• Home
  • »
  • News
  • »
  • national-international
  • »
  • Priyanka Chopra: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಿಯಾಂಕಾ ಚೋಪ್ರಾ! ನಟಿ ಭಾಷಣಕ್ಕೆ ನೆಟ್ಟಿಗರ ಮೆಚ್ಚುಗೆ

Priyanka Chopra: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಿಯಾಂಕಾ ಚೋಪ್ರಾ! ನಟಿ ಭಾಷಣಕ್ಕೆ ನೆಟ್ಟಿಗರ ಮೆಚ್ಚುಗೆ

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ ಅವರು UNICEF ಗುಡ್‌ವಿಲ್ ರಾಯಭಾರಿ ಆಗಿದ್ದು, ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸಮ್ಮೇಳನದಲ್ಲಿ ತಮ್ಮ ಆರಂಭಿಕ ಹೇಳಿಕೆಗಳಲ್ಲಿ, "ನಾವು ಹೋರಾಡಿದ ನ್ಯಾಯಯುತ ಪ್ರಪಂಚದ ಬುನಾದಿಯನ್ನು ರಕ್ಷಿಸಲು ವಿಶ್ವದ ಎಲ್ಲ ನಾಯಕರು ಒಗ್ಗೂಡುವುದು ಅತಿ ಮುಖ್ಯ” ಎಂದು ಹೇಳಿದರು.

ಮುಂದೆ ಓದಿ ...
  • Share this:

ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಸಿದ್ದ ಬಾಲಿವುಡ್‌ ನಟಿ ಮತ್ತು ಯುನಿಸೆಫ್‌ನ ರಾಯಭಾರಿ ಪ್ರಿಯಾಂಕ ಚೋಪ್ರಾ ಅವರು ಭಾಗವಹಿಸಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ಸಭೆಯಲ್ಲಿ ಮಾತನಾಡಿದ ಅವರು “ಜನರಿಗೆ ಸುರಕ್ಷಿತವಾಗಿರುವ ಮತ್ತು ಆರೋಗ್ಯಕರ ಜಗತ್ತನ್ನು ಸೃಷ್ಟಿಮಾಡಲು "ಜಾಗತಿಕ ಒಗ್ಗಟ್ಟು" ಎಂದು ಅತ್ಯಂತ ನಿರ್ಣಾಯಕ ಘಟ್ಟವಾಗಿದೆ ಎಂದು ಹೇಳಿದ್ದಾರೆ. ಪ್ರಿಯಾಂಕ ಚೋಪ್ರಾ (Priyanka Chopra) ಅವರು UNICEF ಗುಡ್‌ವಿಲ್ ರಾಯಭಾರಿ ಆಗಿದ್ದು, ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಸಮ್ಮೇಳನದಲ್ಲಿ ತಮ್ಮ ಆರಂಭಿಕ ಹೇಳಿಕೆಗಳಲ್ಲಿ, "ನಾವು ಹೋರಾಡಿದ ನ್ಯಾಯಯುತ ಪ್ರಪಂಚದ ಬುನಾದಿಯನ್ನು ರಕ್ಷಿಸಲು ವಿಶ್ವದ ಎಲ್ಲ ನಾಯಕರು (Leaders) ಒಗ್ಗೂಡುವುದು ಅತಿ ಮುಖ್ಯ” ಎಂದು ಹೇಳಿದರು.


ಭಾಷಣದಲ್ಲಿ ಪ್ರಿಯಾಂಕಾ ಚೋಪ್ರಾ ಹೇಳಿದ್ದು ಹೀಗೆ  
“ನಾವು ಇಂದು ನಮ್ಮ ಜಗತ್ತಿನಲ್ಲಿ ಒಂದು ನಿರ್ಣಾಯಕ ಹಂತದಲ್ಲಿ ಜೀವನ ನಡೆಸುತ್ತಿದ್ದೇವೆ. ಈ ಕೋವಿಡ್‌ -19 ಹೆಚ್ಚು ಹರಡುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಾಗತಿಕ ಒಗ್ಗಟ್ಟು ಎಂಬುದು ಅತಿ ಅವಶ್ಯಕವಾಗಿ ಬೇಕಾಗಿದೆ. ಕೋವಿಡ್-19 ರ ವಿನಾಶಕಾರಿ ಪರಿಣಾಮಗಳಿಂದ ಎಲ್ಲ ದೇಶಗಳು ಕಂಗಾಲಾಗಿವೆ. ಅದರ ವಿರುದ್ಧ ತಮ್ಮ ಹೋರಾಟವನ್ನು ಮುಂದುವರಿಸುತ್ತಲೇ ಇವೆ.


ಇದನ್ನೂ ಓದಿ:  Ritesh Agarwal: ಭಾರೀ ಏರಿಕೆ ಕಂಡ ಓಯೋ ಆದಾಯ, ಸಂಭಾವನೆ ಹೆಚ್ಚಿಸಿಕೊಂಡ ಸಿಇಒ ರಿತೇಶ್‌!


ಆದರೆ ಈಗ ಅದರ ಜೊತೆಗೆ ಹವಾಮಾನ ಬಿಕ್ಕಟ್ಟು ಜನ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಂಘರ್ಷಗಳು ಉಲ್ಬಣಗೊಳ್ಳುತ್ತಿವೆ. ಬಡತನ, ಗುಳೆ ಹೋಗುವುದು, ಹಸಿವು ಮತ್ತು ಅಸಮಾನತೆಗಳು ನಾವು ದೀರ್ಘಕಾಲ ಹೋರಾಡಿದ ನ್ಯಾಯಯುತ ಪ್ರಪಂಚದ ಅಡಿಪಾಯವನ್ನು ನಾಶಪಡಿಸುತ್ತವೆ ”ಎಂದು ಪ್ರಿಯಾಂಕಾ ತಮ್ಮ ಭಾಷಣದಲ್ಲಿ ಹೇಳಿದರು. ಪ್ರಪಂಚದೊಂದಿಗೆ ಎಲ್ಲವೂ ಸರಿಯಾಗಿಲ್ಲ. ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಪರಿಸ್ಥಿತಿಯನ್ನು ಬದಲಾಯಿಸಲು ಕ್ರಿಯಾ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳು ಜಗತ್ತಿಗೆ ಮಾಡಬೇಕಾದ ಅನೇಕ ಯೋಜನೆಗಳನ್ನು ಪಟ್ಟಿ ಮಾಡಿದೆ.

View this post on Instagram


A post shared by Priyanka (@priyankachopra)
“ಈ ಗುರಿಗಳನ್ನು 2015 ರಲ್ಲಿ ಪ್ರಪಂಚದಾದ್ಯಂತದ ಜನರೊಂದಿಗೆ ಕೈ ಜೋಡಿಸಿ ರಚಿಸಲಾಗಿದೆ. ಒಟ್ಟಾಗಿ, ಜಗತ್ತನ್ನು ಬದಲಾಯಿಸಲು ನಮಗೆ ಅಸಾಧಾರಣ ಅವಕಾಶವಿದೆ. ನಾವು ನಮ್ಮ ಜನರಿಗೆ ಋಣಿಯಾಗಿದ್ದೇವೆ. ನಾವು ನಮ್ಮ ಭೂಮಿಗೆ ಋಣಿಯಾಗಿದ್ದೇವೆ. ನಾವೆಲ್ಲರೂ ಬದುಕಲು ನ್ಯಾಯಯುತ, ಸುರಕ್ಷಿತ ಮತ್ತು ಆರೋಗ್ಯಕರ ಜಗತ್ತಿಗೆ ಅರ್ಹರಾಗಿದ್ದೇವೆ. ವರ್ತಮಾನ ಮತ್ತು ಭವಿಷ್ಯವು ನಿಮ್ಮ ಕೈಯಲ್ಲಿ, ನಮ್ಮ ಕೈಯಲ್ಲಿದೆ” ಎಂದು ಪ್ರಿಯಾಂಕ ಅವರು ಹೇಳಿದರು.


ಎಲ್ಲರಿಗೂ ವಾಸಯೋಗ್ಯ ಸ್ಥಳವಾಗಿ ಉಳಿಯಲು ತಕ್ಷಣದ ಕ್ರಮ ಕೈಗೊಳ್ಳಬೇಕು 
“ಪ್ರಪಂಚವು ಯಾವುದನ್ನು ಕಳೆದುಕೊಳ್ಳುವುದನ್ನು ಇಷ್ಟ ಪಡುವುದಿಲ್ಲ. ಎಲ್ಲರಿಗೂ ವಾಸಯೋಗ್ಯ ಸ್ಥಳವಾಗಿ ಉಳಿಯಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಯೋಜನೆಗಳನ್ನು ತಕ್ಷಣವೇ ಜಾರಿ ಮಾಡಬೇಕೆಂದು ಪ್ರಿಯಾಂಕ ಒತ್ತಾಯಿಸಿದರು.


“ಆದರೆ ಸಮಯ ಮೀರುತ್ತಿದೆ. ಈ ಗುರಿಗಳನ್ನು ಸಾಧಿಸಲು ನಾವು 2030 ರ ಹತ್ತಿರ ಈಗಾಗಲೇ ಬಂದಿದ್ದೇವೆ. ಸಮಯದೊಂದಿಗೆ ನಾವು ವೇಗವಾಗಿ ಹೆಜ್ಜೆ ಹಾಕಬೇಕಿದೆ. ಈ ಸಭೆಯಲ್ಲಿ 2015 ರಲ್ಲಿ ಆ ಗುರಿಗಳ ಯೋಜನೆಗಳ ಬಗ್ಗೆ ಸಹಿ ಮಾಡಿದ ಎಲ್ಲ ದೇಶಗಳ ಪ್ರತಿನಿಧಿಗಳು ಇದ್ದಾರೆ. ನಮ್ಮೆಲ್ಲರ ಪಾಲುದಾರಿಕೆಯಲ್ಲಿ ಆ ಯೋಜನೆಯನ್ನು ರಿಯಾಲಿಟಿ ಮಾಡುವ ನಾಯಕರು ಇವರೇ ಆಗಿದ್ದಾರೆ. ಆದ್ದರಿಂದ ಇಂದು ಕ್ರಿಯೆಯ ಬಗ್ಗೆ ಯೋಚಿಸುವ ಅವಶ್ಯಕತೆ ಖಂಡಿತ ಇದೆ. ಇದು ಮಹತ್ವಾಕಾಂಕ್ಷೆ ಆಗಿದೆ”ಎಂದು ಅವರು ಹೇಳಿದರು.


ಇದನ್ನೂ ಓದಿ: Loan Payment: ಸಾಲಗಾರ ಅಕಸ್ಮಾತ್ ಸಾವನ್ನಪ್ಪಿದರೆ ಆತನ ಸಾಲ ಯಾರು ಮರುಪಾವತಿಸಬೇಕು?


ಸಮಾರಂಭದಲ್ಲಿ ಪ್ರಿಯಾಂಕಾ ಚೋಪ್ರಾ ಅವರು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ಮತ್ತು ಯುಎಸ್ ಕವಯಿತ್ರಿ ಮತ್ತು ಕಾರ್ಯಕರ್ತೆ ಅಮಂಡಾ ಗೋರ್ಮನ್ ಅವರನ್ನು ಭೇಟಿಯಾದರು.


ಪ್ರಿಯಾಂಕಾ ಅವರ ಮುಂದಿನ ಸಿನೆಮಾಗಳು 
ಇನ್ನು ಪ್ರಿಯಾಂಕಾ ಅವರ ನಟನಾ ವೃತ್ತಿ ವಿಷಯಕ್ಕೆ ಬಂದರೆ, ಜೋ ಮತ್ತು ಆಂಥೋನಿ ರುಸ್ಸೋ ನಿರ್ಮಾಣದ ಸಿಟಾಡೆಲ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಮುಂದಿನ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಮಹತ್ವಾಕಾಂಕ್ಷೆಯ ಅಮೆಜಾನ್ ಪ್ರೈಮ್ ವಿಡಿಯೋ ಸ್ಪೈ ಸರಣಿಯನ್ನು 'ಮದರ್‌ಶಿಪ್' ಕಾರ್ಯಕ್ರಮವಾಗಿ ಯೋಜಿಸಲಾಗಿದೆ.

Published by:Ashwini Prabhu
First published: