ್​ ಸೇವನೆ ಆರೋಪದ ಮೇಲೆ ಈಗ ಜೈಲು ಪಾಲಾಗಿದ್ದು, ಮುಂದಿನ ಸೋಮವಾರದವರೆಗೆ ಸೆರೆವಾಸದಲ್ಲೇ ಇರಬೇಕು. ಈತನ ಜೊತೆಗಿದ್ದ ಮತ್ತಿಬ್ಬರು ಆರೋಪಿಗಳಾದ ಅರ್ಬಾಸ್​ ಮರ್ಚೆಂಟ್​ ಮತ್ತು ಮುನ್ಮನ್​ ಧಮೇಚಾ ಜಾಮೀನು ಅರ್ಜಿಯನ್ನು ಕೂಡ ತಿರಸ್ಕರಿಸಲಾಗಿದೆ.

  ಒಂದು ವರ್ಷದಲ್ಲಿ 300ಕ್ಕೂ ಹೆಚ್ಚು ಮಂದಿ ಬಂಧನ

  ಇನ್ನು ಈ ಎನ್​​ಸಿಬಿ ಕಳೆದ ಸೆಪ್ಟೆಂಬರ್​ನಿಂದ ಎನ್‌ಡಿಪಿಎಸ್ ಕಾಯ್ದೆಯಡಿ 114 ಪ್ರಕರಣಗಳನ್ನು ದಾಖಲಿಸಿದೆ. ವಿದೇಶಿಗರು, ಬಾಲಿವುಡ್​ನ ಕೆಲವರು ಸೇರಿದಂತೆ ಒಟ್ಟು 300ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ನವಿ ಮುಂಬೈ, ಥಾಣೆ ಸೇರಿದಂತೆ ಮಹಾರಾಷ್ಟ್ರದ ವಿವಿಧ ಕಡೆ ಒಟ್ಟಾರೆ 150 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್​ ವಶಪಡಿಸಿಕೊಳ್ಳಲಾಗಿದೆ.

  ಬಾಲಿವುಡ್​ ಸಿಂಹಸ್ವಪ್ನವಾಗಿರುವ ಸಮೀರ್​ ವಾಂಖೆಡೆ

  ಇನ್ನು ಈ ಪ್ರಕರಣದಲ್ಲಿ ಪ್ರಮುಖ ಜವಾಬ್ದಾರಿ ಹೊತ್ತಿರುವ ಎನ್​ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೆಡೆಯಂತೂ ಬಾಲಿವುಡ್​ ಮಂದಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಈಗಾಗಲೇ ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣದಲ್ಲು ನಟಿ ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆ, ರಕುಲ್​ ಪ್ರೀತ್​ ಸಿಂಗ್​ ಸೇರಿದಂತೆ ಅನೇಕರ ವಿಚಾರಣೆ ನಡೆಸಿರುವ ಸುಮೀರ್​​​ ವಾಂಖೆಡೆ ಕೇವಲ ಬಾಲಿವುಡ್​ ಮಾತ್ರ ಗುರಿಯಾಗಿಸಿಕೊಂಡು ಈ ದಾಳಿ ನಡೆಸುತ್ತಿದ್ದಾರೆ ಎಂಬ ಆರೋಪ ಎದುರಿಸಿದ್ದಾರೆ. ಆದರೆ, ಈ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದಿರುವ ಅವರು, ನಮ್ಮ ಉದ್ದೇಶ ಡ್ರಗ್ಸ್​ ನಿರ್ಮೂಲನೆ ಎಂದಿದ್ದಾರೆ

  ಡ್ರಗ್ಸ್​ ಜಾಲ ಕಿತ್ತು ಹಾಕುವುದು ನಮ್ಮ ಗುರಿ

  ಎನ್​ಸಿಬಿ ಮುಖ್ಯ ಗುರಿ ಡ್ರಗ್ಸ್​ ಜಾಲವನ್ನು ಬೇರು ಸಮೇತ ಕಿತ್ತು ಹಾಕುವುದು. ಮುಂಬೈನಲ್ಲು 12 ಸಿಂಡಿಕೇಟ್​ಗಳನ್ನು ಕಿತ್ತು ಹಾಕುವಲ್ಲಿ ಯಶಸ್ವಿಯಾಗಿದ್ದೇವೆ, ಈ ಮೂಲಕ ಭಾರೀ ಪ್ರಮಾಣದ ಡ್ರಗ್ಸ್​​ ಕೂಡ ವಶಪಡಿಸಿಕೊಂಡಿದ್ದೇವೆ. ಈ ಉದ್ಯಮದಲ್ಲಿ ವಿದೇಶಿಗರು ಭಾಗಿಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೌಶಲ್ಯ ನಮ್ಮಲಿದೆ ಎಂದಿದ್ದಾರೆ.
  ಅಷ್ಟೇ ಅಲ್ಲದೇ, ಈ ಮೂಲಕ ಬಾಲಿವುಡ್​ ಛೀಮಾರಿ ಹಾಕುವುದು ಎನ್​ಸಿಬಿ ಉದ್ದೇಶವಲ್ಲ. ಆದರೆ, ಅದರಲ್ಲಿ ಯಾರಾದರೂ ಇದ್ದಾರೆ ಎಂಬುದು ತಿಳಿದು ಬಂದರೆ ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

  ಇದನ್ನು ಓದಿ: ಮಕರಬ್ಬಿ ಕಲುಷಿತ ನೀರು ಸೇವನೆ ಪ್ರಕರಣ; ಮೃತ ಕುಟುಂಬಕ್ಕೆ 3 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ

  ಎನ್​ಸಿಬಿಯಲ್ಲಿ ಕೆಲಸ ಮಾಡುವುದು ನಮ್ಮ ಅದೃಷ್ಟ

  ನಮಗೆ ಎಲ್ಲವೂ ಮುಖ್ಯ ಪ್ರಕರಣವಾಗಿದೆ. ಯಾವುದನ್ನು ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಹಣಕಾಸು ಸೇರಿದಂಎ ಎಲ್ಲ ಕೋನಗಳು ನಮಗೆ ಮುಖ್ಯ. ನಾವು ಮಾರಾಟಗಾರರ ಮಟ್ಟಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ. ಈ ಡ್ರಗ್ಸ್​​ ಮುಂಬೈ ಮತ್ತು ಗೋವಾದಲ್ಲಿ ಆಳವಾಗಿ ಬೇರೂರಿರುವ ಸಮಸ್ಯೆ ಎಂಬುದು ನಮಗೆ ಅರಿವಿದೆ. ಎನ್​ಸಿಬಿಯಲ್ಲಿ ಕೆಲಸ ಮಾಡುವುದು ನಮ್ಮ ಸೌಭಾಗ್ಯ. ಇದು ರಾಷ್ಟ್ರೀಯ ಹಿತಾಸಕ್ತಿಯ ಸಮಸ್ಯೆಯಾಗಿದೆ. ನಾವು ಕೊನೆಯವರೆಗೂ ಹೋರಾಡುತ್ತೇವೆ ಎಂದಿದ್ದಾರೆ.

  ಇದನ್ನು ಓದಿ: ಹಡಗಿನಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದವರ ಮೇಲೆ ಎನ್​ಸಿಬಿ ದಾಳಿ; ಬಾಲಿವುಡ್ ಸ್ಟಾರ್ ಮಗನ ವಿಚಾರಣೆ

  ಕಳೆದ 22 ತಿಂಗಳಲ್ಲಿ ವಾಂಖೇಡೆ ಅಡಿಯಲ್ಲಿ ಎನ್​ಸಿಬಿ ಸಾಕಷ್ಟು ಪ್ರಮಾಣದ ಡ್ರಗ್ಸ್​ ವಶಕ್ಕೆ ಪಡೆದಿದೆ. 300 ಕೆಜಿ ಚರಸ್, 12 ಕೆಜಿ ಹೆರಾಯಿನ್, 2 ಕೆಜಿ ಕೊಕೇನ್, 350 ಕೆಜಿ ಗಾಂಜಾ, 60 ಕೆಜಿ ಎಫೆಡ್ರೈನ್ ಮತ್ತು 25 ಕೆಜಿ ಎಂಡಿ ಸೇರಿದಂತೆ ಒಟ್ಟಾರೆ 100 ಕೆಜಿ ಡ್ರಗ್ಸ್​​ ವಶಕ್ಕೆ ಪಡೆಯಲಾಗಿದೆ. ತಿಂಗಳಲ್ಲಿ ಎನ್​ಸಿಬಿ ಸಾಮಾನ್ಯ ಎಂದರೂ 12ರಿಂದ 15 ಕಡೆ ದಾಳಿ ನಡೆಸುತ್ತದೆ.

  ಹೆಚ್ಚು ಸಕ್ರಿಯವಾಗಿ ಕೆಲಸ

  ಡ್ರಗ್ಸ್​ನ್ನು ವಿವಿಧ ರೀತಿಯಲ್ಲಿ ಬಳಕೆ ಮಾಡುತ್ತಿರುವುದು ಕಂಡಿದ್ದೇವೆ. ಮುಂಬೈ ಮತ್ತು ಗೋವಾದಂತಹ ಸ್ಥಳಗಳಲ್ಲಿ, ಎಂಡಿ ಬಳಕೆಯನ್ನು ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ. ಅನೇಕ ವಿದೇಶಿ ಕಾರ್ಟೆಲ್‌ಗಳು ಭಾಗಿಯಾಗಿದೆ. ಇವುಗಳ ಮೇಲಿನ ದಾಳಿ ವೇಳೆ ಅನೇಕ ಘರ್ಷಣೆ ಕೂಡ ನಡೆದಿದೆ. ಇವುಗಳ ಪತ್ತೆಗಾಗಿ ನಮ್ಮ ನೆಟ್​ವರ್ಕ್​ ಅನ್ನು ನಾವು ಸಕ್ರಿಯಗೊಳಿಸಿದ್ದೇವೆ ಎಂದು ಅವರು ತಿಳಿಸಿದರು.
  Published by:Seema R
  First published: