ದೆಹಲಿ ಗಲಭೆಯಲ್ಲಿ ನೂರಾರು ಜೀವ ಉಳಿಸಿದ ಹೀರೋಗಳು ಮುಸ್ತಫಾಬಾದ್​ನ ಕ್ಷೌರಿಕರು

ಆಸ್ಪತ್ರೆಯಲ್ಲಿ ಗಾಯಳುಗಳ ಸಂಖ್ಯೆ ಹೆಚ್ಚಾದಂತೆ ನಾವಿಬ್ಬರು ಬರುತ್ತಿದ್ದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ಮತ್ತು ಗಾಯಕ್ಕೆ ಬ್ಯಾಂಡೇಜ್ ಹಾಕುತ್ತಿದ್ದೆವು ಎನ್ನುತ್ತಾರೆ. 3 ಜನ ವೈದ್ಯರು , ಇಬ್ಬರು ನರ್ಸ್​ಗಳು ಮತ್ತು ಬೇರೆ ಬೇರೆ ಕೆಲಸಕ್ಕಾಗಿ ಕೆಲಸಗಾರರು ಇದ್ದರೂ ಸಹ ಆಸ್ಪತ್ರೆ ಕೆಲಸಗಾರರಿಲ್ಲದಂತೆ ಅಗಿತ್ತು.

ದೆಹಲಿ ಗಲಭೆಯಲ್ಲಿ ನೂರಾರು ಜನರನ್ನು ಉಳಿಸಿದ ಕ್ಷೌರಿಕರು

ದೆಹಲಿ ಗಲಭೆಯಲ್ಲಿ ನೂರಾರು ಜನರನ್ನು ಉಳಿಸಿದ ಕ್ಷೌರಿಕರು

 • Share this:
  ನವದೆಹಲಿ: ಸಿಎಎ, ಎನ್​ಆರ್​ಸಿ ಪರ - ವಿರೋಧದ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿ ದೆಹಲಿಯಲ್ಲಿ 40ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ಗಲಭೆಯಲ್ಲಿ ಗಾಯಗೊಂಡ ಜನರ ರಕ್ತಸಿಕ್ತಗೊಂಡ ತಲೆಯನ್ನು ಸ್ವಚ್ಚಗೊಳಿಸಲು ಮತ್ತು ಕೂದಲುಗಳನ್ನು ತೆಗೆಯಲು ಸಹಾಯ ಮಾಡಿ ಹಲವರನ್ನು ಬದುಕುಳಿಸಿದವರು ಇಬ್ಬರು ಕ್ಷೌರಿಕರು. ಈ ಬಗ್ಗೆ ಎಐ ಆಸ್ಪತ್ರೆಯ ವೈದ್ಯರೊಬ್ಬರು ಮಾತನಾಡಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳ ಮಟ್ಟ ಜಾಸ್ತಿಯಾದಾಗ ಆ ಕ್ಷೌರಿಕರಿಗೆ ಪ್ರಥಮ ಚಿಕಿತ್ಸೆಯನ್ನು ಮಾಡುವುದನ್ನು ಮತ್ತು ಗಾಯಕ್ಕೆ ಬ್ಯಾಡೆಂಜ್ ಹಾಕುವುದನ್ನು ಅಲ್ಲಿನ ವೈದ್ಯರು ಹೇಳಿಕೊಟ್ಟಿದ್ದಾರೆ.

  ಅದು ಫೆಬ್ರವರಿ 24ರ ಮಧ್ಯಾಹ್ನ, ಕ್ಷೌರಿಕ ಮೊಹದ್ ಶಹಜಾದ್ ತನ್ನ ಅಂಗಡಿಯಲ್ಲಿ 17 ವರ್ಷದ ಬಾಲಕನಿಗೆ ಹೊಸ ಮೊಹ್ವಕ್ ಸ್ಟೈಲ್ ಹೇರ್ ಕಟ್ ಮಾಡಿ ಮುಗಿಸುತ್ತಿದ್ದರು. ಆ ವೇಳೆ ಹತ್ತಿರದ ಎಐ ಆಸ್ಪತ್ರೆಯ ವೈದ್ಯರಿಂದ ಅವರಿಗೆ ಕರೆ ಬಂದಿತ್ತು.
  ಓಲ್ಡ್ ಮುಸ್ತಫಾಬಾದ್ ಆಸ್ಪತ್ರೆಯ ಪಕ್ಕದಲ್ಲಿರುವ ಶಹಜಾದ್ ಅಂಗಡಿಯ ಎದುರಿಗೆ ವಾಸಿಂ ಅವರ ಸಲೂನ್ ಕೂಡ ಇರುವುದು.

  ಅವರಿಬ್ಬರನ್ನು ಆಸ್ಪತ್ರೆಯಲ್ಲಿ ಸಣ್ಣ ಸಹಾಯಕ್ಕಾಗಿ ಕರೆಯಲಾಗಿತ್ತು. ಆದರೆ ಅವರು ಸೋಮವಾರ ಆಸ್ಙತ್ರೆಯಲ್ಲಿ ಕಂಡದ್ದು ಅವರ ಊಹೆಗೂ ನಿಲುಕದ್ದು.
  ಭಾನುವಾರ ರಾತ್ರಿ ಮುಸ್ತಫಾಬಾದ್ ಸೇರಿದಂತೆ ಉತ್ತರ ದೆಹಲಿಯ ಕೆಲವು ಭಾಗಗಲ್ಲಿ ಹಿಂಸಾಚಾರ ಆರಂಭಗೊಂಡಾಗ ಹತ್ತಿರದ ಎಐ ಆಸ್ಪತ್ರೆ ಮಾತ್ರ ಗಾಯಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲು ಮತ್ತು ತೀವ್ರ ಗಾಯಗೊಂಡ ಜನರಿಗೆ ಸರ್ಜರಿ ಮಾಡಲು ತೆರೆದಿದ್ದ ಆಸ್ಪತ್ರೆಯಾಗಿತ್ತು.

  ಆಸ್ಪತ್ರೆ ಗಾಯಳುಗಳಿಂದ ತುಂಬಿ ತುಳುಕುತಿತ್ತು. ನಮಗೆ ಭಾನುವಾರದಿಂದ ದೆಹಲಿಯ ಸುತ್ತ ಮುತ್ತ ಗಲಾಟೆಗಳು ನಡೆಯುತ್ತಿರುವ ವಿಷಯ ತಿಳಿದಿತ್ತು. ಆದರೆ ಗಲಭೆಯ ತೀವ್ರ ಸ್ವರೂಪ ಅರ್ಥವಾಗಿದ್ದೆ ಎಐ ಆಸ್ಪತ್ರೆಗೆ ತೆರಳಿದಾಗ ಎಂದು 25 ವರ್ಷದ ಶಹಾಜಾದ್ ಗಲಭೆ ನಡೆದ ಒಂದು ವಾರದ ನಂತರ ನ್ಯೂಸ್ 18ಗೆ ಹೇಳಿದ್ದಾರೆ.

  ಈ ಇಬ್ಬರು ಕ್ಷೌರಿಕರು ಮೊದ ಮೊದಲು ಗಾಯಳುಗಳ ಕೂದಲುಗಳನ್ನು ತೆಗೆಯುವುದು ಮತ್ತು ಮುಂದಿನ ಸರ್ಜರಿಗೆ ಅವರನ್ನು ತಯಾರು ಮಾಡುತ್ತಿದ್ದರು.

  ನಾವು ಮೊದಲು ಕೂದಲು ಕತ್ತರಿಸಿದ ವ್ಯಕ್ತಿ ಮುಸ್ತಾಫಾಬಾದ್​ನ ಸ್ಥಳೀಯ ನಿವಾಸಿಯಾಗಿದ್ದಾರೆ. ಅವರಿಗೆ ಹಲವಾರು ಬಾರಿ ರಾಡ್ನಿಂದ ತಲೆಗೆ ಹೊಡೆಯಲಾಗಿತ್ತು ಎಂದು ವಾಸಿಂ ನೆನಪಿಸಿಕೊಳ್ಳುತ್ತಾರೆ. ಇದು ವಾಸಿಂ ಮತ್ತು ಶಹಜಾದ್ ಅವರು ತಮ್ಮ ಜೀವನದಲ್ಲಿ ಮಾಡಿದ ರಕ್ತ ಸಿಕ್ತ ಹೇರ್ ಕಟ್ ಎನ್ನುತ್ತಾರೆ.

  ನಾವು ಮೊದಲು ಅವರ ತಲೆಯನ್ನು ಸ್ವಚ್ಚಗೊಳಿಸಿದೆವು . ಆ ಬಡ ಮನುಷ್ಯ ಚಾಂದ್ ಬಾಗ್​ನಲ್ಲಿರುವ ತನ್ನ ಹೆಂಡತಿನ್ನು ಭೇಟಿಯಾಗಲು ತೆರಳುತ್ತಿದ್ದಾಗ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಾಸಿಂ ಹೇಳುತ್ತಾರೆ. ಅಲ್ಲದೇ ನಾನು ಮೊದಲ ಹೇರ್ ಕಟ್ ಮರೆಯುವುದಿಲ್ಲ ಮತ್ತು ನಂತರ ಬಂದ ಗಾಯಳುಗಳ ಮುಖ ಬ್ಲರ್ ಆಗಿತ್ತು ಎನ್ನುತ್ತಾರೆ.

  ಆಸ್ಪತ್ರೆಯಲ್ಲಿ ಗಾಯಳುಗಳ ಸಂಖ್ಯೆ ಹೆಚ್ಚಾದಂತೆ ನಾವಿಬ್ಬರು ಬರುತ್ತಿದ್ದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆಯನ್ನು ಮತ್ತು ಗಾಯಕ್ಕೆ ಬ್ಯಾಂಡೇಜ್ ಹಾಕುತ್ತಿದ್ದೆವು ಎನ್ನುತ್ತಾರೆ.
  3 ಜನ ವೈದ್ಯರು , ಇಬ್ಬರು ನರ್ಸ್​ಗಳು ಮತ್ತು ಬೇರೆ ಬೇರೆ ಕೆಲಸಕ್ಕಾಗಿ ಕೆಲಸಗಾರರು ಇದ್ದರೂ ಸಹ ಆಸ್ಪತ್ರೆ ಕೆಲಸಗಾರರಿಲ್ಲದಂತೆ ಅಗಿತ್ತು.

  ರಕ್ತನಾಳದ ತೊಂದರೆಯಿದ್ದ ವಾಸಿಂ ಅವರಂತೆಯೇ ಶಹಾಜಾದ್ ಮನೆಯಲ್ಲಿ ನಮಗೆ ತಾವೇ ಪ್ರಥಮ ಚಿಕಿತ್ಸೆಗಳನ್ನು ಮಾಡಿಕೊಳ್ಳುತ್ತಿದ್ದೆವು. ನಮಗೆ ತಿಳಿಯದಿದ್ದರೂ ಸಹ ಕೇವಲ ಒಂದು ಗಂಟೆಯ ಒಳಗೆ ಪ್ರಥಮ ಚಿಕಿತ್ಸೆ ಮಾಡುವುದನ್ನು ಕಲಿತೆವು, ಯಾಕೆಂದರೆ ಇದು ಮಾನವೀಯತೆಯ ಪ್ರಶ್ನೆ ಎಂದು ಶಹಾಜಾದ್ ಹೇಳುತ್ತಾರೆ. ಸೋಮವಾರ ರಾತ್ರಿ ಮೊದಲ ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು ಅಸ್ಪತ್ರೆಗೆ ಕರೆತಂದಾಗ ವಿಷಯಗಳೆಲ್ಲ ಬದಲಾಗಲು ಪ್ರಾರಂಭಿಸಿದವು. ಒಟ್ಟಿಗೆ ಆಡಿ ಬೆಳೆದ ನೆರೆಹೊರೆಯ ಇಬ್ಬರಲ್ಲಿ ಭಯದ ವಾತವಾರಣ ಮೂಡಿತ್ತು ಎನ್ನುತ್ತಾರೆ ವಾಸಿಂ.

  ನಾವು ಆ ಇಬ್ಬರು ಕ್ಷೌರಿಕರಿಗೆ ಪ್ರಥಮ ಚಿಕಿತ್ಸೆಯನ್ನು ಮಾಡುವುದು ಮತ್ತು ಗಾಯಗಳಿಗೆ ಬ್ಯಾಂಡೇಜ್ ಹಾಕುವುದನ್ನು ಹೇಳಿಕೊಟ್ಟೆವು. ಅವರು ನಮಗೆ ಸಹಾಯ ಮಾಡಲು ಉತ್ಸುಕರಾಗಿದ್ದರು. ಹಲವಾರು ಜೀವ ಉಳಿಸುವಲ್ಲಿ ಈ ಇಬ್ಬರು ನಮಗೆ ಬಹಳ ಸಹಾಯ ಮಾಡಿದ್ದಾರೆ ಎಂದು ದಂತ ವೈದ್ಯ ಮತ್ತು ಎಐ ಆಸ್ಪತ್ರೆ ನಡೆಸುತ್ತಿರುವ ಮೂರು ಜನ ಅಣ್ಣ ತಮ್ಮಂದಿರಲ್ಲಿ ಒಬ್ಬರಾದ ಡಾಕ್ಟರ್ ಮಿರ್ಜಾ ಅಕ್ರಂ ಹೇಳಿದ್ದಾರೆ.

  500ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಿರುವ ಡಾ. ಅಕ್ರಂ ಫೆಬ್ರವರಿ 24ರಿಂದ ಆಸ್ಪತ್ರೆಯಲ್ಲಿಯೇ ಇದ್ದಾರೆ.

  ನಾವು ಗಲಭೆಯ ಗಾಯಳುಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಿದ್ದೇವೆ ಮತ್ತು ಔಷಧಿಗಳನ್ನು ಸಹ ನೀಡಿದ್ದೇವೆ ಎಂದು ಅವರು ಹೇಳಿದರು. ಅಲ್ಲದೇ 2 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಔಷಧಿಗಳನ್ನು ಯಾವುದೇ ಹಣವನ್ನು ಪಡೆಯದೇ ನೀಡಿದ್ದೇವೆ. ಈ ಸಮಯ ಲಾಭ ಮಾಡಿಕೊಳ್ಳುವ ಸಮಯವಲ್ಲ. ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು ಎನ್ನುತ್ತಾರೆ ಡಾಕ್ಟರ್​.

  ಇದನ್ನೂ ಓದಿ: ಕೊರೋನಾ ಭೀತಿ: ಹೋಳಿ ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂದ ಪ್ರಧಾನಿ

  ಮಾನವೀಯತೆಯ ದೃಷ್ಟಿಯಿಂದ ಹಲವಾರು ಔಷಧ ಮಳಿಗೆಗಳು ಬಾಗಿಲು ತೆರೆದವು. ಆದರೂ ಕೆಲವು ಅಂಗಡಿಗಳು ಬಾಗಿಲು ಹಾಕಿಕೊಂಡಿದ್ದವು. ಅವುಗಳಿಂದ ಸಾಮಾನುಗಳನ್ನು ತರಿಸಲು ವೈದ್ಯರು ಸ್ಥಳೀಯರಾದ ಶಹಜಾದ್ ಮತ್ತು ವಾಸಿಂ ಅವರನ್ನು ಅವಲಂಭಿಸಿದ್ದರು.

  ಇದನ್ನೂ ಓದಿ: ಭಾರತದಲ್ಲಿ 28 ಮಂದಿಗೆ ಕೊರೊನಾ ವೈರಸ್ ಸೋಂಕು: ಕೇಂದ್ರ ಆರೋಗ್ಯ ಸಚಿವರ ಮಾಹಿತಿ

  ವೈದ್ಯರು ಮತ್ತು ಸ್ಥಳೀಯರ ಪ್ರಕಾರ ಬುಧವಾರ ಗಲಭೆಯ ತೀವ್ರತೆ ಕಡಿಮೆಯಾದಾಗ ಮಾತ್ರ ಆ್ಯಂಬುಲೆನ್ಸ್​ಗಳು ಗಲಭೆ ನಡೆದ ಪ್ರದೇಶಗಳಿಗೆ ಹೋಗಲು ಅರಂಭಿಸಿದವು. ನಾವು ನಮ್ಮಲ್ಲಿದ್ದ ಕಡಿಮೆ ಕೆಲಸಗಾರರ ಸಹಾಯದಿಂದಲೇ ನಮಗೆ ಎಷ್ಟಾಗತ್ತೋ ಅಷ್ಟು ಕೆಲಸಗಳನ್ನು ಮಾಡಿದ್ದೇವೆ. ಆ್ಯಂಬುಲೆನ್ಸ್​ ಸರಿಯಾದ ಸಮಯಕ್ಕೆ ಬಂದಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸ ಬಹುದಾಗಿತ್ತು ಎನ್ನುತ್ತಾರೆ ಮುಖ್ಯ ವೈದ್ಯರು ಮತ್ತು ಎಐ ಆಸ್ಪತ್ರೆಯ ನಿರ್ದೇಶಕರಾದ ಡಾಕ್ಟರ್ ಅನ್ವರ್.

  ಇದನ್ನೂ ಓದಿ: ಕೊರೋನಾ ಭೀತಿ: 14 ಇಟಲಿ ಪ್ರವಾಸಿಗರು, ಅವರ ಡ್ರೈವರ್​ ಸೇರಿದಂತೆ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ

  ಸುಮಾರು ಮೂರು ದಿನಗಳ ಕಾಲ ನಿಂತು ಕೆಲಸ ಮಾಡಿದ ಪರಿಣಾಮ ವಾಸಿಂ ಅವರ ರಕ್ತನಾಳದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು. ಈಗ ಅಗ್ನಿಪರೀಕ್ಷೆ ಮುಗಿದಿದೆ, ಔಷಧಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯೂಸ್ 18ಗೆ ದೂರವಾಣಿ ಮುಖಾಂತರ ತಿಳಿಸಿದ್ದಾರೆ.

  ಜೇವ ಉಳಿಸುವುದು ಒಳ್ಳೆಯ ಕೆಲಸ ಎಂದು ಶಹಜಾದ್ ಹೇಳುತ್ತಾರೆ. ನನ್ನ ಬೆರಳುಗಳಲ್ಲಿರುವ ಶಕ್ತಿ ಮತ್ತು ಕೆಲಸದಲ್ಲಿರುವ ಶ್ರದ್ಧೆಯೇ ರಕ್ತಸಿಕ್ತವಾದ ತಲೆ ಕೂದಲುಗಳನ್ನು ಕತ್ತರಿಸಲು ಸಹಾಯ ಮಾಡಿದ್ದು, ಇಲ್ಲದಿದ್ದರೆ ನಾನು ಈ ಕೆಲಸವನ್ನು ಮಾಡುತ್ತಲೇ ಇರಲಿಲ್ಲ ಎನ್ನುತ್ತಾರೆ ಶಹಜಾದ್.

  ಗಲಭೆ ನಡೆದ ವಾರದ ನಂತರ ಮುಸ್ಲಿಂ ಬಾಹುಳ್ಯವಿರುವ ಮುಸ್ತಾಫಾಬಾದ್​ನಲ್ಲಿ ಜನ ಜೀವನ ಎಂದಿನಂತೆ ಸಾಗುತ್ತಿದೆ. ಎಐ ಆಸ್ಪತ್ರೆಗೆ ಬರುತ್ತಿರುವ ರೋಗಿಗಳು ಪರಿಸರದಲ್ಲಿರುವ ರಕ್ತದ ವಾಸನೆ ಮತ್ತು ಇತರ ಕಾರಣಗಳಿಂದ ಸಾಮಾನ್ಯ ರೋಗಕ್ಕೆ ತುತ್ತಾಗುತ್ತಿದ್ದಾರೆ.

  (ವರದಿ: ಸಂಧ್ಯಾ ಎಂ)
  First published: