Punjab Politics: ಕಾಂಗ್ರೆಸ್​ ಸೇರಿದ ನಟ ಸೋನು ಸೂದ್​ ಸಹೋದರಿ ಮಾಳವಿಕಾ

ಫೆಬ್ರವರಿ 14 ರಂದು ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

ಕಾಂಗ್ರೆಸ್​ ಸೇರಿದ ಮಾಳವಿಕಾ

ಕಾಂಗ್ರೆಸ್​ ಸೇರಿದ ಮಾಳವಿಕಾ

  • Share this:
    ಪಂಜಾಬ್ ವಿಧಾನಸಭಾ​ ಚುನಾವಣೆ (Punjab Assembly Election) ಘೋಷಣೆಯಾದ ಬೆನ್ನ ಹಿಂದೆಯೇ ಬಾಲಿವುಡ್​ ನಟ ಸೋನ್​ ಸೂದ್ (Sonu sood) ಅವರ ಸಹೋದರಿ ಮಾಳವಿಕಾ ಸೂದ್ (Malvika Sood)  ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್​​ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಕಾಂಗ್ರೆಸ್​ ಸೇರಿದ್ದಾರೆ. ಇಂದು ಅಧಿಕೃತವಾಗಿ ಕೈ ಸೇರ್ಪಡನೆ ಗೊಂಡ ಅವರು ಪಕ್ಷದಿಂದ ಚುನಾವಣಾ ಟಿಕೆಟ್​ ನಿರೀಕ್ಷೆಯಲ್ಲಿದ್ದಾರೆ. ಇನ್ನು ಮುಂದಿನ ತಿಂಗಳು ಫೆಬ್ರವರಿ 14 ರಂದು ಪಂಜಾಬ್ ನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

    ಕೋವಿಡ್​ ಎರಡನೇ ಅಲೆಯಲ್ಲಿ ನಿಜವಾದ ಹೀರೋ ಆದ ಸೂನು ಸೂದ್​​

    ಇನ್ನು ಮಾಳವಿಕ ಸೂದ್​​ ಅವರು ಕಾಂಗ್ರೆಸ್​ಗೆ ಸೇರಿರುವುದು ಪಕ್ಷಕ್ಕೆ ಹೆಚ್ಚಿನ ಬೆಂಬಲ ಬಂದಂತೆ ಆಗಿದೆ. ಮಾಳವಿಕ ಸೂದ್​​ ಅವರಿಗೆ ಅವರ ಸಹೋದರ ಸೋನು ಸೂದ್​​ ಬೆಂಬಲಕ್ಕೆ ನಿಂತಿದ್ದಾರೆ. ಕಳೆದ ವರ್ಷ ಕೋವಿಡ್ ಎರಡನೇ ಅಲೆಯಲ್ಲಿ ನಟ ಸೋನು ಸೂದ್​ ಕಷ್ಟದಲ್ಲಿದ್ದ ಜನ ಸಾಮಾನ್ಯರಿಗೆ ಮಾಡಿದ ಕಾರ್ಯಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತ ಪಡಿಸಿತ್ತು. ನಿಜ ಜೀವನದ ಹೀರೋ ಅವರು ಎಂಬ ಖ್ಯಾತಿ ಪಡೆದರು. ದೇಶದ ಯಾವುದೇ ಮೂಲೆಯಿಂದ ಜನರು ಕಷ್ಟಕ್ಕೆ ಸಹಾಯ ಕೇಳಿ ಟ್ವೀಟ್​ ಮಾಡಿದರೂ ಅವರಿಗೆ ಸಹಾಯ ಮಾಡುತ್ತಿದ್ದರು. ಲಾಕ್​ಡೌನ್ ಸಮಯದಲ್ಲಿ ವಲಸಿಗರನ್ನು ಸುರಕ್ಷಿತವಾಗಿ ಊರು ಸೇರಿಸಿದ್ದ ಅವರಿಗೆ ಪಕ್ಷಾತೀತವಾಗಿಯೂ ಅನೇಕ ರಾಜಕಾರಣಿಗಳು ಮೆಚ್ಚುಗೆ ಸೂಚಿಸಿದ್ದರು.



    ಗೇಮ್​ ಚೇಂಜರ್​ ಆಗಲಿದೆ ಈ ಬೆಳವಣಿಗೆ

    ಮಾಳವಿಕ ಸೋದ್​ ಸೇರ್ಪಡನೆಗೊಂಡ ಬಳಿಕ ಮಾತನಾಡಿದ ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ರಾಜ್ಯ ಚುನಾವಣೆಗೆ ಮುಂಚಿತವಾಗಿ ನಡೆದ ಈ ಬೆಳವಣಿಗೆಯನ್ನು ಆಟದ ದೊಡ್ಡ ಬದಲಾವಣೆ ಎಂದು ಬಣ್ಣಿಸಿದ್ದಾರೆ.
    ಯುವ ಮತ್ತು ವಿದ್ಯಾವಂತ ಮಹಿಳೆ ಆಗಿರುವ ಮಾಳವಿಕಾ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾರೆ. ಅವರ ಈ ಶಿಕ್ಷಣವು ಅವಳ ಮುಂದಿನ ರಾಜಕೀಯ ಜೀವನದಲ್ಲಿ ಸಹಾಯ ಮಾಡುತ್ತದೆ. ಎನ್‌ಜಿಒ ನಡೆಸುವ ಮೂಲಕ ಹೆಸರು ಗಳಿಸಿ ಜನಸೇವೆಗೆ ಮುಡಿಪಾಗಿಟ್ಟ ಯುವತಿಯೊಬ್ಬರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನಮಗೆ ಅತೀವ ಸಂತಸದ ವಿಷಯ ಎಂದು ಸಿದ್ದು ಅವರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿದರು

    ಇದನ್ನು ಓದಿ: ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

    ಕಳೆದ ವರ್ಷ ಸಹೋದರಿ ರಾಜಕೀಯ ಪ್ರವೇಶ ಕುರಿತು ತಿಳಿಸಿದ್ದ ಸೋನು
    ಇನ್ನು ಈ ಕುರಿತು ಮಾತನಾಡಿದ ಮಾಳವಿಕಾ ಸೂದ್, ಜನರ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯ ಧುಮುಕಿದ್ದೇನೆ. ಪಂಜಾಬ್‌ನ ಮೋಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಈ ಪಕ್ಷ ಸೇರ್ಪಡನೆ ಕಾರ್ಯ ನಡೆದಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಾಳವಿಕಾ ಸೂದ್​ ರಾಜಕೀಯಕ್ಕೆ ಧುಮುಕುವುದಾಗಿ ಘೋಷಿಸಿದ್ದರು. ಇದನ್ನು ನಟ ಸೋನು ಸೂದ್​ ಬಹಿರಂಗಪಡಿಸಿದ್ದರು.

    ಇದನ್ನು ಓದಿ: ಕೇರಳದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಪತ್ನಿ ವಿನಿಮಯ ದಂಧೆ; 7 ಜನರ ಬಂಧನ

    ಸೋನು ಸೂದ್ ಜೊತೆಗೆ ಮಾಳವಿಕಾ ಪಕ್ಷ ಸೇರ್ಪಡನೆಗೊಳ್ಳುತ್ತಿರುವ ಚಿತ್ರ ಟ್ವೀಟ್ ಮಾಡಿರುವ ಪಂಜಾಬ್​ ಯೂಥ್​​ ಕಾಂಗ್ರೆಸ್​ ಪಂಜಾಬ್ ಭವಿಷ್ಯಕ್ಕಾಗಿ ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ತಿಳಿಸಿದೆ.

    ಸ್ಟೇಟ್​ ಐಕಾನ್​ನಿಂದ ತೆಗೆದ ಚುನಾವಣಾ ಆಯೋಗ
    ಭಾರತದ ಚುನಾವಣಾ ಆಯೋಗವು ವರ್ಷದ ಹಿಂದೆ ಸೂದ್ ಅವರನ್ನು ರಾಜ್ಯದ ಐಕಾನ್ ಆಗಿ ಮಾಡಿತು. ಸೂದ್ ಸಹೋದರಿ ರಾಜಕೀಯ ಪಕ್ಷಕ್ಕೆ ಸೇರ್ಪಡನೆಗೂ ಮುನ್ನ ಪಂಜಾಬ್‌ನ ಸ್ಟೇಟ್ ಐಕಾನ್ ಆಗಿ ಸೂದ್ ಅವರ ನೇಮಕಾತಿಯನ್ನು ಚುನಾವಣಾ ಆಯೋಗ ರದ್ದುಗೊಳಿಸಿದೆ ಎಂದು ಪಂಜಾಬ್‌ನ ಮುಖ್ಯ ಚುನಾವಣಾ ಅಧಿಕಾರಿ ಎಸ್ ಕರುಣಾ ರಾಜು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
    Published by:Seema R
    First published: