• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Kerala Boat Tragedy: ಕೇರಳದಲ್ಲಿ ಬೋಟ್ ಮುಳುಗಿ 16 ಮಂದಿ ಸಾವು! ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗಲೇ ದುರಂತ

Kerala Boat Tragedy: ಕೇರಳದಲ್ಲಿ ಬೋಟ್ ಮುಳುಗಿ 16 ಮಂದಿ ಸಾವು! ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದಾಗಲೇ ದುರಂತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೇರಳದ ತನೂರ್ ತುವಾಲ್ ಬೀಚ್​ನಲ್ಲಿ ಪ್ರವಾಸಿಗರಿದ್ದ ದೋಣಿಯೊಂದು ಪಲ್ಟಿಯಾದ ಪರಿಣಾಮ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

 • News18 Kannada
 • 3-MIN READ
 • Last Updated :
 • Kerala, India
 • Share this:

ಮಲಪ್ಪುರಂ( ಕೇರಳ): ಕೇರಳದ (Kerala Boat Tragedy) ತನೂರ್ ತುವಾಲ್ ಬೀಚ್​ನಲ್ಲಿ ಪ್ರವಾಸಿಗರಿದ್ದ (Tourist)  ದೋಣಿಯೊಂದು (Boat) ಪಲ್ಟಿಯಾದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಮಕ್ಕಳೂ (Children)  ಸೇರಿದ್ದಾರೆ. ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ಮತ್ತು ಮೀನುಗಾರರ ನೇತೃತ್ವದಲ್ಲಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ (Rescue operation)  ನಡೆಯುತ್ತಿದೆ. ಗಾಯಾಳುಗಳನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತರು ಮಲಪ್ಪುರಂ ಜಿಲ್ಲೆಯ ವಿವಿಧ ಭಾಗದವರು ಎಂದು ತಿಳಿದುಬಂದಿದೆ. ಸಧ್ಯಕ್ಕೆ ಮೃತರ ವಿವರಗಳು ಲಭ್ಯವಿವಾಗಿಲ್ಲ. ಮೃತರಲ್ಲಿ ನಾಲ್ವರು ಮಕ್ಕಳಿದ್ದಾರೆಂದು ವರದಿಯಾಗಿದೆ. ಭಾನುವಾರ ಸಂಜೆ 6:30 ರಿಂದ 7 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.


35 ಮಂದಿ ಇದ್ದ ಬೋಟ್​ ಪಲ್ಟಿ


ಸ್ಥಳೀಯರ ಪ್ರಕಾರ ದೋಣಿಯಲ್ಲಿ ಸುಮಾರು 35 ಮಂದಿ ಪ್ರಯಾಣಿಕರಿದ್ದರು. ಇದುವರೆಗೆ ಎಂಟು ಮಂದಿಯನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಪೊಲೀಸರು, ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳು ಮತ್ತು ಸ್ಥಳೀಯರು ಭಾಗಿಯಾಗಿದ್ದಾರೆ. ರಕ್ಷಿಸಲಾದ ಹಲವು ವ್ಯಕ್ತಿಗಳ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಆನಂದ ಯಾತ್ರೆಗೆ ತೆರಳಿದ್ದ ಬೋಟ್ ದಿನದ ಕೊನೆಯ ಪ್ರಯಾಣದ ವೇಳೆ ಅಪಘಾತಕ್ಕೀಡಾಗಿದೆ. ಅಪಘಾತದ ಮಾಹಿತಿ ತಿಳಿಯುವಷ್ಟರಲ್ಲಿ ಕತ್ತಲು ಆವರಿಸಿತ್ತು. ಅಪಘಾತದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.


ಇದನ್ನೂ ಓದಿ: Manipur Updates: ಮಣಿಪುರ ಹಿಂಸಾಚಾರಕ್ಕೆ 54 ಮಂದಿ ಬಲಿ; ಸಹಜ ಸ್ಥಿತಿಯತ್ತ ಮರಳಿದ ಬಳಿಕ ಕರ್ಫ್ಯೂ ಸಡಿಲಿಕೆ


ಅಗ್ನಿಶಾಮಕದಳದಿಂದ ರಕ್ಷಣಾ ಕಾರ್ಯ


ಕೇರಳ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಆಗಮನದ ಮೊದಲು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೆ ಪ್ರದೇಶದಲ್ಲಿ ಜನಸಂದಣಿಯು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಯಿತು. ಕೋಝಿಕ್ಕೋಡ್ ಮತ್ತು ಮಲಪ್ಪುರಂನಿಂದ ಅಗ್ನಿಶಾಮಕ ದಳದ ಘಟಕಗಳು ಮತ್ತು ವಿಪತ್ತು ನಿರ್ವಹಣಾ ಪಡೆಗಳು ಕೂಡಲೇ ಸ್ಥಳಕ್ಕೆ ಆಗಮಿಸಿದವು. ದೋಣಿಯನ್ನು ಮೇಲೆತ್ತಿ ದಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.
8 ಜನರ ರಕ್ಷಣೆ


ಕಾರ್ಯಾಚರಣೆಗೆ ಭೌಗೋಳಿಕ ವಿಶೇಷತೆಯೂ ಅಡ್ಡಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದು, ಬೋಟ್ ಮುಳುಗಡೆಯಾಗಿರುವ ಸ್ಥಳ ತುಂಬಾ ಆಳವಾಗಿದೆ ಮತ್ತು ಕೆಳಭಾಗವು ಕೆಸರುಮಯವಾಗಿದೆ ಎಂದು ತಿಳಿಸಿದ್ದಾರೆ.


ಆದರೂ ಸುಮಾರು ಎಂಟು ಜನರನ್ನು ರಕ್ಷಿಸಿ ಪರಪ್ಪನಂಗಡಿ, ಕೊಟ್ಟಕ್ಕಲ್, ತಿರೂರ್ ಮತ್ತು ತನೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ರಕ್ಷಿಸಲ್ಪಟ್ಟವರು ಪರಪ್ಪನಂಗಡಿ ಮತ್ತು ತಾನೂರ್ ಪ್ರದೇಶದವರು. ರಜೆಯ ಕಾರಣ ಬೀಚ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಪ್ರಯಾಣಿಕರು ಪ್ರವಾಸ ಮುಗಿಸಿ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

top videos
  First published: