Afghanistan : ಅಫ್ಘಾನಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ: ಮೂವರು ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ

Afghanistan Blast: ಅಫ್ಘಾನಿಸ್ತಾನದ ನಂಗರ್​ಹಾರ್(Nunger har)​ ಪ್ರಾಂತ್ಯದಲ್ಲಿರುವ ಸ್ಪಿನ್​ ಘರ್ ಪ್ರದೇಶದಲ್ಲಿರುವ ಮಸೀದಿ(Mosque)ಯಲ್ಲಿ ನಿನ್ನೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ.

ಮಸೀದಿಯಲ್ಲಿ ಬಾಂಬ್​ ಸ್ಫೋಟ

ಮಸೀದಿಯಲ್ಲಿ ಬಾಂಬ್​ ಸ್ಫೋಟ

  • Share this:
Afghanistan Blast: ಭೂ ಲೋಕದ ನರಕದಂತಾಗಿರುವ ಅಫ್ಘಾನಿಸ್ತಾ(Afghanistan)ನದಲ್ಲಿ ತಾಲಿಬಾನ್(Taliban)​ ಕ್ರೌರ್ಯ ಮಿತಿಮೀರಿದೆ. ತಾವು ಮಾಡಿದ್ದೇ ರೂಲ್ಸ್​ಗಳನ್ನ ತಂದು, ಜನ ಸಾಮನ್ಯರಿಗೆ ಹಿಂಸಿಸುತ್ತಿದ್ದಾರೆ. ಅಲ್ಲಿನ ಜನ ಬದುಕಲು ಆಗದೇ, ಹೊರ ಹೋಗಲು ಸಾಧ್ಯಾವಾಗದೇ ಪ್ರತಿ ದಿನ ನರಕ ಅನುಭವಿಸುತ್ತಿದ್ದಾರೆ. ಮನೆಯಿಂದ ಹೊರಗಡೆ ಬರಲು ಬೆಚ್ಚಿ ಬೀಳುತ್ತಿದ್ದಾರೆ. ತಾಲಿಬಾನಿಗಳನ್ನು ಪ್ರಶ್ನಿಸಲು ಆಗದೇ ನರಕಯಾತನೆ ಅನುಭವಿಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಒಂದೊತ್ತಿನ ಊಟ(Food)ಕ್ಕೂ ಪರದಾಟ ನಡೆಸುವಂತಾಗಿದೆ. ಸರಿಯಾದ ಆಹಾರ ಸಿಗದೇ ಅಲ್ಲಿನ ಜನ ಕಂಗಾಲಾಗಿದ್ದಾರೆ. ಇದರ ಮಧ್ಯೆ ಪ್ರತಿದಿನ ಗುಂಡಿನ ದಾಳಿ(Firing), ಬಾಂಬ್​ ಸ್ಫೋಟ(Bomb Blast)ಗಳಂತು ಅಲ್ಲಿ ಸರ್ವೆ ಸಾಮನ್ಯವಾಗಿ ಹೋಗಿದೆ.  ಅಫ್ಘಾನಿಸ್ತಾನದ ನಂಗರ್​ಹಾರ್(Nunger har)​ ಪ್ರಾಂತ್ಯದಲ್ಲಿರುವ ಸ್ಪಿನ್​ ಘರ್ ಪ್ರದೇಶದಲ್ಲಿರುವ ಮಸೀದಿ(Mosque)ಯಲ್ಲಿ ನಿನ್ನೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭಾರೀ ಸ್ಫೋಟ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಸ್ಥಳೀಯ ಮುಲ್ಲಾ ಸೇರಿದಂತೆ ಕನಿಷ್ಠ 15 ಜನರು ಗಾಯಗೊಂಡಿದ್ದಾರೆ. ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಮಸೀದಿಯ ಒಳಭಾಗದಲ್ಲಿ ಸ್ಫೋಟಕಗಳು ಸ್ಫೋಟಿಸಿದ್ದರಿಂದ ಈ ಘಟನೆ ನಡೆದಿದೆ.

ಮೂವರ ಸಾವು, ಹಲವರಿಗೆ ತೀವ್ರ ಗಾಯ

ಆಗಸ್ಟ್​ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ರೀತಿಯ ದಾಳಿಗಳು ಹೆಚ್ಚಾಗುತ್ತಿವೆ. ನಿನ್ನೆ ನಡೆದ ಮಸೀದಿಯ ಸ್ಫೋಟದ ಬಗ್ಗೆ ತಾಲಿಬಾನ್​ ನಾಯಕರು ಕೂಡ ಖಚಿತಪಡಿಸಿದ್ದು, ಸ್ಪಿನ್ ಘರ್ ಜಿಲ್ಲೆಯ ಮಸೀದಿಯಲ್ಲಿ ನಮಾಜ್ ವೇಳೆ ನಡೆದ ಸ್ಫೋಟದಿಂದ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಇದುವರೆಗೂ ಮೂವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಎಫ್​ಪಿಗೆ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಏನು ಹೇಳಲು ಸಾಧ್ಯವಿಲ್ಲವೆಂದು ವೈದರು ತಿಳಿಸಿದ್ದಾರೆ.ಆಫ್ಘನ್​​ರಲ್ಲಿ ಹೆಚ್ಚಾಯ್ತು ಆತಂಕ

ನವೆಂಬರ್ 2ರಂದು ಅಫ್ಘಾನಿಸ್ತಾನದ ಕಾಬೂಲ್​ನ ಅತಿದೊಡ್ಡ ಮಿಲಿಟರಿ ಆಸ್ಪತ್ರೆಯಲ್ಲಿ ದಾಳಿ ನಡೆದಿತ್ತು. 25 ಕ್ಕೂ ಹೆಚ್ಚು ಜನರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅದರ ಬೆನ್ನಲ್ಲೇ ಅಫ್ಘಾನ್​ನಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಪ್ರಾರ್ಥನೆ ಮಾಡುತ್ತಿದ್ದ ಮೂವರ ಪ್ರಾಣಪಕ್ಷಿ ಹಾರಿಹೋಗಿದೆ. ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ. ಶುಕ್ರವಾರ ನಮಾಜ್​ ಮಾಡಲು ಅಧಿಕ ಸಂಖ್ಯೆಯಲ್ಲಿ ಜನ ಮಸೀದಿಗೆ ಬಂದಿದ್ದರು. ಸ್ಫೋಟವಾಗುತ್ತಿದ್ದಂತೆ ಅಲ್ಲಿದ್ದ ಜನರು ಕೂಡಲೇ ಹೊರಬಂದಿದ್ದಾರೆ. ಏನಾಗುತ್ತಿದೆ ಅನ್ನುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. ಗಾಯಾಳುಗಳನ್ನ ಕೂಡಲೇ ಆಸ್ಪತ್ರೆಗೆ ಸೇರಿಸಲಾಯ್ತು.

ಇದನ್ನು ಓದಿ :ಅಫ್ಘಾನಿಸ್ತಾನಕ್ಕೆ ಭೂ ಮಾರ್ಗದ ಮೂಲಕ ಗೋಧಿ ಟ್ರಕ್‍ಗಳನ್ನು ಕಳುಹಿಸಲು, ಪಾಕಿಸ್ತಾನದ ಅನುಮತಿಯ ನಿರೀಕ್ಷೆಯಲ್ಲಿ ಭಾರತ
 ಮಾನವ ಕಳ್ಳಸಾಗಣೆದಾರರ ನೆರವಿನಿಂದ ಗಡಿಯಿಂದ ಪರಾರಿ!
ಅಫ್ಘಾನಿಸ್ತಾನದಲ್ಲಿ ತಾಲಿಬಾನ್  ಆಡಳಿತಕ್ಕೆ ಬಂದ ನಂತರ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಜನರ ಜೀವನ, ಕೆಲಸದ ಶೈಲಿಗಳನ್ನೂ ತಾಲಿಬಾನ್​ ಬದಲಿಸಿದೆ. ಈ ಮಧ್ಯೆ ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವ ಅಲ್ಲಿನ ಜನರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ನೇರಾನೇರ ಹೋದರೆ ತಾಲಿಬಾನಿಗಳು ಕೊಂದು ಬಿಡುತ್ತಾರೆ. ಈಗಾಗಲೇ ದೇಶ ತೊರೆಯಲು ಯತ್ನಿಸಿದವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಹೀಗಾಗಿ ಅಲ್ಲಿನ ಜನ ಕಳ್ಳಸಾಗಣೆದಾರರ ಸಹಾಯದಿಂದ ದೇಶಬಿಡುತ್ತಿದ್ದಾರೆ. ಕಾರು, ಟ್ರಕ್​​ಗಳಲ್ಲಿ ತಮ್ಮ ಲಗೇಜ್​ಗಳನ್ನು ಸಾಗಿಸುತ್ತಿದ್ದಾರೆ.

ಇದನ್ನು ಓದಿ : 9 ವರ್ಷದ ಮಗಳನ್ನು 55 ವರ್ಷದವನಿಗೆ ಮಾರಿದ ತಂದೆ! ಅಪ್ಘಾನ್​ ಕುಟುಂಬಗಳ ಗೋಳು ಕೇಳಿದ್ರೆ ಕಣ್ಣೀರು ಬರುತ್ತೆ!

ಅಫ್ಘಾನಿಸ್ತಾನದ ಝರಂಜ್​ ಎಂಬ ದುರ್ಗಮ ಪ್ರದೇಶದ ಜನರು ಈ ಮಾರ್ಗದಲ್ಲಿಯೇ ಹೋಗುತ್ತಿದ್ದಾರೆ. ಈ ಪ್ರದೇಶ ಅಫ್ಘಾನಿಸ್ತಾನವನ್ನು ಪಾಕಿಸ್ತಾನ ಮತ್ತು ಇರಾನ್​​ನೊಟ್ಟಿಗೆ ಸೇರಿಸುವ ಗಡಿ ಪ್ರದೇಶದಲ್ಲಿದ್ದು, ಮಾನವ ಕಳ್ಳಸಾಗಣೆದಾರರು ಇವರಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಸಹಾಯದಿಂದ ಇಲ್ಲಿನ ಗಡಿಯಿಂದ ಪರಾರಿಯಾಗುತ್ತಿದ್ದಾರೆ. ಅತ್ತ ಯಾರೂ ದೇಶ ತೊರೆಯಬೇಡಿ ನಿಮಗೆ ಬೇಕಿರುವ ಸೌಲಭ್ಯಗಳನ್ನು ನಾವೇ ನೀಡುತ್ತೇವೆ ಎಂದು ತಾಲಿಬಾನಿಗಳು ಹೇಳುತ್ತಿದ್ದಾರೆ.

Published by:Vasudeva M
First published: