ಅತ್ಯುತ್ತಮ ಭಾರತೀಯ ಖಾದ್ಯಗಳು ಸಿಗೋದು ನ್ಯೂಯಾರ್ಕ್‌ನಲ್ಲಿ ಅಂತೆ : ಭಾರತೀಯರು ಗರಂ

ನ್ಯೂಯಾರ್ಕ್‍ನಲ್ಲಿ ನಿಜಕ್ಕೂ ಒಳ್ಳೆಯ ಭಾರತೀಯ ಆಹಾರ ಸಿಗುತ್ತಿರಬಹುದು, ಆದರೆ ಆ ಆಹಾರ ಭಾರತಕ್ಕಿಂತಲೂ ಅತ್ಯುತ್ತಮವಾಗಿದೆ ಎಂದು ಬ್ಲೂಮ್‍ಬರ್ಗ್ ಬ್ಯುಸಿನೆಸ್ ಹೇಳಿಕೊಂಡಿರುವುದು ಭಾರತೀಯರಿಗೆ ಕೋಪ ತರಿಸಿದೆ.

ವಿವಾದಿತ ಟ್ವೀಟ್​

ವಿವಾದಿತ ಟ್ವೀಟ್​

 • Share this:

  ಜಗತ್ತಿನಲ್ಲಿ ಅತ್ಯುತ್ತಮ ಗ್ರೀಕ್ ಖಾದ್ಯಗಳು ಎಲ್ಲಿ ಸಿಗುತ್ತವೆ? ಗ್ರೀಸ್‍ನಲ್ಲಿ. ಜಗತ್ತಿನ ಅತ್ಯುತ್ತಮ ಸ್ಪಾನಿಷ್ ಆಹಾರ ಎಲ್ಲಿ ಸಿಗುತ್ತದೆ? ಸ್ಪೇನ್‍ನಲ್ಲಿ. ಇವು ಅತ್ಯಂತ ಸಹಜ ಉತ್ತರಗಳು, ಏಕೆಂದರೆ ಆಯಾ ದೇಶಗಳ ಆಹಾರಗಳು ಹೆಚ್ಚು ರುಚಿಕರವಾಗಿ ತಿನ್ನಲು ಸಿಗುವುದು ಆಯಾ ದೇಶಗಳಲ್ಲೇ ಅಲ್ಲವೇ? ಆದರೆ ,ಬ್ಲೂಮ್‍ಬರ್ಗ್ ಬ್ಯು ಸಿನೆಸ್ ಎಂಬ ಪ್ರಖ್ಯಾತ ಜಾಗತಿಕ ಬುಸಿನೆಸ್ ನ್ಯೂಸ್ ಪೋರ್ಟಲ್‍ನ ಅಭಿಪ್ರಾಯ ಇದಕ್ಕಿಂತ ಭಿನ್ನ! ಬೇರೆ ದೇಶಗಳ ಕತೆ ಏನೋ ಗೊತ್ತಿಲ್ಲ, ಆದರೆ ಅದರ ಪ್ರಕಾರ, ವಿಶ್ವದ ಅತ್ಯುತ್ತಮ ಭಾರತೀಯ ಆಹಾರ ಸಿಗುವುದು ಮಾತ್ರ ನ್ಯೂಯಾರ್ಕ್‍ನಲ್ಲಿ..! ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ, ನ್ಯೂಯಾರ್ಕ್ ಬಾಣಸಿಗ ಜೋಡಿಯೊಂದರ ಆಹಾರ ಉದ್ಯಮದ ಕಥೆಯೊಂದನ್ನು ಹಂಚಿಕೊಳ್ಳುತ್ತಾ, ಆ ಲೇಖನದಲ್ಲಿ “ವಿಶ್ವದ ಅತ್ಯುತ್ತಮ ಭಾರತೀಯ ಆಹಾರ ನ್ಯೂಯಾರ್ಕ್ ಪಟ್ಟಣದಲ್ಲಿ ಸಿಗುತ್ತದೆ” ಎಂಬ ಹೇಳಿಕೆ ನೀಡಿದೆ.


  ಆ ಟ್ಟಿಟ್ಟರ್ ಲೇಖನದಲ್ಲಿ ಅಸಲಿಗೆ, ನ್ಯೂಯಾರ್ಕ್‍ನಲ್ಲಿ ಲಂಡನ್‍ಗಿಂತ ಹೆಚ್ಚು ರುಚಿಕರ ಭಾರತೀಯ ಆಹಾರ ಸಿಗುತ್ತದೆ ಎಂದು ಬರೆಯಲಾಗಿತ್ತು. ಆಷ್ಟೇ ಇದ್ದಿದ್ದರೆ ಬೇರೆ ಕತೆ, ಆದರೆ ಅದರಲ್ಲಿ ಭಾರತೀಯ ಪತ್ರಕರ್ತ ಬೋಬಿ ಘೋಷ್ ಬರೆದಿರುವ, “ಈಗ ಇಂತದ್ದು ಲಂಡನ್‍ನಲ್ಲೂ ಏನೂ ಇಲ್ಲ, ಅಥವಾ ದೆಹಲಿಯಲ್ಲೂ ಏನೂ ಇಲ್ಲ” ಎಂಬ ಸಾಲುಗಳು ಟ್ವಿಟ್ಟರ್‌ನಲ್ಲಿರುವ ಭಾರತೀಯರಿಗೆ ಕೊಂಚವೂ ಹಿಡಿಸಿಲ್ಲ. ಹಾಗಾಗಿ ಅವರು ಈ ವಿಷಯದಲ್ಲಿ ವ್ಯಂಗ್ಯ ಹಾಗೂ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಆಹಾರವನ್ನು ಮೆಚ್ಚುವ ವಿದೇಶಿಯರು ಕೂಡ ಈ ಲೇಖನಕ್ಕೆ ಅಸಮಾಧಾನ ಸೂಚಿಸಿದ್ದಾರೆ.


  ಲೇಖನದಲ್ಲಿ ಬೋಬಿ ಘೋಷ್ , ತಮ್ಮ ಲೇಖನದಲ್ಲಿ ಭಾರತದ ರಾಜಧಾನಿ ದೆಹಲಿಗಿಂತ ಈಗ ಲಂಡನ್‍ನಲ್ಲೇ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳಿವೆ ಎಂದು ಬರೆದುಕೊಂಡಿದ್ದರು. ಆದರೆ ಇದು ಅತ್ಯಂತ ವಿವಾದಾತ್ಮಕ ಹೇಳಿಕೆ, ಏಕೆಂದರೆ ಭಾರತ ವೈವಿಧ್ಯಮಯವಾಗಿದೆ ಮತ್ತು ದೇಶದ ವಿವಿಧ ಭಾಗಗಳ ಆಹಾರ ಪದ್ಧತಿಯ, ವಿವಿಧ ರೆಸ್ಟೊರೆಂಟ್‍ಗಳನ್ನು ಹೊಂದಿದೆ. ಚಿಕ್ಕ ಉಪಾಹಾರ ಗೃಹಗಳು, ಡಾಬಾಗಳು ಮತ್ತು ಹಲವಾರು ಸಣ್ಣ ಪುಟ್ಟ ಹೊಟೇಲ್ ಮುಂತಾದವುಗಳು ಭಾರತೀಯ ಆಹಾರ ಪದ್ಧತಿಯನ್ನು ಪ್ರತಿನಿಧಿಸುತ್ತವೆ.  ಸುಂದರ ವಾತಾವರಣ ಮತ್ತು ಒಳಾಂಗಣ ವಿನ್ಯಾಸ ಹೊಂದಿರುವ ಡೈನ್ –ಇನ್ ರೆಸ್ಟೊರೆಂಟ್‍ಗಳನ್ನಷ್ಟೇ ಭಾರತೀಯ ಖಾದ್ಯಗಳನ್ನು ಪ್ರತಿನಿಧಿಸುತ್ತವೆ ಎಂದು ಸೀಮಿತಗೊಳಿಸುವುದು ಕ್ಲಾಸಿಸ್ಟ್ ಕಲ್ಪನೆ ಅಲ್ಲದೆ ಮತ್ತೇನೂ ಅಲ್ಲ. ಭಾರತೀಯ ಆಹಾರ ಉಣಬಡಿಸುವ ‘ಮುಚ್ಚಿಟ್ಟಿರುವ ರತ್ನದಂತಹ’ ಕೆಲವು ಸ್ಥಳಗಳು, ರಸ್ತೆಗಳ ಸಂದಿಗಳಲ್ಲಿ, ಕಿಕ್ಕಿರಿದ ಮಾರುಕಟ್ಟೆಗಳಲ್ಲಿ ಮತ್ತು ತೆರದ ಜಾಗಗಳಲ್ಲಿ ಸಿಗುತ್ತವೆ. ಅಂತಹ ಸ್ಥಳಗಳು ಜನಪ್ರಿಯತೆ ಪಡೆಯುವುದು, ಜೋಮ್ಯಾಟೋ ಅಥವಾ ಡೈನ್‍ಔಟ್‍ನಂತಹ ಆಹಾರ ವೇದಿಕೆಗಳ ವಿಮರ್ಶೆಗಳಿಂದ ಅಲ್ಲ, ಬದಲಿಗೆ ಬಾಯಿ ಮಾತಿನ ಪ್ರಚಾರದಿಂದ. ಅಂದರೆ ಅಲ್ಲಿ ತಿಂದು ಖುಷಿ ಪಟ್ಟವರು , ತಮ್ಮ ಪರಿಚಯದವರಿಗೆ ಹೇಳಿ, ಅವರು ಮತ್ತೊಬ್ಬರಿಗೆ ಹೇಳಿ. . . ಹೀಗೆ ಬಾಯಿಯಿಂದ ಬಾಯಿಗೆ ಅವುಗಳ ಖ್ಯಾತಿ ಹಬ್ಬುತ್ತದೆ.
  ನ್ಯೂಯಾರ್ಕ್‍ನಲ್ಲಿ ನಿಜಕ್ಕೂ ಒಳ್ಳೆಯ ಭಾರತೀಯ ಆಹಾರ ಸಿಗುತ್ತಿರಬಹುದು, ಆದರೆ ಆ ಆಹಾರ ಭಾರತಕ್ಕಿಂತಲೂ ಅತ್ಯುತ್ತಮವಾಗಿದೆ ಎಂದು ಬ್ಲೂಮ್‍ಬರ್ಗ್ ಬ್ಯುಸಿನೆಸ್ ಹೇಳಿಕೊಂಡಿರುವುದು ಭಾರತೀಯರ ನಾಲಗೆಗೆ ಕಹಿ ಎನಿಸುವುದಂತೂ ಖಂಡಿತಾ.

  First published: