Lok Sabha Election Result 2019: ಫಲಿತಾಂಶದ ಬಗ್ಗೆ ನಟ ಅನುಪಮ್​ ಖೇರ್​ ಟ್ವೀಟ್​ ಮಾಡಿದ್ದು ಹೀಗೆ..!

ಇಂದು ಎಲ್ಲೆಡೆ ಲೋಕಸಭಾ ಚುನಾವಣೆಯ ಫಲಿತಾಂಶದ ಕಾವು. ಇದಕ್ಕೆ ಬಾಲಿವುಡ್​ ಸಹ ಹೊರತಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜಾಲಾಡಿದಾಗ ಸೆಲೆಬ್ರಿಟಿಗಳೂ ಸಹ ಫಲಿತಾಂಶದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಟ ಅನುಪಮ್​ ಖೇರ್ ಹಾಗೂ ಕೊಯ್ನಾ ಮಿತ್ರಾ ಸಹ ಈ ಕುರಿತಾಗಿ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ನಟ ಅನುಪಮ್​ ಖೇರ್​

ಪ್ರಧಾನಿ ನರೇಂದ್ರ ಮೋದಿ ಹಾಗೂ ನಟ ಅನುಪಮ್​ ಖೇರ್​

  • News18
  • Last Updated :
  • Share this:
ಇಂದು ದೇಶದ ಜೊತೆಗೆ ರಾಜಕೀಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲೆಡೆ 2019ರ ಲೋಕಸಭಾ ಚುನಾವಣಾ ಫಲಿತಾಂಶದ್ದೇ ಸದ್ದು. ಮತ ಎಣಿಕೆ ಆರಂಭವಾದಾಗಿನಿಂದ ಸದ್ಯದವರೆಗೆ ಯುಪಿಎ ವಿರುದ್ಧ ಎನ್​ಡಿಎ ಮುನ್ನಡೆ ಕಾಯ್ದುಕೊಂಡಿದೆ. ಸದ್ಯಕ್ಕೆ ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯಾಗುವ ಮುನ್ಸೂಚನೆ ಸಿಗುತ್ತಿದೆ.

ಲೋಕಸಭಾ ಚುನಾವಣಾ ಫಲಿತಾಂಶದ ಕಾವು ಎಲ್ಲಡೆ ಜೋರಾಗಿದೆ. ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲೂ ಬಾಲಿವುಡ್​ ಸೆಲೆಬ್ರಿಟಿಗಳು ಸಹ ಫಲಿತಾಂಶದ ಕುರಿತಾಗಿ ತಲೆಕಡೆಸಿಕೊಂಡಿದ್ದು, ಟ್ವೀಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಿರೀಕ್ಷಿಸಿ ಜಗ್ಗೇಶ್​ರ ಆತ್ಮಕತೆ: 'ನವರಸ ನಾಯಕನ ನಾಲ್ಕು ಹೆಜ್ಜೆ'ಯಾಗಿ ಜಗ್ಗಣ್ಣನ ಜೀವನದ ಕತೆ..!​

ಹೌದು, ನಟ ಅನುಪಮ್​ ಖೇರ್​ ಇಂದಿನ ಫಲಿತಾಂಶದ ಕುರಿತಾಗಿ ಟ್ವೀಟ್ ಮಾಡಿದ್ದಾರೆ. ಅವರು ಟ್ವೀಟ್​ ಮಾಡಿರುವುದು ಈ ಬಾರಿ ಬಂದರೆ ಅದು ಮೋದಿ ಎಂಬ ಅರ್ಥದಲ್ಲಿ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ನಟ ಅನುಪಮ್​ ಖೇರ್​
ಅನುಪಮ್​ ಖೇರ್​ ಮಾತ್ರವಲ್ಲದೆ ನಟಿ ಕೋಯ್ನಾ ಮಿತ್ರಾ ಸಹ ಫಲಿತಾಂಶದ ಕುರಿತಾಗಿ ಟ್ವೀಟ್​ ಮಾಡಿದ್ದಾರೆ.

ನಟಿ ಕೊಯ್ನಾ ಮಿತ್ರಾ ಟ್ವೀಟ್​


ನಿನ್ನೆ ಅಂದರೆ ಮೇ 22ರಂದು ಟ್ವೀಟ್​ ಮಾಡಿರುವ ಕೊಯ್ನಾ, ಮೋದಿ ಅವರ ಚಿತ್ರವನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಶೀರ್ಷಿಕೆಯನ್ನೂ ಕೊಟ್ಟಿದ್ದಾರೆ. ಅದು ಹೀಗಿದೆ... 'ಯಾರು ಗೆದ್ದರು..ಯಾರು ಸೋಲನ್ನು ಅನುಭವಿಸುತ್ತಾರೆ ಎಂದು ಕಾಲವೇ ನಿರ್ಧರಿಸಲಿದೆ. ಆದರೆ 543 ಅಭ್ಯರ್ಥಿಗಳ ವಿರುದ್ಧ ಏಕೈಕ ವ್ಯಕ್ತಿ ಹೋರಾಡಿದ್ದ ಎನ್ನುವುದನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳಲಿದೆ' ಎಂದು ಬರೆದುಕೊಂಡಿದ್ದಾರೆ.

Cannes 2019: ಬಾಲಿವುಡ್​ ಸ್ಟೈಲ್​ ಐಕಾನ್​ ಸೋನಮ್​ ಕಾನ್ಸ್​ನಲ್ಲಿ ಮಿಂಚಿದ್ದು ಹೀಗೆ..!

First published: