Ganeshotsav: 183 ರಸ್ತೆಗುಂಡಿ ಸೃಷ್ಟಿಸಿದ ಆರೋಪ; ಗಣೇಶನಿಗೆ 3.66 ಲಕ್ಷ ದಂಡ!

ಮುಂಬೈ ಗಣೇಶ

ಮುಂಬೈ ಗಣೇಶ

ಪ್ರತಿ ರಸ್ತೆಗುಂಡಿಗೂ ತಲಾ 2 ಸಾವಿರ ದಂಡ ವಿಧಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಗೆ ಸೂಚಿಸಿದೆ.

  • Share this:

ಮುಂಬೈ: ಗಣೇಶೋತ್ಸವ (Ganeshotsav) ನಡೆಸಿ ರಸ್ತೆಯಲ್ಲಿ 183 ಗುಂಡಿಗಳನ್ನು ಸೃಷ್ಟಿಸಿದ ಆರೋಪದಡಿ ಬೃಹನ್​ಮುಂಬೈ ಮುನಿಸಿಪಲ್ ಕಾರ್ಪೊರೇಷನ್​ ಲಾಲ್ ಬೌಚಾ ರಾಜಾ ಗಣೇಶನಿಗೆ (Lalbaugcha Raja Mandal) ಒಟ್ಟು 3.66 ಲಕ್ಷ ದಂಡ ವಿಧಿಸಲಾಗಿದೆ. ಪ್ರತಿ ರಸ್ತೆಗುಂಡಿಗೂ ತಲಾ 2 ಸಾವಿರ ದಂಡ ವಿಧಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಗೆ (BMC Fine) ಸೂಚಿಸಿದೆ. ಗಣಪತಿ ಕೂರಿಸಲು ರಸ್ತೆಯನ್ನು ಅಗೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಎಂಸಿ ಅಧಿಕಾರಿಗಳು ಗಣಪತಿ ಹಬ್ಬ ಮುಗಿದ ನಂತರ ರಸ್ತೆಗಳ ಪರಿಶೀಲನೆ ನಡೆಸಿ ರಸ್ತೆಯ ಸ್ಥಿತಿಗತಿಗಳನ್ನು ಪರಿಶೀಲಿಸುತ್ತಾರೆ. ಈ ಪರಿಶೀಲನೆಯಲ್ಲಿ ಲಾಲ್ ಬೌಚಾ ರಾಜಾ ಗಣೇಶನಿಂದ ರಸ್ತೆ ಗುಂಡಿ ಸೃಷ್ಟಿಯಾಗಿದ್ದು ಕಂಡುಬಂದಿದೆ. ಇದೇ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ.


ಲಾಲ್ ಬೌಚಾ ಗಣೇಶ ದೇಶದಲ್ಲೊಂದೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ.   ಮುಂಬೈನ ಲಾಲ್ ಬೌಚಾ ಗಣೇಶನ ವಿಸರ್ಜನೆಗೆ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 9ರಂದು ಲಾಲ್ ಬೌಚಾ ಗಣೇಶನನ್ನು ವಿಸರ್ಜನೆ ಮಾಡಲಾಗಿತ್ತು.


ಮುಂಬೈನಲ್ಲಿ ಮಕ್ಕಳ ಕಳ್ಳರ ಬಗ್ಗೆ ವದಂತಿ! ಸುಳ್ಳು ಸಂದೇಶಗಳನ್ನು ನಂಬದಂತೆ ಸಾರ್ವಜನಿಕರಿಗೆ ಪೊಲೀಸರ ಮನವಿ
ಮಕ್ಕಳ ಅಪಹರಣದ (Child abduction) ಸಂದೇಶಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ನಂಬಬೇಡಿ ಎಂದು ಮುಂಬೈ ಪೊಲೀಸರು ಸೋಮವಾರ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಈ ಮಕ್ಕಳ ಅಪಹರಣದ ಬಗ್ಗೆ ಆಗಾಗ್ಗೆ ಸೋಶಿಯಲ್‌ ಮೀಡಿಯಾಗಳಲ್ಲಿ (Social Media) ವಿಡಿಯೋ ಸಂದೇಶಗಳು ಹರಿದಾಡುತ್ತಲೇ ಇರುತ್ತವೆ. ನಿಮ್ಮ ಮಕ್ಕಳ ಬಗ್ಗೆ ಕಾಳಜಿ ಇರಲಿ, ಹೀಗೆ ಯಾರೋ ಬಂದು ನಿಮ್ಮ ಮಕ್ಕಳನ್ನು ಕಿಡ್ನಾಪ್‌ ಮಾಡುತ್ತಾರೆ ಅಥವಾ ಮಕ್ಕಳ ಕಳ್ಳರ ಗುಂಪು ಬಂದಿದೆ ಎಂಬೆಲ್ಲಾ ಸುಳ್ಳು ಮಾಹಿತಿಯನ್ನು ಸಮಾಜಕ್ಕೆ ರವಾನೆ ಮಾಡುತ್ತಿರುತ್ತಾರೆ. ಇದನ್ನು ನೋಡಿದ ಪೋಷಕರು (Parents) ಕೂಡ ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ. ಇದೇ ರೀತಿ ಸುಳ್ಳು ವದಂತಿಗಳನ್ನು (Rumours) ಮುಂಬೈನಲ್ಲಿ ವ್ಯಾಪಕವಾಗಿ ಹಬ್ಬಿಸಲಾಗುತ್ತಿದೆ.


ಇದನ್ನೂ ಓದಿ: Flood Alert: ತನ್ನಿಂದ ತಾನೇ ತೆರೆದುಕೊಂಡ ಡ್ಯಾಂ ಗೇಟ್! ಭೀಕರ ಪ್ರವಾಹದ ಭೀತಿ


ಸುಳ್ಳು ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಖಾಕಿ ಮನವಿ
ಈ ಬಗ್ಗೆ ಎಚ್ಚರ ವಹಿಸಿದ ಮುಂಬೈ ಪೊಲೀಸರು ಪೋಷಕರ ಆತಂಕ ಕಡಿಮೆ ಮಾಡಲು ಈ ಸುಳ್ಳು ವದಂತಿಗಳನ್ನು ನಂಬಬೇಡಿ ಎಂದು ಕೋರಿದ್ದಾರೆ.


ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚಿದ ಸುಳ್ಳು ಮಾಹಿತಿ
ಮುಂಬೈನಲ್ಲಿ ಕಳೆದ ವಾರದಿಂದ ಫೇಸ್‌ ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಪೋಷಕರು, ಸಾರ್ವಜನಿಕರು, ಮಕ್ಕಳ ಅಪಹರಣದ ಬಗ್ಗೆ ಇನ್ನಿಲ್ಲದ ಮೆಸೇಜ್ ಗಳು, ವಿಡಿಯೋಗಳು, ವಾಯ್ಸ್‌ ಮೆಸೇಜ್‌ ಹೀಗೆ ಹಲವು ಸುಳ್ಳು ಮಾಹಿತಿಗಳಿರುವ ಸಂದೇಶಗಳನ್ನು ಸ್ವೀಕರಿಸುತ್ತಿದ್ದಾರೆ.


ಮುಂಬೈನ ಹಲವಾರು ಪ್ರದೇಶಗಳಲ್ಲಿ ಶಾಲೆ ಮತ್ತು ಮನೆಯ ಆವರಣದಲ್ಲಿ ಆಟ ಆಡುತ್ತಿರುವ ಮಕ್ಕಳನ್ನು ಯಾರೋ ಬಂದು ಕದ್ದೊಯ್ಯುತ್ತಿದ್ದಾರೆ ಎಂದು ಈ ಎಲ್ಲಾ ವದಂತಿಭರಿತ ಸಂದೇಶಗಳು ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟ್ಸಾಪ್ ಮೂಲಕ ಹರಡಿದ ಒಂದು ಸಂದೇಶವನ್ನು ಫ್ರೀ ಪ್ರೆಸ್ ಜರ್ನಲ್ ಪರಿಶೀಲಿಸಿದ್ದು, ಆ ಸಂದೇಶದಲ್ಲಿ "ವಿಕ್ರೋಲಿಯ ನಾಗರಿಕ ಶಾಲೆಯ ಇಬ್ಬರು ಮಕ್ಕಳನ್ನು ಶಾಲೆಯ ಹೊರಗೆ ಕಾಯುತ್ತಿದ್ದ ಪುರುಷರ ಗ್ಯಾಂಗ್ ಅಪಹರಿಸಿದ್ದಾರೆ" ಎಂಬ ಮಾಹಿತಿ ಇತ್ತು.


ಇದನ್ನೂ ಓದಿ: Shocking News: ನ್ಯಾಯಾಧೀಶರಿಂದಲೇ ತೀರ್ಪು ನಕಲು! ತನಿಖೆಗೆ ಆದೇಶ


ಈ ಸಂದೇಶವನ್ನು ಅಪರಿಚಿತ ವ್ಯಕ್ತಿಯೊಬ್ಬರು ವಾಯ್ಸ್‌ ನೋಟ್‌ ಮೂಲಕ ಹಲವರಿಗೆ ಫಾರ್ವಡ್‌ ಮಾಡಿದ್ದಾರೆ. ಈ ರೀತಿಯ ಮೆಸೇಜ್‌ ಗಳು ಮುಂಬೈನ ಪೋಷಕರಲ್ಲಿ ಸಾಕಷ್ಟು ಭೀತಿಯನ್ನು ಉಂಟು ಮಾಡಿದೆ. ಅಂತೆಯೇ, ಕಂಜುರ್ಮಾರ್ಗ್, ಘಾಟ್ಕೋಪರ್, ಅಂಧೇರಿ, ಜೋಗೇಶ್ವರಿ ಮುಂತಾದ ಪ್ರದೇಶಗಳಲ್ಲಿ ಇದೇ ರೀತಿಯ ಸುಳ್ಳು ಮಾಹಿತಿಯನ್ನು ಹರಡುವ ಅನೇಕ ನಕಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.

First published: