ಸೂಟ್​ಕೇಸ್​, ಫ್ರಿಡ್ಜ್​​ ಮತ್ತು ಕಪಾಟಿನಲ್ಲಿ ಸಿಕ್ಕವು ಮೃತದೇಹಗಳು!

news18
Updated:August 21, 2018, 3:28 PM IST
ಸೂಟ್​ಕೇಸ್​, ಫ್ರಿಡ್ಜ್​​ ಮತ್ತು ಕಪಾಟಿನಲ್ಲಿ ಸಿಕ್ಕವು ಮೃತದೇಹಗಳು!
news18
Updated: August 21, 2018, 3:28 PM IST
ನ್ಯೂಸ್​ 18 ಕನ್ನಡ

ಅಲಹಾಬಾದ್​,(ಆ.21): ಭಯಭೀತಗೊಳಿಸಿದ್ದ ದೆಹಲಿಯ ಬುರಾರಿ ಪ್ರಕರಣ ಮಾಸುವ ಮುನ್ನವೇ ಅಂತಹದೇ ಪ್ರಕರಣವನ್ನು ನೆನಪಿಸುವಂತಹ ಘಟನೆ ಉತ್ತರ ಪ್ರದೇಶದಲ್ಲಿ ಅಲಹಾಬಾದಿನಲ್ಲಿ ನಡೆದಿದ್ದು, ಒಂದೇ ಮನೆಯಲ್ಲಿ ಅನುಮಾನಾಸ್ಪದವಾಗಿ ಐದು ಜನ ಸಾವೀಗೀಡಾಗಿದ್ದಾರೆ.

ಮನೆಯ ಯಜಮಾನ ಮನೋಜ್​ ಕುಶ್ವಾಡ(35) ಮೃತದೇಹ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡುಬಂದರೆ, ಆತನ ಹೆಂಡತಿಯ ಮೃತ ದೇಹ ರೆಫ್ರಿಜರೇಟರ್​ನಲ್ಲಿ ಹಾಗೂ ಉಳಿದ ಮೂವರು ಮಕ್ಕಳ ಮೃತ ದೇಹಗಳು ತುಂಡರಿಸಿ ಸೂಟ್​ ಕೇಸ್​ ಮತ್ತು ಕಪಾಟಿನಲ್ಲಿ ತುಂಬಿಸಿ ಇಡಲಾಗಿದೆ ಎನ್ನಲಾಗಿದೆ.

ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಗಂಡನೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮನೋಜ್​ ಕುಶ್ವಾಡ ಆತನ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಮಾಡಿ ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಕರಣದ ಬೆನ್ನತ್ತಿದ್ದ ಅಲಹಾಬಾದ್​ ಪೊಲೀಸ್​ ಅಧಿಕಾರಿ ನಿತಿನ್​ ತಿವಾರಿ ತಿಳಿಸಿದ್ದಾರೆ.

ತುಂಬಾ ದಿನಗಳಾದರೂ ಆ ಕುಟುಂಬದವರು ಎಲ್ಲೂ ಕಾಣಿಸದಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ANI ನ್ಯೂಸ್​ ಏಜೆನ್ಸಿ ವರದಿ ಮಾಡಿದೆ.

ಜುಲೈ ನಲ್ಲಿ ದೆಹಲಿಯ ಬುರಾರಿ ಎಂಬಲ್ಲಿ ಒಂದೇ ಮನೆಯ 11 ಜನ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಇದಕ್ಕೆ ಮೂಢನಂಬಿಕೆಯೇ ಕಾರಣ ಎನ್ನಲಾಗಿತ್ತು. ಇದು ಆತ್ಮಹತ್ಯೆಯೋ ಕೊಲೆಯೋ ಎಂಬುದು ತಿಳಿದು ಬಂದಿಲ್ಲ. ಆತ್ಮಹತ್ಯೆಯಾದರೆ ನಿಖರ ಕಾರಣ ಏನೆಂಬುದು ಗೊತ್ತಿಲ್ಲ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ