ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ತಂದೆ, ನಿವೃತ್ತ ಐಎಎಸ್​ ಅಧಿಕಾರಿ ಯುಗಂಧರ್​ ವಿಧಿವಶ

ಜಗತ್ತಿನ ಸಾಫ್ಟ್​ವೇರ್​ ದೈತ್ಯ ಸಂಸ್ಥೆಯಾದ ಮೈಕ್ರೊಸಾಫ್ಟ್​ ಸಿಇಒ ಸತ್ಯ ನಾದೆಲ್ಲ ಅವರ ತಂದೆಯಾಗಿರುವ ಯುಗಂಧರ್​ ಅವರ ಸಾವಿಗೆ ಹಲವು ಐಎಎಸ್​ ಅಧಿಕಾರಿಗಳು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

HR Ramesh | news18-kannada
Updated:September 13, 2019, 10:01 PM IST
ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ತಂದೆ, ನಿವೃತ್ತ ಐಎಎಸ್​ ಅಧಿಕಾರಿ ಯುಗಂಧರ್​ ವಿಧಿವಶ
ಸತ್ಯ ನಾದೆಲ್ಲಾ ಮತ್ತು ಅವರ ತಂದೆ ಬಿ.ಎನ್. ಯುಗಂಧರ್
  • Share this:
ಹೈದರಾಬಾದ್​: ನಿವೃತ್ತ ಐಎಎಸ್​ ಅಧಿಕಾರಿ ಹಾಗೂ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲಾ ಅವರ ತಂದೆ ಬಿ.ಎನ್. ಯುಗಂಧರ್​(82) ಅವರು ಇಂದು ಹೈದರಾಬಾದ್​ನಲ್ಲಿ ವಿಧಿವಶರಾದರು.

1962ನೇ ಬ್ಯಾಚಿನ ಐಎಎಸ್​ ಅಧಿಕಾರಿಯಾದ ಯುಗಂಧರ್ ಅವರು ಪಿ.ವಿ.ನರಸಿಂಹರಾವ್​ ಸರ್ಕಾರದಲ್ಲಿ ಪ್ರಧಾನಮಂತ್ರಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು. ಮುಸ್ಸೂರಿಯ ಲಾಲ್​ ಬಹದ್ದೂರ್ ಶಾಸ್ತ್ರಿ ನ್ಯಾಷನಲ್​ ಆಕಾಡೆಮಿ ಆಫ್​ ಅಡ್ಮಿನಿಸ್ಟ್ರೇಷನ್​ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 2004-09ರ ಅವಧಿಯಲ್ಲಿ ಯೋಜನಾ ಆಯೋಗದ ಸದಸ್ಯರಾಗಿಯೂ ಇದ್ದರು. ​ ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಯುಗಂಧರ್​ ಕಾರ್ಯನಿರ್ವಹಿಸಿದ್ದರು.

ಇದನ್ನು ಓದಿ: ಟ್ರಂಪ್​​ರ ವಲಸೆ ನೀತಿ ವಿರುದ್ಧ ಮೈಕೋಸಾಫ್ಟ್ ಸಿಇಓ ಸತ್ಯ ನಾದೆಲ್ಲ ಕೆಂಗಣ್ಣು

ಜಗತ್ತಿನ ಸಾಫ್ಟ್​ವೇರ್​ ದೈತ್ಯ ಸಂಸ್ಥೆಯಾದ ಮೈಕ್ರೋಸಾಫ್ಟ್​ ಸಿಇಒ ಸತ್ಯ ನಾದೆಲ್ಲ ಅವರ ತಂದೆಯಾಗಿರುವ ಯುಗಂಧರ್​ ಅವರ ಸಾವಿಗೆ ಹಲವು ಐಎಎಸ್​ ಅಧಿಕಾರಿಗಳು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್​ ಅವರು ಯುಗಾಂಧರ್​ ಅವರ ಸರಳತೆ, ಪ್ರಾಮಾಣಿಕತೆ ವೃತ್ತಬದ್ಧತೆಯನ್ನು ಸ್ಮರಿಸಿಕೊಂಡಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading