Student Suicide: ಕ್ಲಾಸ್ ರೂಂ ಕಿಟಿಕಿಯಲ್ಲಿ ನೇಣು ಹಾಕಿಕೊಂಡ 8 ಕ್ಲಾಸ್ ಬಾಲಕ, ಕಾರಣ?

8ನೇ ತರಗತಿಯ ಬಾಲಕನೊಬ್ಬ (Boy) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸೋಮವಾರ 8 ನೇ ತರಗತಿಯ ವಿದ್ಯಾರ್ಥಿಯ (Student) ಮೃತದೇಹವು (Dead Body) ಆತ ಕಲಿಯುವ ಶಾಲೆಯ ಹಿಂದೆ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೌನ್‌ಪುರ(ಮೇ.10):  ಆತ್ಮಹತ್ಯೆ ಮಾಡುವವರಿಗೆ ಈಗ ವ್ಯಯಸ್ಸಿನ ಲೆಕ್ಕ ಇಲ್ಲ. ಈಗ ಆತ್ಮಹತ್ಯೆ ಕಾನ್ಸೆಪ್ಟ್ ಬದಲಾಗಿದೆ. ಗೇಮ್​ನಲ್ಲಿ ಸೋತರೆ, ಕಡಿಮೆ ಅಂಕ ಬಂದರೆ, ಅವಮಾನವಾದರೆ ಎಲ್ಲದಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೇ ಹೆಚ್ಚುತ್ತಿದೆ. ಇಂಥದ್ದೇ ಬೆಳವಣಿಗೆಯಲ್ಲಿ 8ನೇ ತರಗತಿಯ ಬಾಲಕನೊಬ್ಬ (Boy) ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಡೆದಿದೆ. ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯಲ್ಲಿ ಸೋಮವಾರ 8 ನೇ ತರಗತಿಯ ವಿದ್ಯಾರ್ಥಿಯ (Student) ಮೃತದೇಹವು (Dead Body) ಆತ ಕಲಿಯುವ ಶಾಲೆಯ ಹಿಂದೆ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಿಲೀಪ್ ಯಾದವ್ (13) ಎಂಬ ವಿದ್ಯಾರ್ಥಿ ಕಳೆದ ಕೆಲವು ದಿನಗಳಿಂದ ತರಗತಿಗಳಿಗೆ ಬರುತ್ತಿರಲಿಲ್ಲ ಎಂದು ರಾಣಿಪಟ್ಟಿ ಗ್ರಾಮದ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗೆ ಹೊರಗಿನವರು ಸಂಯೋಜಿತ ಶಾಲೆ ರಾಣಿ ಪಟ್ಟಿಗೆ ಬಂದು ವಿದ್ಯಾರ್ಥಿಯೊಬ್ಬ ಕಿಟಕಿಗೆ ಹಿಂಬದಿಯಲ್ಲಿ ಸ್ಕಾರ್ಫ್‌ನಿಂದ ನೇಣು ಬಿಗಿದಿದ್ದಾನೆ ಎಂದು ಹೇಳಿದರು ಎಂದು ಇನ್‌ಸ್ಪೆಕ್ಟರ್ ಇನ್‌ಸ್ಪೆಕ್ಟರ್, ಮಡಿಯಾಹುನ್ ಕೆ ಕೆ ಚೌಬೆ ಹೇಳಿದರು.

ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ

ಸ್ಥಳಕ್ಕೆ ಧಾವಿಸಿದ ಶಾಲಾ ಸಿಬ್ಬಂದಿ ಆತನನ್ನು ನೇಣಿನಿಂದ ಕೆಳಗಿಳಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಮೂರು ದಿನಗಳಿಂದ ಶಾಲೆಗೆ ಬರದ ಬಾಲಕ

ಕಳೆದ ಮೂರು ದಿನಗಳಿಂದ ವಿದ್ಯಾರ್ಥಿ ಶಾಲೆಗೆ ಬರುತ್ತಿಲ್ಲ ಎಂದು ಪ್ರಾಂಶುಪಾಲ ಶಶಾಂಕ್ ಮಿಶ್ರಾ ತಿಳಿಸಿದ್ದಾರೆ. ಯಾವಾಗ ಶಾಲಾ ಆವರಣಕ್ಕೆ ಬಂದು ವಿಪರೀತ ಹೆಜ್ಜೆ ಇಟ್ಟಿದ್ದಾರೋ ಗೊತ್ತಿಲ್ಲ ಎಂದರು. ಪೊಲೀಸರು ದೇಹವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ಅವರು ಹೇಳಿದರು.

ಗಂಡನ ಕೊಂದು ನಾಟಕ ಮಾಡಿದಳು

ಮದುವೆಯಾಗಿ 36 ದಿನಕ್ಕೆ ಗಂಡನನ್ನು ಹೃದಯಾಘಾತದಿಂದ (Heart Attack) ಕಳೆದುಕೊಂಡ ಆ ಯುವತಿ ಬಗ್ಗೆ ಎಲ್ಲರಿಗೂ ಕನಿಕರ ಮೂಡಿತ್ತು. ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು ಎಂದು ಮರುಗಿದ್ದರು. ಆದರೆ, ಆಕೆಯ ಅತ್ತೆಗೆ ಮಾತ್ರ ಮಗನ ಸಾವು ಸಹಜ ಸಾವು (Natural Death) ಎಂಬ ವಿಷಯ ಮನದಟ್ಟು ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ತನಿಖೆ ವೇಳೆ ಬಯಲಾಗಿದ್ದು ಶಾಕಿಂಗ್​ ಘಟನೆ.

ಇದನ್ನೂ ಓದಿ: Morning Digest: ವಿಮಾನಕ್ಕೆ ಹಕ್ಕಿ ಡಿಕ್ಕಿ, ವಧು-ವರರೇ ಅದಲು ಬದಲು, ಚಿನ್ನದ ಬೆಲೆ ಏರಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

ಮದುವೆಯಾದ ತಿಂಗಳಿಗೆ ಗಂಡ ತೀರಿ ಹೋದ ಎಂದು ಎಲ್ಲರ ಎದುರು ದುಃಖದ ತೋಡಿಕೊಂಡ ಮಧುಮಗಳೇ ಪ್ರಿಯಕರ ಮತ್ತು ಆತನ ಸ್ನೇಹಿತನ ಜೊತೆ ಆತನ ಕೊಲೆ ಮಾಡಿದ್ದಳು ಎಂಬ ಸತ್ಯ ಕೊನೆಗೂ ಬಹಿರಂಗವಾಗಿದೆ. ಗಂಡನ ಸಾವನ್ನು ಸಹಜ ಸಾವು ಎಂದು ಬಿಂಬಿಸಿ ಪ್ರಿಯಕರನೊಟ್ಟಿಗೆ ಜೀವನ ನಡೆಸುವ ಆಕೆ ಕನಸು ಮುರಟಿದ್ದು, ಇದೀಗ ಆತನ ಜೊತೆ ಜೈಲು ಸೇರುವಂತೆ ಆಗಿದೆ.

ಕಳೆದ ತಿಂಗಳು ಏಪ್ರಿಲ್ 28 ರಂದು ತೆಲಂಗಾಣ ಜಿಲ್ಲೆಯ ಸಿದ್ದಿಪೇಟ್ ಪಟ್ಟಣದಲ್ಲಿ ಇತ್ತೀಚೆಗೆ ಮದುವೆ ಯುವಕನೊಬ್ಬ ಸಾವನ್ನಪ್ಪಿದ್ದ. ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಆತನ ತಾಯಿ ಪೊಲೀಸರಿಗೆ ದೂರು ನೀಡಿದದರು. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದು, ಇದು ಆಕಸ್ಮಿಕ ಸಾವಲ್ಲ ಕೊಲೆ ಎಂಬುದನ್ನು ತನಿಖೆಯಲ್ಲಿ ಬಯಲು ಮಾಡಿದ್ದಾರೆ.

ಇದನ್ನೂ ಓದಿ: Taj Mahal Controversy: ತಾಜ್ ಮಹಲ್ ನ 22 ಕೊಠಡಿಗಳಲ್ಲಿ ಶಿವನ ವಿಗ್ರಹಗಳಿವೆ, ಮುಚ್ಚಿದ ದ್ವಾರ ತೆರೆಯುವಂತೆ ಕೋರ್ಟ್​ಗೆ ಮೊರೆ

ಏನಿದು ಘಟನೆ

19 ವರ್ಷದ ಶ್ಯಾಮಲಾ ಎಂಬ ಯುವತಿ 20 ವರ್ಷದ ಶಿವಕುಮಾರ್​ ಅನ್ನು ಪ್ರೀತಿಸುತ್ತಿದ್ದಳು. ಆದರೆ, ಕುಟುಂಬದ ಒತ್ತಾಯಕ್ಕೆ ಕಟ್ಟು ಬಿದ್ದು, ಕಳೆದ ಮಾರ್ಚ್​ 23ರಂದು ಕೆ ಚಂದ್ರಶೇಖರ್​ (24) ಎಂಬ ಯುವಕನನ್ನು ಮದುವೆಯಾಗಿದ್ದಳು. ಮದುವೆಯಾದ ಮೊದಲ ದಿನದಿಂದಲೂ ಆತನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಳು.
Published by:Divya D
First published: