49 ವರ್ಷಗಳಷ್ಟು ಹಳೆಯ ಘಟನೆ ನೆನಪಿಸಿಕೊಂಡು ಭಾವುಕರಾದ ಬಿಗ್​ ಬಿ: ಅಷ್ಟಕ್ಕೂ ಆಗಿದ್ದೇನು?


Updated:August 9, 2018, 4:35 PM IST
49 ವರ್ಷಗಳಷ್ಟು ಹಳೆಯ ಘಟನೆ ನೆನಪಿಸಿಕೊಂಡು ಭಾವುಕರಾದ ಬಿಗ್​ ಬಿ: ಅಷ್ಟಕ್ಕೂ ಆಗಿದ್ದೇನು?
ಅಮಿತಾಭ್​ ಬಚ್ಚನ್​
  • Share this:
ನ್ಯೂಸ್​ 18 ಕನ್ನಡ

ಮುಂಬೈ(ಆ.09): ಡಿಎಂಕೆ ನಾಯಕ ಕರುಣಾನಿಧಿ ನಿಧನದ ಬಳಿಕ ಬಾಲಿವುಡ್​ ಬಿಗ್​ ಬಿ ಎಂದೇ ಖ್ಯಾತರಾಗಿರುವ ಅಮಿತಾಬ್​ ಬಚ್ಚನ್​ ಕೂಡಾ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿರುವ ಅಮಿತಾಬ್​ ಬಚ್ಚನ್, ಇದರೊಂದಿಗೆ 'ಗೌರವಯುತ ಹಾಗೂ ಧೀಮಂತ ನಾಯಕ ಕರುಣಾನಿಧಿಯವರಿಗೆ... ನನ್ನ ಸಿನಿಮಾ 'ಸಾತ್​ ಹಿಂದೂಸ್ತಾನ್​'ಗೆ ಮೊದಲ ರಾಷ್ಟ್ರೀಯ ಪುರಸ್ಕಾರ ಅವರಿಂದಲೇ ಪಡೆದಿದ್ದೆ. ಅಂದು ಈ ಸಮಾರಂಭ ಚೆನ್ನೈನಲ್ಲಿ ಆಯೋಜಿಸಿದ್ದು, ಕರುಣಾನಿಧಿಯವರು ಅಂದಿನ ಮುಖ್ಯಮಂತ್ರಿಯಾಗಿದ್ದರು' ಎಂದು ಬರೆದುಕೊಂಡಿದ್ದಾರೆ.ಕರುಣಾನಿಧಿಯವರ ನಿಧನದ ಸುದ್ದಿಯ ಬಳಿಕ ತಮಿಳುನಾಡಿನಾದ್ಯಂತ ಶೋಕಾಚರಣೆ ನಡೆಯುತ್ತಿದೆ. ಅವರ ಅಭಿಮಾನಿಗಳ ಸಂಖ್ಯೆ ಎಷ್ಟಿದೆ ಎಂದು ಊಹಿಸಲೂ ಅಸಾಧ್ಯವಾಗಿದೆ. ರಾಜಕೀಯ, ಗ್ಲ್ಯಾಮರ್​ ಇಂಡಸ್ಟ್ರಿಯಿಂದ ಹಿಡಿದು ಜನಸಾಮಾನ್ಯರಲ್ಲೂ ದುಃಖ ಮಡುಗಟ್ಟಿತ್ತು. ಸಿನಿಮಾ ಕ್ಷೇತ್ರದವರ ಕುರಿತಾಗಿ ಹೇಳುವುದಾದರೆ ಕರುಣಾನಿಧಿಯವರ ಅಂತಿಮ ದರ್ಶನ ಪಡೆಯಲು ರಜನೀಕಾಂತ್​, ಧನುಷ್​ರಂತಹ ಗಣ್ಯರು ಆಗಮಿಸಿದ್ದರು.

ಅಮಿತಾಬ್​ ಬಚ್ಚನ್​ ಅಂತಿಮ ಕ್ರಿಯೆಯಲ್ಲಿ ಪಾಗ್ಗೊಂಡಿರಲಿಲ್ಲವಾದರೂ ಟ್ವಿಟರ್​ ಮೂಲಕ ಸಂತಅಪ ಸೂಚಿಸಿದ್ದಾರೆ. ಇನ್ನು ಖುದ್ದು ಅಮಿತಾಬ್​ ಬಚ್ಚನ್​ರವರ ಕುಟುಂಬದಲ್ಲೂ ಸೂತಕದ ಛಾಯೆ ಇದೆ. ವಾಸ್ತವವಾಗಿ ಆಗಸ್ಟ್​ 5 ರಂದು ಅಮಿತಾಬ್​ ಬಚ್ಚನ್​ ಮಗಳು ಶ್ವೇತಾ ನಂದಾರವರ ಮಾವ ರಾಜನ್​ ನಂದಾ ವಿಧಿವಶರಾಗಿದ್ದರು. ರಾಜನ್​ರವರು ಬಚ್ಚನ್​ ಕುಟುಂಬದೊಂದಿಗೆ ಮಾತ್ರವಲ್ಲದೇ ಕಪೂರ್​ ಕುಟುಂಬದೊಂದಿಗೂ ಸಂಬಂಧ ಹೊಂದಿದ್ದರು. ಅವರು ರಾಜ್​ ಕಪೂರ್​ ಮಗಳ ಗಂಡ ಆಗಿದ್ದರು. ಅವರ ನಿಧನ ಬಚ್ಚನ್​ ಹಾಗೂ ಕಪೂರ್​ ಈ ಎರಡೂ ಕುಟುಂಬವಗಳಿಗೆ ಆಘಾತದಂತಿತ್ತು.
First published: August 9, 2018, 4:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading