• Home
  • »
  • News
  • »
  • national-international
  • »
  • ಬಾಲಿವುಡ್​ ನಟಿ ಶಬಾನಾ ಆಜ್ಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಬಾಲಿವುಡ್​ ನಟಿ ಶಬಾನಾ ಆಜ್ಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಶಬನಾ ಅಜ್ಮಿ

ಶಬನಾ ಅಜ್ಮಿ

ಮಹಾರಾಷ್ಟ್ರದ ರಾಯಗಡ್​ ಜಿಲ್ಲೆಯ ಮುಂಬೈ-ಪುಣೆ ಎಕ್ಸ್​ಪ್ರೆಸ್​ ವೇನಲ್ಲಿ ಈ ಅಪಘಾತ ನಡೆದಿದೆ. ಶಬಾನಾ ಪ್ರಯಾಣಿಸುತ್ತಿದ್ದ ಕಾರ್​ ಟ್ರಕ್​ಗೆ ಗುದ್ದಿದೆ ಎಂದು ರಾಯಗಡ ಪೊಲೀಸ್​ ಅಧಿಕಾರಿ ಅನಿಲ್​ ಪರಸ್ಕರ್​ ತಿಳಿಸಿದ್ದಾರೆ

  • Share this:

ಮುಂಬೈ (ಜ.18): ಬಾಲಿವುಡ್​ ಖ್ಯಾತ ನಟಿ ಶಬಾನಾ ಆಜ್ಮಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿದೆ. ಘಟನೆಯಲ್ಲಿ ನಟಿ ಮತ್ತವರ ಗಂಡ, ಖ್ಯಾತ ಗೀತರಚನೆಕಾರ ಜಾವೇದ್​ ಅಖ್ತರ್ ​ ಗಾಯಗೊಂಡಿದ್ದಾರೆ.


ಮಹಾರಾಷ್ಟ್ರದ ರಾಯಗಡ್​ ಜಿಲ್ಲೆಯ ಮುಂಬೈ-ಪುಣೆ ಎಕ್ಸ್​ಪ್ರೆಸ್​ ವೇನಲ್ಲಿ ಮಧ್ಯಾಹ್ನ ಈ ಅಪಘಾತ ನಡೆದಿದೆ. ಶಬಾನಾ ಪ್ರಯಾಣಿಸುತ್ತಿದ್ದ ಕಾರ್​ ಟ್ರಕ್​ಗೆ ಗುದ್ದಿದೆ ಎಂದು ರಾಯಗಡ ಪೊಲೀಸ್​ ಅಧಿಕಾರಿ ಅನಿಲ್​ ಪರಸ್ಕರ್​ ತಿಳಿಸಿದ್ದಾರೆ.ಗಾಯಗೊಂಡ ಇಬ್ಬರನ್ನು ತಕ್ಷಣಕ್ಕೆ ನವಿಮುಂಬೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.


ಪ್ರಾಥಮಿಕ ಮಾಹಿತಿ ಪ್ರಕಾರ, ಶಬಾನಾ ಮತ್ತು ಜಾವೇದ್​ ಜೊತೆ ಮತ್ತೊಬ್ಬ ಮಹಿಳೆ ಪ್ರಯಾಣಿಸುತ್ತಿದ್ದು, ಅವರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.


ಇದನ್ನು ಓದಿ: ದೀಪಿಕಾ ಪಡುಕೋಣೆ ಬಗ್ಗೆ ಏನೂ ಹೇಳಲ್ಲ; ನಾನಂತೂ ತುಕಡೆ ಗ್ಯಾಂಗ್ ಜೊತೆ ನಿಲ್ಲಲ್ಲ: ಕಂಗನಾ ರಾಣಾವತ್


ಇತ್ತೀಚೆಗಷ್ಟೇ ನಟಿ ಶಬಾನಾ ತಮ್ಮ 75ನೇ ಜನ್ಮದಿನವನ್ನು ಆಚರಿಸಿದ್ದರು.

Published by:Seema R
First published: