ಗುಹಾವಟಿ(ಜು.22): ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಬಾಗ್ಜಾನ್ನ ತೈಲ ಬಾವಿಯಲ್ಲಿ ಸ್ಪೋಟ ಸಂಭವಿಸಿದ್ದು, ಮೂವರು ವಿದೇಶ ತಜ್ಞರು ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ಮೂವರು ವಿದೇಶಿಗರನ್ನು ತಕ್ಷಣ ದಿಬ್ರುಗರ್ನ ಆಸ್ಥಾ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರನ್ನು ಸ್ಟೀವನ್ ರೆನಾಲ್ಸ್ಡ್, ಡೌಗ್ ಡಲ್ಲಾಸ್ ಮತ್ತು ಕ್ರಯಿಗ್ ನೀಲ್ ಡಂಕನ್ ಎಂದು ಗುರುತಿಸಲಾಗಿದೆ.
ಪರಿಷತ್ಗೆ ನಾಮನಿರ್ದೇಶನ; ಯೋಗೇಶ್ವರ್, ಮಾಳವಿಕಾಗೆ ಅವಕಾಶ ಸಾಧ್ಯತೆ; ವಿಶ್ವನಾಥ್ ಪರ ನಿಂತ ಬಿಎಸ್ವೈ
ಬಗ್ಜಾನ್ನ 5ನೇ ಸಂಖ್ಯೆಯ ಬಾವಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಗಾಯಗೊಂಡ ಮೂವರು ವಿದೇಶಿ ತಂತ್ರಜ್ಞರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಆಯಿಲ್ ಇಂಡಿಯಾ ಲಿಮಿಟೆಡ್ ತಿಳಿಸಿದೆ.
ಬಗ್ಜಾನ್ ತಿನ್ಸುಕಿಯಾ ತೈಲ ಬಾವಿಯು ಗುಹಾವಟಿ ನಗರದಿಂದ 500 ಕಿ.ಮೀ ದೂರದಲ್ಲಿದೆ. 6 ಮಂದಿ ವಿದೇಶಿ ತಂತ್ರಜ್ಞರು ತೈಲ ಬಾವಿಯೊಳಗೆ ಹೆಚ್ಚಾಗುತ್ತಿರುವ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸಲು ಮುಂದಾದಾಗ ಈ ಅವಘಡ ಸಂಭವಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ಜೂನ್ 9ರಿಂದ ಬಗ್ಜಾನ್ ತೈಲ ಬಾವಿಯಲ್ಲಿ ಉಲ್ಬಣಗೊಳ್ಳುತ್ತಿರುವ ಬೆಂಕಿಯನ್ನು ನಂದಿಸಲು ಕಾರ್ಯಾಚರಣೆ ನಡೆಸುತ್ತಿರುವಾಗ ಈ ಸ್ಪೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ