Dead Body Without Hands-Legs: ರೈತರ ಪ್ರತಿಭಟನಾ ಸ್ಥಳವಾದ ಸಿಂಘು ಗಡಿಯಲ್ಲಿ ಕೈ-ಕಾಲುಗಳು ಇಲ್ಲದ ಶವ ಪತ್ತೆ!

ಘಟನೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗಿದೆ. ಕೈಯಲ್ಲಿ ದೊಣ್ಣೆ ಹಿಡಿದ ವ್ಯಕ್ತಿಯೋರ್ವ ಈ ನಿಹಾಂಗ್ಸ್ ಯುವಕ ಗುರುಗೃಂಥಸಾಹಿಬ್ ಹಾಳು ಮಾಡುತ್ತಿರುವಾಗ ಸಿಕ್ಕಿ ಹಾಕಿಕೊಂಡಿದ್ದಾನೆ. ಯುವಕನ ಈ ಅಸಭ್ಯ ವರ್ತನೆಗೆ ಆತನ ಒಂದು ಕೈ ಮತ್ತು ಕಾಲು ಕತ್ತರಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ನವದೆಹಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗುರುವಾರ ಬೆಳಗಿನ ಜಾವ ಸುಮಾರು 3.30ಕ್ಕೆ ಕೊಲೆ ನಡೆದಿದೆ ಎನ್ನಲಾಗಿದ್ದು, ಜನರು ಯುವಕನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಬೆಳಕಿಗೆ ಬಂದಿದೆ. ತಾಲಿಬಾನಿಗಳಿಗಿಂತ ಕ್ರೂರವಾಗಿ ಶಿಕ್ಷೆ ನೀಡಲಾಗಿದ್ದು, ಜನತೆಯನ್ನು ಬೆಚ್ಚಿಬೀಳಿಸಿದೆ. ಯುವಕನ ವಿರುದ್ಧ ಗುರಗ್ರಂಥ ಸಾಹಿಬ್ (Guru Granth Sahib) ಅಪವಿತ್ರಗೊಳಿಸಿದ ಆರೋಪಗಳು ಕೇಳಿ ಬಂದಿದ್ದವು. ಯುವಕನನ್ನು ಹಗ್ಗದಿಂದ ಕಟ್ಟಿ 100 ಮೀಟರ್ ಎಳೆದು ತಂದಿದ್ದಾರೆ. ನಂತರ ಅರೆನಗ್ನಗೊಳಿಸಿ ಕೊಂದು ರೈತರ ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿಯ ಬ್ಯಾರಿಕೇಡ್ ಗಳಿಗೆ ಶವ ಕಟ್ಟಿ ಹಾಕಲಾಗಿದೆ. ರೈತರ ಪ್ರತಿಭಟನೆಯ ದಿಕ್ಕು ತಪ್ಪಿಸಲು ಸಂಚು ರೂಪಿಸಲಾಗಿದೆ ಎಂಬ ಅನುಮಾನಗಳು ಸಹ ಕೇಳಿ ಬಂದಿವೆ.

  ಕೊಲೆಯಾದ ಯುವಕ ಯಾರು?

  ಮೃತ ಯುವಕನನ್ನು ಪಂಜಾಬ್ ನ ತರನತಾರನ್ ಜಿಲ್ಲೆಂiÀ ಚೀಮಾ ಗ್ರಾಮದ ಲಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ಲಖ್ಬೀರ್ ಸಿಂಗ್ ಶವದ ಕೈ ಮತ್ತು ಕಾಲು ಕತ್ತರಿಸಲಾಗಿತ್ತು. ಕತ್ತು ಮತ್ತು ದೇಹದ ಇತರ ಭಾಗಗಳಲ್ಲಿ ಮಾರಕಾಸ್ತ್ರಗಳಿಂದು ಹಲ್ಲೆ ನಡೆಸಿರುವ ಗುರುತುಗಳು ಪತ್ತೆಯಾಗಿವೆ. ಸದ್ಯ ಪೊಲೀಸರು ಅಪರಿಚಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶವವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

  ಕೊಲೆಯ ವಿಡಿಯೋ ವೈರಲ್:

  ಘಟನೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗಿದೆ. ಕೈಯಲ್ಲಿ ದೊಣ್ಣೆ ಹಿಡಿದ ವ್ಯಕ್ತಿಯೋರ್ವ ಈ ನಿಹಾಂಗ್ಸ್ ಯುವಕ ಗುರುಗೃಂಥಸಾಹಿಬ್ ಹಾಳು ಮಾಡುತ್ತಿರುವಾಗ ಸಿಕ್ಕಿ ಹಾಕಿಕೊಂಡಿದ್ದಾನೆ. ಯುವಕನ ಈ ಅಸಭ್ಯ ವರ್ತನೆಗೆ ಆತನ ಒಂದು ಕೈ ಮತ್ತು ಕಾಲು ಕತ್ತರಿಸಲಾಗುತ್ತದೆ. ಗುರುಗೃಂಥಸಾಹಿಬ್ ಅಪವಿತ್ರಗೊಳಿಸಿದ ಕಾರಣಕ್ಕೆ ಈ ಶಿಕ್ಷೆ ನೀಡುತ್ತಿದ್ದೇವೆ. ನಾವು ಈ ಯುವಕನನ್ನು ಇಲ್ಲಿಯೇ ಕೊಲ್ಲುತ್ತೇವೆ ಎಂಬ ಮಾತುಗಳನು ವಿಡಿಯೋದಲ್ಲಿ ಕೇಳಬಹುದು. ಇನ್ನು ಕೆಲವರು ಪೊಲೀಸರು ಬಂದು ಮುಂದಿನ ಕ್ರಮ ತೆಗೆದುಕೊಳ್ಳಲಿ ನಮಗೆ ಯಾವುದೇ ಭಯವಿಲ್ಲ. ಇಲ್ಲವಾದ್ರೆ ಗುರುಮಹಾರಾಜರ ಬಗ್ಗೆ ನಮಗೆ ಗೌರವ ಇಲ್ಲ ಎಂಬಂತಾಗಲಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

  ಡಿಎಸ್‍ಪಿ ಪ್ರತಿಕ್ರಿಯೆ:

  ಈ ಸಂಬಂಧ ಪ್ರತಿಕ್ರಿಯಿಸಿರುವ ಡಿಎಸ್‍ಪಿ ಹಂಸರಾಜ್, ಬೆಳಗ್ಗೆ 5 ಗಂಟೆಗೆ ಠಾಣೆಗೆ ಸುದ್ದಿ ತಿಳಿಯಿತು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಎಎಸ್‍ಐ ಸಂದೀಪ್ ಟೀಂ ತೆರಳಿದೆ. ಅಂಡರ್ ವಿಯರ್ ಧರಿಸಿದ ಯುವಕನ ಶವವನ್ನು ನೇತು ಹಾಕಲಾಗಿತ್ತು. ಸ್ಥಳದಲ್ಲಿ ಜನರಿಂದ ಮಾಹಿತಿ ಪಡೆದುಕೊಳ್ಳಲು ಪೊಲೀಸರು ಪ್ರಯತ್ನಿಸಿದ್ರೂ ಯಾರೂ ಉತ್ತರ ನೀಡಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಗಂಭೀರವಾಗಿದ್ದು, ವಿಷಯಾಂತರಕ್ಕಾಗಿ ಸುಳ್ಳು ಸುದ್ದಿಗಳು ಹಬ್ಬಬಹುದು. ಎಲ್ಲವೂ ತನಿಖೆಂiÀಲ್ಲಿ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ನೀಡಲು ಹಿಂದೇಟು ಹಾಕಿದರು.

  ಇದನ್ನೂ ಓದಿ: Facebook Cheating: ಫೇಸ್​ಬುಕ್​ನಲ್ಲಿ ನಗ್ನ ಕರೆ ಮಾಡಿದ ಮಾಯಾಂಗನೆ, ವಿಡಿಯೋ ಕಾಲ್​ ರೆಕಾರ್ಡ್ ಮಾಡಿ ಬ್ಲ್ಯಾಕ್​ಮೇಲ್

  ಯುವಕನು ಸಂಚಿನಲ್ಲಿ ಸಿಲುಕಿಸಲಾಗಿದೆ. ಇದಕ್ಕಾಗಿ ಯುವಕನಿಗೆ ಮೂವತ್ತು ಸಾವಿರ ರೂಪಾಯಿ ನೀಡಲಾಗಿತ್ತು. ಯುವಕ ಕುದುರೆಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದನು ಎಂದು ನಿಹಾಂಗ ಸಮುದಾಯ ಹೇಳಿದೆ. ಘಟನೆ ಬಳಿಕ ಹಲವು ವಿಡಿಯೋಗಳು ಮುಂದೆ ಬರುತ್ತಿವೆ. ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ. ಸಾವಿಗೂ ಕೆಲವೇ ಕ್ಷಣಗಳ ಮುಂಚೆ ಯುವಕನ ಜೊತೆ ಸ್ಥಳೀಯರು ಮಾತನಾಡಿರುವ ಮತ್ತೊಂದು ವಿಡಿಯೋ ಹೊರಬಂದಿದೆ. ಈ ವಿಡಿಯೋದಲ್ಲಿ ಯುವಕ ತನ್ನ ಹೆಸರು ಮತ್ತು ಊರಿನ ಹೆಸರು ಹೇಳಿದ್ದಾನೆ.

  ವರದಿ: ಮೊಹ್ಮದ್​ ರಫೀಕ್​​ ಕೆ 
  Published by:Kavya V
  First published: