HOME » NEWS » National-international » BLAST NEAR ISRAEL EMBASSY IN DELHI SESR

Blast in Delhi: ದೆಹಲಿಯ ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಬಾಂಬ್​ ಸ್ಫೋಟ

ಈ ಸ್ಪೋಟದಲ್ಲಿ ನಾಲ್ಕೈದು ವಾಹನಗಳು ಹಾನಿಗೊಂಡಿದೆ. ಸ್ಪೋಟ ಸಂಭವಿಸಿರುವ ಬಗ್ಗೆ ಪೊಲೀಸರು ದೃಢಪಡಿಸಿದ್ದು, ಯಾವುದೇ ಜೀವಹಾನಿಯಾದ ಕುರಿತು ವರದಿಯಾಗಿಲ್ಲ

news18-kannada
Updated:January 29, 2021, 6:57 PM IST
Blast in Delhi: ದೆಹಲಿಯ ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಬಾಂಬ್​ ಸ್ಫೋಟ
blast place
  • Share this:
ನವದೆಹಲಿ (ಜ. 29): ಇಲ್ಲಿನ ಇಸ್ರೇಲ್​ ರಾಯಭಾರಿ ಕಚೇರಿಯ ಬಳಿ ಬಾಂಬ್​ ಸ್ಟೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ನಾಲ್ಕೈದು ವಾಹನಗಳು ಹಾನಿಗೊಂಡಿದೆ. ಸ್ಪೋಟ ಸಂಭವಿಸಿರುವ ಬಗ್ಗೆ ಪೊಲೀಸರು ದೃಢಪಡಿಸಿದ್ದು, ಯಾವುದೇ ಜೀವಹಾನಿಯಾದ ಕುರಿತು ವರದಿಯಾಗಿಲ್ಲ. ದೆಹಲಿ ಪೊಲೀಸರ ವಿಶೇಷ ತಂಡ ಸ್ಥಳದಲ್ಲಿ ಬಿಡುಬಿಟ್ಟಿದ್ದು, ಈ ಕುರಿತು ತನಿಖೆಗೆ ಮುಂದಾಗಿದೆ. ಕಡಿಮೆ ತೀವ್ರತೆಯ ಬಾಂಬ್​ ಸ್ಫೋಟಿಸಿದ ಪರಿಣಾಮ ಹೆಚ್ಚಿನ ಅನಾಹುತ ಸಂಭವಿಸಿಲ್ಲ. 



ರಾಯಭಾರಿ ಕಚೇರಿಯ ಬಳಿಯ ಪಾದಚಾರಿ ಮಾರ್ಗದಲ್ಲಿ ಈ ಬಾಂಬ್​ ಸ್ಫೋಟ ಸಂಭವಿಸಿದೆ. ಇದರಿಂದ ಕಾರಿನ ವಿಂಡ್​ಸ್ಕ್ರೀನ್​ಗಳಿಗೆ ಹಾನಿಯಾಗಿದೆ. ಸುಧಾರಿತ ಸ್ಪೋಟಕ ಬಳಸಿ ಈ ಬಾಂಬ್​ ಸ್ಟೋಟ ನಡೆಸಲಾಗಿದೆ.

ಇಲ್ಲಿನ ಎಪಿಜೆ ಅಬ್ದುಲ್​ ಕಲಾಂ ರಸ್ತೆಯಲ್ಲಿರುವ ಇಸ್ರೇಲ್​ ರಾಯಭಾರಿ ಕಚೇರಿ ಬಳಿ ಸಂಜೆ 5.11 ನಿಮಿಷದ ಸುಮಾರಿಗೆ ಈ ಸ್ಪೋಟ ಸಂಭವಿಸಿದೆ. ರಾಜ್​ಪಾತ್​ನಲ್ಲಿ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿಗಳು ಉಪಸ್ಥಿತರಿರುವ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮದಿಂದ ಕೊಂಚ ದೂರದಲ್ಲಿ ಈ ಸ್ಪೋಟ ಸಂಭವಿಸಿದೆ.

ಇದನ್ನು ಓದಿ: ಜುಲೈಗೆ ರಾಕಿಭಾಯ್​ ಹವಾ ಶುರು: ರಿವೀಲ್​ ಆಯ್ತು ಕೆಜಿಎಫ್​2 ರಿಲೀಸ್​ ಡೇಟ್​ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕಗಳನ್ನು ಬಳಸಿ ಈ ಕೃತ್ಯ ಎಸಗಲಾಗಿದೆ. ಘಟನೆಯಲ್ಲಿ ವಾಹನಗಳಿಗೆ ಹಾನಿಯಾಗಿದ್ದು, ಯಾವುದೇ ಜೀವ ಹಾನಿಯಾಗಿಲ್ಲ. ಸೆಸೆಷನ್​ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಕಿಡಿಗೇಡಿಗಳು ನಡೆಸಿರುವ ಕೃತ್ಯ ಇದಾಗಿರಬಹುದು ಎಂದು ದೆಹಲಿ ಪೊಲೀಸ್​ ಹೆಚ್ಚುವರಿ ಪಿಆರ್​ಒ ಅನಿಲ್​ ಮಿತ್ತಲ್​ ತಿಳಿಸಿದ್ದಾರೆ.

ಘಟನೆಯಲ್ಲಿ ಎರಡು ಮೂರು ವಾಹನಗಳ ಗಾಜು ಪುಡಿಯಾಗಿದೆ. ತಕ್ಷಣಕ್ಕೆ ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ಆಗಮಿಸಿದೆ. ಅಲ್ಲದೇ ಸ್ಪೋಟದ ತನಿಖೆಗೆ ದೆಹಲಿ ಪೊಲೀಸ್​ ವಿಶೇಷ ತಂಡ, ಅಪರಾಧ ವಿಭಾಗ, ಗುಪ್ತಚರ ವಿಭಾಗದ ಅಧಿಕಾರಿಗಳು ಆಗಮಿಸಿದ್ದಾರೆ. ಘಟನೆ ಕುರಿತು ಎನ್​ಐಎ ಕೂಡ ತನಿಖೆಗೆ ಮುಂದಾಗಿದೆ.
Published by: Seema R
First published: January 29, 2021, 6:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories