ಕಾಂಕ್ಸಾ, ಪಶ್ಚಿಮ ಬಂಗಾಳ: ಪ್ರಾಣಿ ಪಕ್ಷಿಗಳಿಗೆ (Birds-Animals) ಮಾತು ಬರದಿದ್ದರೂ ಅವುಗಳಿಗೂ ಮನುಷ್ಯರಂತೆ ಆಲೋಚನೆ ಮಾಡುವ ಶಕ್ತಿಯಿರುತ್ತದೆ. ಪ್ರೀತಿ ವಾತ್ಸಲ್ಯ ತೋರುವ ಗುಣಗಳಿರುತ್ತವೆ. ಪ್ರಾಣಿ ಪಕ್ಷಿಗಳು ತಮ್ಮ ಸಾಕಿದ ಯಜಮಾನನೊಂದಿಗೆ ಯಾವ ರೀತಿಯ ಬಾಂಧವ್ಯವನ್ನು (Bonding) ಹೊಂದಿರುತ್ತವೆ ಎನ್ನುವುದಕ್ಕೆ ನಮಗೆ ಸಮಾಜದಲ್ಲಿ ಹಲವು ನಿದರ್ಶನಗಳು ಸಿಕ್ಕಿವೆ. ಸಾಮಾನ್ಯವಾಗಿ ಪ್ರಾಣಿಗಳಲ್ಲಾದರೆ ಹಸು, ನಾಯಿ, ಬೆಕ್ಕುಗಳು, ಪಕ್ಷಿಗಳಲ್ಲಿ ಗಿಳಿ, ಪಾರಿವಾಳಗಳು ತಮ್ಮ ಯಜಮಾನನೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತವೆ. ಪಶ್ಚಿಮ ಬಂಗಾಳದಲ್ಲಿ (West Bengal) ಮೈನಾ ಹಕ್ಕಿಯೊಂದು (Indian Myna) ಪುಟ್ಟ ಬಾಲಕಿಯೊಂದಿಗೆ ವಿಶೇಷ ಪ್ರೀತಿಯನ್ನು ಹೊಂದಿದೆ. ಮೈನಾ ಹಕ್ಕಿ ಹಾಗೂ ಬಾಲಕಿಯ ನಡುವಿನ ಬಾಂಧವ್ಯ ಎಷ್ಟಿದೆ ಎಂದರೆ ಆ ಹಕ್ಕಿ ಬಾಲಕಿಯನ್ನು ಒಂದೂ ಕ್ಷಣವೂ ಬಿಟ್ಟಿರುವುದಿಲ್ಲ. ಬಾಲಕಿ ಇತ್ತೀಚಿಗಷ್ಟೇ ಶಾಲೆಗೆ ಸೇರಿದ್ದು, ಹಕ್ಕಿ ಕೂಡ ಶಾಲೆಗೂ ಅವಳ ಜೊತೆಯೇ ಹೋಗಲು ಶುರುಮಾಡಿದೆ.
ಅಂಕಿತಾ ಬಗ್ಡಿ ಎಂಬ ಬಾಲಕಿ ಹಾಗೂ ಮಿತೂ ಎಂಬ ಇಂಡಿಯನ್ ಮೈನಾ ಹಕ್ಕಿ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದಾರೆ. ಅಂಕಿತಾ ಇತ್ತೀಚೆಗೆ ಪಶ್ಚಿಮ ಬರ್ಧಮಾನ್‌ನ ಕಾಂಕ್ಸಾದ ಶಿವಪುರ ಪ್ರಾಥಮಿಕ ಶಾಲೆಗೆ ಸೇರಿದ್ದಾಳೆ. ಅಂಕಿತಾಳನ್ನು ಬಿಟ್ಟು ಇರಲಾರದ ಮೈನಾ ಹಕ್ಕಿ ಕೂಡ ಅಂಕಿತಾ ಶಾಲೆಗೆ ಹೋಗುವಾಗಗಲೆಲ್ಲಾ ಜೊತೆಯಾಗಿ ಹೋಗುತ್ತಿದೆ. ಈ ಇಬ್ಬರು ಮುಗ್ದ ಮನಸ್ಸುಗಳ ಪ್ರೀತಿ ಎಲ್ಲರ ಗಮನ ಸೆಳೆಯುತ್ತಿದೆ.
ತರಗತಿಯಲ್ಲೂ ಜೊತೆಯಾಗಿರುವ ಹಕ್ಕಿ
ಅಂಕಿತಾ ಜೊತೆ ಶಾಲೆಗೆ ಹೋಗುವ ಮೈನಾ ಹಕ್ಕಿ, ಅಂಕಿತಾ ತರಗತಿಯಲ್ಲಿ ಇರುವವರೆಗೂ ಜೊತೆಯಲ್ಲೇ ಇರುತ್ತದೆ. ಊಟದ ಸಮಯದಲ್ಲಿ ಅಂಕಿತಾ ತಾನೂ ತಿಂದೂ, ಮಿತೂವಿಗೂ ತಾನೂ ತಂದಿರುವ ತಿನಿಸುಗಳನ್ನು ತಿನ್ನಿಸುತ್ತಾಳೆ. ಶಾಲೆ ಮುಗಿದ ನಂತರ ಅಂಕಿತಾ ಮನೆಗೆ ಹೋಗುವಾಗ ಮಿತೂ ಮತ್ತೆ ಜೊತೆಯಾಗಿ ಅವಳ ಮನೆಗೆ ಹೋಗುತ್ತದೆ.
ಇದನ್ನೂ ಓದಿ:Viral News: ಬರೋಬ್ಬರಿ ಐದು ಕೆಜಿ ತೂಕದ ಮೂಲಂಗಿ ಬೆಳೆದ ಕೃಷಿಕ!
ಶಾಲೆಗೆ ಸೇರಿದ ದಿನದಿಂದಲೂ ಬಾಲಕಿ ಜೊತೆ ಬರುವ ಹಕ್ಕಿ
ಶಿವಪುರದ ಪ್ರಾಥಮಿಕ ಶಾಲೆಗೆ ಈ ಭಾಗದ ಅನೇಕ ಸಣ್ಣ ಹುಡುಗ ಹುಡುಗಿಯರು ಪ್ರತಿದಿನ ಬರುತ್ತಾರೆ. ಸ್ಥಳೀಯ ನಿವಾಸಿಯಾಗಿರುವ ಅಂಕಿತಾ ಬಗ್ಡಿ ಈ ವರ್ಷ ಶಿವಪುರ ಪ್ರಾಥಮಿಕ ಶಾಲೆಗೆ ಸೇರಿದ್ದಾಳೆ. ಅಂಕಿತಾ ಶಾಲೆಗೆ ಪ್ರವೇಶ ಪಡೆದ ದಿನದಿಂದಲೂ ಮಿತೂ ಅವಳೊಂದಿಗೆ ಶಾಲೆಗೆ ಹೋಗುತ್ತಿದೆ. ಅಂಕಿತಾ ಇತರ ಸ್ನೇಹಿತರೊಂದಿಗೆ ಶಾಲೆಗೆ ಬರುತ್ತಾಳೆ. ಅಂಕಿತಾ ಶಾಲೆಗೆ ಹೊರಡಲು ಸಿದ್ಧವಾಗುತ್ತಿದ್ದಂತೆ ಮಿತೂ ಮರದಿಂದ ಹಾರಿ ಬಂದು ಅಂಕಿತಾಳ ಭುಜ ಅಥವಾ ತಲೆಯ ಮೇಲೆ ಕುಳಿತುಕೊಳ್ಳುತ್ತದೆ. ಅಂಕಿತಾ ತರಗತಿಯಲ್ಲಿ ಇರುವವರೆಗೂ ಮಿತೂ ಕೂಡ ಇರುತ್ತದೆ.
ಎಲ್ಲರೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರುವ ಹಕ್ಕಿ
ಮೈನಾ ಹಕ್ಕಿ ಅಂಕಿತಾಲೊಂದಿಗೆ ಮಾತ್ರವಲ್ಲ ಇದೀಗ ಇಡೀ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದೆ. ಅಂಕಿತಾಳನ್ನು ನೋಡಿ ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಹ ಮಿಥು ಬಾಯಿಗೆ ಊಟ ಹಾಕುತ್ತಾರೆ. ಜನರೊಂದಿಗೆ ಈ ಪಕ್ಷಿಯೊಂದಿಗೆ ಹೊಂದಿರುವ ಪ್ರೀತಿಯನ್ನು ನೋಡಿ ಶಿವಪುರ ಭಾಗದ ಜನರು ಆಶ್ಚರ್ಯ ಪಡುತ್ತಿದ್ದಾರೆ.
ಅಂಕಿತಾ ಶಾಲೆಗೆ ಬರದಿದ್ದರೆ ಮಿತೂ ಕೂಡ ಹೋಗಲ್ಲ
ಅಂಕಿತಾ ಶಾಲೆಗೆ ಬರದ ದಿನ ಮಿತೂ ಕೂಡ ಬರುವುದಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ. ಮಿತೂ ಶಾಲೆಯ ಅಕ್ಕಪಕ್ಕದಲ್ಲೇ ಸುತ್ತಾಡುತ್ತದೆ. ಕೆಲವೊಮ್ಮೆ ಮಿತೂ ಅಂಕಿತಾಳ ಮನೆಗೆ ಹೋಗುತ್ತದೆ. ಇವರಿಬ್ಬರ ನಡುವಿನ ಪ್ರೀತಿಯನ್ನು ನೋಡಿ ಸ್ಥಳೀಯರು ತುಂಬಾ ಸಂತೋಷಪಡುತ್ತಿದ್ದಾರೆ. ಅಂಕಿತಾ ಮಾತ್ರವಲ್ಲ, ಈಗ ಶಿಕ್ಷಕರೂ, ಮಕ್ಕಳೂ ಕೂಡ ಮಿತೂವಿನ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅಂಕಿತಾ ಕೂಡ ಮಿತೂವನ್ನು ಒಂದು ದಿನ ಕಾಣದಿದ್ದರೂ ತುಂಬಾ ಬೇಸರವಾಗುತ್ತದೆ ಎಂದು ತಿಳಿಸಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ