HOME » NEWS » National-international » BOLLYWOOD DRUGS PROBE 2 NCB OFFICIALS SUSPENDED FOR ALLEGED SUSPICIOUS ROLE THAT RESULTED IN BAIL OF ACCUSED MAK

ಬಾಲಿವುಡ್​ ಡ್ರಗ್ಸ್​ ತನಿಖೆ; ಆರೋಪಿಗಳ ಜಾಮೀನಿಗೆ ಸಹಕರಿಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ಅಮಾನತು

ಇಬ್ಬರು ಆರೋಪಿಗಳಾದ ಹರ್ಷ್ ಲಿಂಬಾಚಿಯಾ ಮತ್ತು ಕರಿಷ್ಮಾ ಪ್ರಕಾಶ್ ಇತ್ತೀಚೆಗೆ ಕ್ರಮವಾಗಿ ಓರ್ವ ಜಾಮೀನು ಪಡೆದಿದ್ದರೆ, ಮತ್ತೋರ್ವ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇವರಿಗೆ ಜಾಮೀನು ಸಿಗುವಲ್ಲಿ ಅಧಿಕಾರಿಗಳು ಮಹತ್ವದ ಪಾತ್ರವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

news18-kannada
Updated:December 3, 2020, 4:37 PM IST
ಬಾಲಿವುಡ್​ ಡ್ರಗ್ಸ್​ ತನಿಖೆ; ಆರೋಪಿಗಳ ಜಾಮೀನಿಗೆ ಸಹಕರಿಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳ ಅಮಾನತು
ಪ್ರಾತಿನಿಧಿಕ ಚಿತ್ರ.
  • Share this:
ಮುಂಬೈ (ನವೆಂಬರ್​ 03); ಡ್ರಗ್ಸ್​ ಪ್ರಕರಣ ಪ್ರಸ್ತುತ ದೇಶದಾದ್ಯಂತ ದೊಡ್ಡ ಸದ್ದು ಮಾಡುತ್ತಿದೆ. ಬಾಲಿವುಡ್​ನಿಂದ ಸ್ಯಾಂಡಲ್ ವರೆಗೆ ಅನೇಕ ನಟಿ ನಟಿಯರು ಈ ಪ್ರಕರಣದಲ್ಲಿ ಸಿಲುಕಿ ಇದೀಗ ಜೈಲು ಪಾಲಾಗಿದ್ದಾರೆ. ಅಲ್ಲದೆ, ಅನೇಕ ಖ್ಯಾತನಾಮರ ಹೆಸರುಗಳು ಸಹ ಈ ಪ್ರಕರಣದಲ್ಲಿ ಇದೀಗ ಕೇಳಿಬರುತ್ತಿದೆ. ಮಾಧಕವಸ್ತು ತಡೆ ಅಧಿಕಾರಿಗಳು ಇಡೀ ಜಾಲದ ಮೇಲೆ ಮುರಿದುಬಿದ್ದಿದ್ದಾರೆ. ಆದರೆ, ಇಂತಹ ಸಂದರ್ಭದಲ್ಲಿ ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಇಬ್ಬರು ಆರೋಪಿಗಳಿಗೆ ಜಾಮೀನು ಸಿಗುವಂತೆ ಮಾಡಲು ಸಹಕರಿಸಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಮುಂಬೈ ವಲಯ ಘಟಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಮಾನತುಗೊಳಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ಮುಂಬೈನಲ್ಲಿ ತಿಳಿಸಿವೆ.

ಇಬ್ಬರು ಆರೋಪಿಗಳ ಪಾತ್ರ ಹಾಗೂ ಅವರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ. ಇಬ್ಬರು ಆರೋಪಿಗಳಾದ ಹರ್ಷ್ ಲಿಂಬಾಚಿಯಾ ಮತ್ತು ಕರಿಷ್ಮಾ ಪ್ರಕಾಶ್ ಇತ್ತೀಚೆಗೆ ಕ್ರಮವಾಗಿ ಓರ್ವ ಜಾಮೀನು ಪಡೆದಿದ್ದರೆ, ಮತ್ತೋರ್ವ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇವರಿಗೆ ಜಾಮೀನು ಸಿಗುವಲ್ಲಿ ಅಧಿಕಾರಿಗಳು ಮಹತ್ವದ ಪಾತ್ರವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : Farmers Protest; ರೈತರ ಹೋರಾಟ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸಿ; ಅಮರೀಂದರ್​ ಸಿಂಗ್ ಮನವಿ

ಆರೋಪಿ ಲಿಂಬಾಚಿಯಾ ದೂರದರ್ಶನದ ಪ್ರಮುಖ ಸ್ಥಾನದಲ್ಲಿರುವ ಭಾರತಿ ಸಿಂಗ್ ಅವರ ಪತಿ ಆಗಿದ್ದರೆ, ಕರಿಷ್ಮಾ ಪ್ರಕಾಶ್ ಬಾಲಿವುಡ್‌ನ ಪ್ರಮುಖ ನಟಿ ದೀಪಿಕಾ ಪಡುಕೋಣೆ ಅವರ ವ್ಯವಸ್ಥಾಪಕರಾಗಿದ್ದಾರೆ. ಲಿಂಬಾಚಿಯಾ ಮತ್ತು ಕರಿಷ್ಮಾ ಪ್ರಕಾಶ್ ಇಬ್ಬರ ಮನೆಗಳ ಮೇಲೂ ಕಳೆದ ತಿಂಗಳು ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕೆಲವು ಪ್ರಮಾಣದ ಮಾದಕವಸ್ತುಗಳು ಪತ್ತೆಯಾಗಿದ್ದವು. ಹೀಗಾಗಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು.
Youtube Video

ಲಿಂಬಾಚಿಯಾ ಅವರನ್ನು ಬಂಧಿಸಿ ನಂತರ ಜಾಮೀನು ಪಡೆದರೆ, ಕರಿಷ್ಮಾ ಪ್ರಕಾಶ್ ಮಧ್ಯಂತರ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಲ್ಲಿ ಇಬ್ಬರು ಅಧಿಕಾರಿಗಳ ಪಾತ್ರವನ್ನು ಪರಿಗಣಿಸಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ. ವಲಯ ನಿರ್ದೇಶಕ ಸಮೀರ್ ವಾಂಖೆಡೆ ಆದೇಶಿಸಿದ ಆಂತರಿಕ ತನಿಖೆಯ ಪ್ರಾಥಮಿಕ ವರದಿಯ ಪ್ರಕಾರ ಎನ್‌ಸಿಬಿ ಈ  ಕ್ರಮವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
Published by: MAshok Kumar
First published: December 3, 2020, 4:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories