Terrorist Attack| ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಉಗ್ರರು ಫಿನಿಶ್; ನಾಲ್ಕು ದಿನಗಳ ನಂತರ ಮೃತ ಸೈನಿಕರ ದೇಹ ಪತ್ತೆ!

Jammu Kashmir; ಗುರುವಾರ ಉಗ್ರರ ಗುಂಡಿಗೆ 5 ಜನ ಸೈನಿಕರು ಬಲಿಯಾಗಿದ್ದರು. ಇದರ ಬೆನ್ನಿಗೆ ಅದೇ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೈಫಲ್ ಮ್ಯಾನ್ ಯೋಗಂಬರ್ ಸಿಂಗ್ ಮತ್ತು ರೈಫಲ್ ಮ್ಯಾನ್ ವಿಕ್ರಮ್ ಸಿಂಗ್ ನೇಗಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿರುವ ಭಾರತೀಯ ಸೇನೆ.

ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿರುವ ಭಾರತೀಯ ಸೇನೆ.

 • Share this:
  ಶ್ರೀನಗರ​ (ಅಕ್ಟೋಬರ್​ 17); ಗಡಿ ಭಾಗದಲ್ಲಿ ಉಗ್ರರ ನುಸುಳುವಿಕೆ ಇತ್ತೀಚೆಗೆ ಅಧಿಕವಾಗುತ್ತಿದೆ. ಭಾರತದಲ್ಲಿ ಪ್ರಕ್ಷುಬ್ಧತೆಯನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಪಾಕಿಸ್ತಾನ (Pakistan) ಬೆಂಬಲಿಯ ಅಲ್​ ಖೈದ (al-qaeda) ಉಗ್ರ ಸಂಘಟನೆ ಇತ್ತೀಚೆಗೆ ಭಾರತದಲ್ಲಿ ಭಯೋತ್ಪಾದನೆ (Terrorist Acivity) ಚಟುವಟಿಕೆ ನಡೆಸುವ ಬಗ್ಗೆ ಎರಡು ವಿಡಿಯೋ ಸಹ ಬಿಡುಗಡೆ ಮಾಡಿತ್ತು. ಈ ಬೆನ್ನಿಗೆ ಉಗ್ರರು ಅಡಗಿದ್ದಾರೆ ಎಂಬ ಮಾಹಿತಿಯ ಮೇಲೆ ಭಾರತೀಯ ಸೇನೆ ಕಳೆದ ಗುರುವಾರ ಕಾಶ್ಮೀರದ ಫೂಂಚ್​ (Poonch) ನಗರದಲ್ಲಿ ಉಗ್ರರಿಗಾಗಿ ತೀವ್ರ ಹುಡುಕಾಟ ನಡೆಸಿತ್ತು. ಈ ವೇಳೆ ಉಗ್ರರು ಸೈನಿಕರ ವಿರುದ್ಧ ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ 5 ಜನ ಹುತಾತ್ಮರಾಗಿದ್ದರು. ಹೀಗಾಗಿ ಈ ಭಾಗದಲ್ಲಿ ಸೇನೆ ಕೂಬಿಂಗ್ ಕಾರ್ಯಾಚರಣೆ ನಡೆಸಿ 48 ಗಂಟೆಗಳಲ್ಲಿ ಎಲ್ಲಾ ಉಗ್ರರನ್ನೂ ಹೊಡೆದುರುಳಿಸಿ ಭಾರತೀಯ ಸೈನಿಕರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ ಎನ್ನಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು 9 ಜನ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

  ಉಗ್ರರು ಫಿನಿಶ್, 9 ಜನ ಸೈನಿಕರು ಹುತಾತ್ಮ:

  ಮೂಲಗಳ ಪ್ರಕಾರ, ಸೇನೆಯು ಗುರುವಾರ ಭಯೋತ್ಪಾದಕರಿಂದ ಭಾರೀ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಸೇರಿದಂತೆ ಕೆಲವು ಯೋಧರು ನಾಪತ್ತೆಯಾಗಿದ್ದರು. ಪೂಂಚ್​-ಮೆಂಧರ್ ನ ನಾರ್ ಖಾಸ್​ಗೆ ಸೇರಿದ ದಟ್ಟ ಅರಣ್ಯ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ನಾಪತ್ತೆಯಾಗಿದ್ದ ಸೈನಿಕರು ಮತ್ತು ಉಗ್ರರ ಭೆಟೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಸುಬೇದಾರ್ ಅಜಯ್ ಸಿಂಗ್ ಮತ್ತು ನಾಯಕ್ ಹರೇಂದ್ರ ಸಿಂಗ್ ಅವರು ಸಾವನ್ನಪ್ಪಿದ್ದಾರೆ ಎಂದು ಸೇನೆಯು ಇಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  ಗುರುವಾರ ಉಗ್ರರ ಗುಂಡಿಗೆ 5 ಜನ ಸೈನಿಕರು ಬಲಿಯಾಗಿದ್ದರು. ಇದರ ಬೆನ್ನಿಗೆ ಅದೇ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೈಫಲ್ ಮ್ಯಾನ್ ಯೋಗಂಬರ್ ಸಿಂಗ್ ಮತ್ತು ರೈಫಲ್ ಮ್ಯಾನ್ ವಿಕ್ರಮ್ ಸಿಂಗ್ ನೇಗಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಕೂಂಬಿಗ್ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿದಿದ್ದು ಪೂಂಚ್ ಅರಣ್ಯ ಭಾಗದಲ್ಲಿ ನುಸುಳಿದ್ದ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆಯು ಖಚಿತಪಡಿಸಿದೆ.

  ಇದನ್ನೂ ಓದಿ: Fake Al-Qaeda Video| ಭಾರತದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಪಾಕ್ ಮೂಲದ ಉಗ್ರರಿಂದ ನಕಲಿ 'ಅಲ್​ ಖೈದಾ' ವಿಡಿಯೋ ಬಿಡುಗಡೆ!

  ಉಗ್ರರಿಗೆ ಸಹಕರಿಸುವ 700 ಜನರ ಬಂಧನ:

  ಇತ್ತೀಚೆಗೆ ಗಡಿ ಭಾಗದಲ್ಲಿ ಉಗ್ರ ಚಟುವಟಿಕೆ ಅಧಿಕವಾಗುತ್ತಿದೆ. ಯುದ್ಧ ವಿರಾಮ ನಿಯಮವನ್ನು ಪಾಕಿಸ್ತಾನದ ಸೇನೆ ಆಗಿಂದಾಗ್ಗೆ ಉಲ್ಲಂಘನೆ ಮಾಡುತ್ತಲೇ ಇದೆ. ಈ ನಡುವೆ ಕಳೆದ ವಾರ ಉಗ್ರರು ಜನ ನಿಬಿಡ ಪ್ರದೇಶದಲ್ಲಿ ಶೂಟೌಟ್ ಮಾಡುವ ಮೂಲಕ 5 ಜನ ನಾಗರೀಕರನ್ನು ಹತ್ಯೆ ಮಾಡಿದ್ದರು. ಈ ಘಟನೆ ನಂತರ ಭಾರತೀಯ ಸೇನೆ ಉಗ್ರರ ವಿರುದ್ಧ ಕಠಿಣ ಕಾರ್ಯಾಚರಣೆಗೆ ಮುಂದಾಗಿದ್ದು, ಉಗ್ರರಿಗೆ ಸಹಾಯ ಮಾಡುವ 700 ಜನರನ್ನು ಈವರೆಗೆ ಬಂಧಿಸಿ ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
  Published by:MAshok Kumar
  First published: