ದಲಿತ ಯುವಕನ ಹತ್ಯೆ ಪ್ರಕರಣ; ಮಗನ ಸಾವಿಗೆ ನ್ಯಾಯ ಸಿಗದ ಕಾರಣ ನಿರಾಸೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ಅಂಧ ತಂದೆ!

ಇಡೀ ದೇಶದ ಗಮನ ಸೆಳೆದಿದ್ದ ಪೆಹ್ಲುಖಾನ್ ಎಂಬ ವ್ಯಕ್ತಿಯ ಮೇಲಿನ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರು ಜನ ಆರೋಪಿಗಳ ವಿರುದ್ಧ ಪ್ರಬಲ ವಿಡಿಯೋ ಸಾಕ್ಷ್ಯಾಧಾರ ಇದ್ದಾಗ್ಯೂ ಸಹ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದ ತೀರ್ಪು ಬಂದ ಎರಡನೇ ದಿನಕ್ಕೆ ಮತ್ತೊಬ್ಬ ದಲಿತ ವ್ಯಕ್ತಿಯ ತಂದೆ ಮಗನ ಸಾವಿಗೆ ನ್ಯಾಯ ಕೇಳಿ ಸೋತು ಕೊನೆಗೆ ಸಾವಿಗೆ ಶರಣಾಗಿರುವುದು ಇದೀಗ ಇಡೀ ದೇಶದ ಗಮನ ಸೆಳೆಯುತ್ತಿದೆ.

news18
Updated:August 16, 2019, 3:00 PM IST
ದಲಿತ ಯುವಕನ ಹತ್ಯೆ ಪ್ರಕರಣ; ಮಗನ ಸಾವಿಗೆ ನ್ಯಾಯ ಸಿಗದ ಕಾರಣ ನಿರಾಸೆಗೊಳಗಾಗಿ ಆತ್ಮಹತ್ಯೆಗೆ ಶರಣಾದ ಅಂಧ ತಂದೆ!
ಸಾಂದರ್ಭಿಕ ಚಿತ್ರ.
  • News18
  • Last Updated: August 16, 2019, 3:00 PM IST
  • Share this:
ನವ ದೆಹಲಿ (ಆಗಸ್ಟ್​.16); ಕಳೆದ ತಿಂಗಳು ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಜನಸಮೂಹದಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ ದಲಿತ ವ್ಯಕ್ತಿ ಹರೀಶ್ ಜಾತವ್ ಸಾವಿಗೆ ನ್ಯಾಯ ದೊರಕಿಲ್ಲ ಎಂದು ನಿರಾಶೆಗೆ ಒಳಗಾದ ಆತನ ತಂದೆ ರಟ್ಟಿರಾಮ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಜುಲೈ 16ರ ರಾತ್ರಿ 7 ಗಂಟೆ ಸುಮಾರಿಗೆ 28 ವರ್ಷದ ಯುವಕ ಹರೀಶ್ ಜಾತವ್ ಅಲ್ವಾರ್ ಜಿಲ್ಲೆಯ ಬಿವಾಡಿ-ಚೋಪನ್ಕಿ ರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಅಚಾನಕ್ಕಾಗಿ ಅಪರಿಚಿತ ಮಹಿಳೆಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ್ದಾನೆ. ಇದರಿಂದ ಕ್ರೋಧಗೊಂಡ ಸ್ಥಳೀಯರು ಆತನನನ್ನು ಹಿಗ್ಗಾಮುಗ್ಗ ಥಳಿಸಿದ್ದರು, ಥಳಿತದಿಂದ ತೀವ್ರ ರಕ್ತಸ್ರಾವಕ್ಕೆ ಒಳಗಾಗಿ ರಸ್ತೆ ಬದಿ ಬಿದ್ದಿದ್ದ ಆತನನ್ನು ನಂತರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಘಟನೆ ನಡೆದು ಎರಡು ದಿನಗಳ ಬಳಿಕ ಹರೀಶ್ ಮೃತಪಟ್ಟಿದ್ದ.

ಈ ಕುರಿತು ಮೃತನ ತಂದೆ ರಟ್ಟಿರಾಮ್ ಪೊಲೀಸರಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸರು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸುತ್ತಿಲ್ಲ, ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ, ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ಎಂದು ಆರೋಪಿಸಿದ್ದ ರಟ್ಟಿರಾಮ್ ಇದೇ ಕಾರಣಕ್ಕೆ ಇಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಗೋರಕ್ಷಕರ ಗುಂಪಿನಿಂದ ಪೆಹ್ಲೂ ಖಾನ್ ಹತ್ಯೆ ಪ್ರಕರಣ: ಎಲ್ಲಾ 6 ಆರೋಪಿಗಳೂ ಖುಲಾಸೆ

ಆದರೆ, ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಅಲ್ವಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರ ಪರೀಶ್ ದೇಶ್ಮುಖ್, “ಸಾಮೂಹಿಕ ಹಲ್ಲೆಯ ಕಾರಣದಿಂದಲೇ ಹರೀಶ್ ಜಾತವ್ ಸಾವೀಗೀಡಾದ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರುವವರೆಗೆ ಅದು ಸಮೂಹ ಹಲ್ಲೆಯಿಂದಾದ ಹತ್ಯೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ.

ಉಮರ್ ಶೇರ್ ಎಂಬ ವ್ಯಕ್ತಿ ಹಾಗೂ ಆತನ ಸಹಾಯಕ ಹಲ್ಲೆ ಮಾಡಿದ ಕಾರಣದಿಂದಾಗಿಯೇ ತನ್ನ ಮಗ ಮೃತಪಟ್ಟಿದ್ದಾನೆ ಎಂದು ಆತನ ತಂದೆ ಪಟ್ಟಿರಾಮ್ ಹಾಗೂ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ಆದರೆ, ಆತನ ಟ್ರಕ್ ಗುದ್ದಿ ಗಾಯಗೊಂಡ ಮಹಿಳೆ ಹಾಗೂ ಆಕೆಯ ಪತಿ ಸಹ ಹರೀಶ್ ವಿರುದ್ಧ ದೂರು ದಾಖಲಿಸಿದ್ದಾರೆ. 28 ವರ್ಷದ ಹರೀಶ್ ಜಾತವ್ ಕುಡಿದು ವಾಹನ ಚಾಲನೆ ಮಾಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೀಗಾಗಿ ನಾವು ಎಲ್ಲಾ ಕೋನದಲ್ಲೂ ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಇಡೀ ದೇಶದ ಗಮನ ಸೆಳೆದಿದ್ದ ಪೆಹ್ಲುಖಾನ್ ಎಂಬ ವ್ಯಕ್ತಿಯ ಮೇಲಿನ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರು ಜನ ಆರೋಪಿಗಳ ವಿರುದ್ಧ ಪ್ರಬಲ ವಿಡಿಯೋ ಸಾಕ್ಷ್ಯಾಧಾರ ಇದ್ದಾಗ್ಯೂ ಸಹ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದ ತೀರ್ಪು ಬಂದ ಎರಡನೇ ದಿನಕ್ಕೆ ಮತ್ತೊಬ್ಬ ದಲಿತ ವ್ಯಕ್ತಿಯ ತಂದೆ ಮಗನ ಸಾವಿಗೆ ನ್ಯಾಯ ಕೇಳಿ ಸೋತು ಕೊನೆಗೆ ಸಾವಿಗೆ ಶರಣಾಗಿರುವುದು ಇದೀಗ ಇಡೀ ದೇಶದ ಗಮನ ಸೆಳೆಯುತ್ತಿದೆ.ಇದನ್ನೂ ಓದಿ : ನಿದ್ರೆಯಿಂದ ಎಬ್ಬಿಸಿದ್ದಕ್ಕೆ ಹತ್ಯೆ; 20 ವರ್ಷಗಳ ನಂತರ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮುಂಬೈ ನ್ಯಾಯಾಲಯ

First published:August 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ