Blast In Lahore: ಲಾಹೋರ್​ನ ಸೂಫಿ ಮಸೀದಿ ಬಳಿ ಬಾಂಬ್​ ಸ್ಫೋಟ; ಐವರ ಸಾವು

11ನೇ ಶತಮಾನದ ಈ ಮಸೀದಿ ದಕ್ಷಿಣ ಎಷ್ಯಾದ ಅತಿದೊಡ್ಡ ಮಸೀದಿಯಾಗಿದ್ದು, ಸದಾ ಜನ ಜಂಗುಳಿಯಿರುವ ಸ್ಥಳವಾಗಿದೆ,

Seema.R | news18
Updated:May 8, 2019, 11:15 AM IST
Blast In Lahore: ಲಾಹೋರ್​ನ ಸೂಫಿ ಮಸೀದಿ ಬಳಿ ಬಾಂಬ್​ ಸ್ಫೋಟ; ಐವರ ಸಾವು
ಸಾಂದರ್ಬಿಕ ಚಿತ್ರ
  • News18
  • Last Updated: May 8, 2019, 11:15 AM IST
  • Share this:
ನವದೆಹಲಿ (ಮೇ.8): ಪಾಕಿಸ್ತಾನದ ಲಾಹೋರ್​ನ ಸೂಫಿ ಮಸೀದಿ ಬಳಿ ನಡೆದ ಪ್ರಬಲ ಬಾಂಬ್​ ಸ್ಪೋಟದಲ್ಲಿ ಮೂವರು ಪೊಲೀಸರು ಸೇರಿದಂತೆ ಐವರು ಸಾವನ್ನಪ್ಪಿದ್ದು,  15 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಪವಿತ್ರ ರಂಜಾನ್​ ಮಾಸ ಆರಂಭವಾದ ಮರುದಿನವೇ ಈ ಕೃತ್ಯ ನಡೆದಿದ್ದು, ಪೊಲೀಸರ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಇದಾಗಿದೆ ಎಂದು  ವರದಿ ತಿಳಿಸಿದೆ.  ಈ ದಾಳಿಯಲ್ಲಿ ಯಾವ ಸ್ಪೋಟಕ ಬಳಕೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.

ಲಾಹೋರ್​ನ ಪ್ರಖ್ಯಾತ ದತ್ತಾ ದರ್ಬಾರ್​ ಸಮಾಧಿಯ ಹೊರಗಡೆ ಬಾಂಬ್​ ಸ್ಪೋಟಗೊಂಡಿದೆ ಎಂದು ಜಿಯೋ ನ್ಯೂಸ್​ ವರದಿ ಮಾಡಿದೆ. 11ನೇ ಶತಮಾನದ ಈ ಮಸೀದಿ ದಕ್ಷಿಣ ಎಷ್ಯಾದ ಅತಿದೊಡ್ಡ ಮಸೀದಿಯಾಗಿದ್ದು, ಸದಾ ಜನ ಜಂಗುಳಿಯಿರುವ ಸ್ಥಳವಾಗಿದೆ.

ಇದನ್ನು ಓದಿ: ಪಾಕ್ ಗಡಿಭಾಗದುದ್ದಕ್ಕೂ ‘ಭೀಷ್ಮ’ ಯುದ್ಧ ಟ್ಯಾಂಕರ್​ಗಳ ನಿಯೋಜನೆ?

ದತ್ತಾ ದರ್ಬಾರ್​ ಮಸೀದಿ ಹೊರಗಡೆ ಸಾಗುತ್ತಿದ್ದ ಪೊಲೀಸ್​ ವಾಹನವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಪಂಜಾಬ್​ ಪ್ರಾಂತ್ಯದಲ್ಲಿರುವ ಮಸೀದಿಯ ಎರಡನೇ ಗೇಟ್​ ಬಳಿ ಎರಡು ಪೊಲೀಸ್ ವಾಹನಗಳ ಹತ್ತಿರವೇ ಈ ದಾಳಿ ನಡೆದಿದೆ,

ದಾಳಿಯಲ್ಲಿ ಮೂವರು ಪೊಲೀಸ್​ ಅಧಿಕಾರಿಗಳು ಸಾವನ್ನಪ್ಪಿದ್ದು, ಸೆಕ್ಯೂರಿಟಿ ಗಾರ್ಡ್​ ಹಾಗೂ ಸಾಮಾನ್ಯ ಜನರೊಬ್ಬರು ಸಾವನ್ನಪ್ಪಿದ್ದಾರೆ. 24 ಜನ ಗಂಭೀರವಾಗಿ ಗಾಯಗೊಂಡಿದ್ದು, ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯನ್ನು ಪ್ರಧಾನಿ ಇಮ್ರಾನ್​ ಖಾನ್​ ಖಂಡಿಸಿದ್ದು, ಈ ಕುರಿತ ವರದಿಯನ್ನು ಕೇಳಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.2010ರಲ್ಲಿ ಈ ಮಸೀದಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ 40 ಜನ ಸಾವನ್ನಪ್ಪಿದ್ದರು. ಸ್ಥಳಕ್ಕೆ ರಕ್ಷಣಾ ತಂಡ ಹಾಗೂ ಪೊಲೀಸರು ಆಗಮಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

First published:May 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading