ವಾವ್​..! ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಹಗ್ಗದ ಮೇಲೆ ನಡೆಯುತ್ತೆ ಪೊಲೀಸ್​ ನಾಯಿ; ಅದರ ಚಾಣಾಕ್ಷತನಕ್ಕೆ ಶ್ವಾನಪ್ರಿಯರು ಫಿದಾ

ಈ ವಿಡಿಯೋ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆ ನಾಯಿಯ ಆತ್ಮವಿಶ್ವಾಸ, ನಂಬಿಕೆ, ಬ್ಯಾಲೆನ್ಸ್​ ಹಾಗೂ ಜಾಗರೂಕತೆ ನೋಡಿ ವಾವ್​ ಎಂದಿದ್ದಾರೆ. ನಾಯಿಯು ಅದ್ಭುತ ಸಾಹಸ ಮಾಡಿದೆ ಎಂದು ಕೆಲವರು ಹೇಳಿದ್ದಾರೆ.

Latha CG | news18
Updated:July 3, 2019, 11:58 AM IST
ವಾವ್​..! ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ಹಗ್ಗದ ಮೇಲೆ ನಡೆಯುತ್ತೆ ಪೊಲೀಸ್​ ನಾಯಿ; ಅದರ ಚಾಣಾಕ್ಷತನಕ್ಕೆ ಶ್ವಾನಪ್ರಿಯರು ಫಿದಾ
ಹಗ್ಗದ ಮೇಲೆ ನಡೆಯುತ್ತಿರುವ ನಾಯಿ
  • News18
  • Last Updated: July 3, 2019, 11:58 AM IST
  • Share this:
ಹೊಟ್ಟೆಪಾಡಿಗಾಗಿ ಊರೂರು ಅಲೆದು ಜಾದೂ ಮಾಡಿ, ಸಾಹಸಮಯ ಆಟಗಳನ್ನು ತೋರಿಸಿ, ಜನರ ಚಪ್ಪಾಳೆ ಜೊತೆಗೆ ಒಂದಷ್ಟು ಕಾಸು ಗಿಟ್ಟಿಸಿಕೊಳ್ಳುವ ಜನರ ಒಂದು ಗುಂಪಿದೆ. ಇಲ್ಲಿ ಡ್ಯಾನ್ಸ್​ , ಹಾಡು ಮಾತ್ರವಲ್ಲದೇ , ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮೈ ಜುಂ ಎನಿಸುವ ಸಾಹಸಮಯ ಆಟಗಳನ್ನು ಆಡುತ್ತಾರೆ. ತಂತಿ ಮೇಲೆ ನಡೆಯುವ, ಬೆಂಕಿಯೊಂದಿಗೆ ಸರಸವಾಡುವ ಸಾಹಸಗಳನ್ನು ಮಾಡುತ್ತಾರೆ. ಊರ ಜನರು ಇದನ್ನು ನೋಡಿ, ಚಪ್ಪಾಳೆ ತಟ್ಟಿ ಹಣವನ್ನೂ ನೀಡುತ್ತಾರೆ. ಹೀಗೆ ಇವರ ಪಯಣ ಊರಿಂದ ಊರಿಗೆ ಸಾಗುತ್ತದೆ. ಇಲ್ಲಿ ಮನುಷ್ಯರಂತೆಯೇ ಒಂದು ನಾಯಿಯೂ ಕೂಡ ಇಂತಹ  ಸಾಹಸ ಮಾಡುತ್ತದೆ ಎಂದರೆ ನಂಬುತ್ತೀರಾ? ಆದರೆ ಹೊಟ್ಟೆಪಾಡಿಗಾಗಿ ಅಲ್ಲ.

ಹೌದು, ಕಣ್ಣಿಗೆ ಬಟ್ಟೆ ಕಟ್ಟಿದ ಪೊಲೀಸ್​ ನಾಯಿಯೊಂದು ಬಿಗಿಯಾಗಿ ಕಟ್ಟಿದ ಎರಡು ಹಗ್ಗಗಳ ಮೇಲೆ ನಡೆದು ಹೋಗುತ್ತದೆ. ಮಾಲ್ಡೋವಾದ 'ಲಚಿ' ಎಂಬ ಹೆಸರಿನ ಪೊಲೀಸ್​ ನಾಯಿ ಈಗ ಇಂಟರ್​ನೆಟ್​ನಲ್ಲಿ ಸ್ಟಾರ್​ ಆಗಿ ಮಿಂಚುತ್ತಿದೆ. ಭದ್ರತಾ ಪಡೆಯ ಮಾರ್ಗದರ್ಶನದಲ್ಲಿ ಎರಡು ಹಗ್ಗಗಳ ಮೇಲೆ ಕಾಲಿಟ್ಟು, ಬ್ಯಾಲೆನ್ಸ್​ ಮಾಡಿ ನಡೆಯುವ ಈ  ವಿಡಿಯೋ ನೋಡಿದರೆ ನೀವು ಕೂಡ ಶಹಬ್ಬಾಸ್​ ಹೇಳುತ್ತೀರಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದ್ದು, ಶ್ವಾನ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಡಿಯೋದಲ್ಲಿ ಲಚಿ ನಾಯಿ ಬಾಯಿಯಲ್ಲಿ ಚೈನ್​ವೊಂದನ್ನು ಹಿಡಿದು, ಸಮಾನಾಂತರವಾಗಿ ಕಟ್ಟಿರುವ ಎರಡು ಹಗ್ಗಗಳ ಮೇಲೆ ತನ್ನ 4 ಕಾಲುಗಳನ್ನು ಇಟ್ಟು ನಡೆಯುತ್ತಿದೆ. ಕಣ್ಣಿಗೆ ಬಟ್ಟೆ ಕಟ್ಟಿದ್ದರೂ ತುಂಬಾ ಜಾಗರೂಕವಾಗಿ ಬ್ಯಾಲೆನ್ಸ್​ ಮಾಡುತ್ತಿದೆ. ಈ ವಿಡಿಯೋವನ್ನು ಈಗಾಗಲೇ 47 ಮಿಲಿಯನ್​ಗಿಂತ  ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಆ ನಾಯಿಯ ಆತ್ಮವಿಶ್ವಾಸ, ನಂಬಿಕೆ, ಬ್ಯಾಲೆನ್ಸ್​ ಹಾಗೂ ಜಾಗರೂಕತೆ ನೋಡಿ ವಾವ್​ ಎಂದಿದ್ದಾರೆ. ನಾಯಿಯು ಅದ್ಭುತ ಸಾಹಸ ಮಾಡಿದೆ ಎಂದು ಕೆಲವರು ಹೇಳಿದ್ದಾರೆ.

ಜೂನ್​ 21 ವಿಶ್ವ ಯೋಗದ ದಿನ ಭದ್ರತಾ ಪಡೆಯ ಪೊಲೀಸ್​ ನಾಯಿಗಳು ಯೋಗ ಮಾಡಿ ಗಮನ ಸೆಳೆದಿದ್ದವು. ಮಾರ್ಗದರ್ಶಕರ ಜೊತೆ ಅವುಗಳು ಸಹ ಯೋಗಾಸನ ಮಾಡಿದ್ದವು. ಈ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್​ ಆಗಿತ್ತು. ಈ ಈಗ ಮನುಷ್ಯರಂತೆ ನಾಯಿಯೂ ಹಗ್ಗದ ಮೇಲೆ ನಡೆಯುವ ವಿಡಿಯೋ ಬಹಳ ವೈರಲ್​ ಆಗುತ್ತಿದೆ. ನಾಯಿಯ ಚಾಣಾಕ್ಷತನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ