ಸಲ್ಲುಗೆ ಬಿಗ್​ ಶಾಕ್!: ಪ್ರತಿ ಬಾರಿ ವಿದೇಶಕ್ಕೆ ತೆರಳುವ ಮುನ್ನ ಕೋರ್ಟ್​ ಅನುಮತಿ ಪಡೆಯಲೇಬೇಕು!


Updated:August 5, 2018, 12:37 PM IST
ಸಲ್ಲುಗೆ ಬಿಗ್​ ಶಾಕ್!: ಪ್ರತಿ ಬಾರಿ ವಿದೇಶಕ್ಕೆ ತೆರಳುವ ಮುನ್ನ ಕೋರ್ಟ್​ ಅನುಮತಿ ಪಡೆಯಲೇಬೇಕು!
ಸಲ್ಮಾನ್ ಖಾನ್

Updated: August 5, 2018, 12:37 PM IST
ನ್ಯೂಸ್​ 18 ಕನ್ನಡ

ಜೋದ್​ಪುರ(ಆ.05): ಜೋಧ್​ಪುರ ನ್ಯಾಯಾಲಯದ ಆದೇಶದನ್ವಯ ಬಾಲಿವುಡ್​ ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ಪ್ರತಿ ಬಾರಿಯೂ ಭಾರತದಿಂದ ವಿದೇಶಕ್ಕೆ ಪ್ರಯಾಣ ಬೆಳೆಸಲು ಇನ್ಮುಂದೆ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ. ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸಲ್ಲುಗೆ ಈ ಆದೇಶ ನೀಡಿದೆ. ಈ ಮೂಲಕ ಸಲ್ಮಾನ್​ ಖಾನ್​ರವರ ಮುಂಬರುವ ಸಿನಿಮಾ ಶೂಟಿಂಗ್​ ಮೇಲೆ ಇದು ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ. ಸಲ್ಮಾನ್​ ಖಾನ್​ ಅತೊಇ ಶೀಘ್ರದಲ್ಲೇ ಅಲೀ ಅಬ್ಬಾಸ್​ ಜಫರ್​ ನಿರ್ದೇಶನದ ಸಿನಿಮಾ ಭಾರತ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಸದ್ಯ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ.


ಇದನ್ನು ಹೊರತುಪಡಿಸಿ ದಬಂಗ್​-3 ಹಾಗೂ ಕಿಕ್​-2 ಸಿನಿಮಾಗೆ ಸಂಬಂಧಿಸಿದಂತೆ ನಿರ್ಮಾಣದ ತಯಾರಿ ನಡೆಯುತ್ತಿದೆ. ಸಲ್ಮಾನ್​ ಖಾನ್​ರನ್ನು ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿದ್ದು, ಪ್ರಕರಂಣಕ್ಕೆ ಸಂಬಂಧಿಸಿದಂತೆ ವೀಗಾಗಲೇ 5 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. 19 ವರ್ಷಗಳ ಹಿಂದಿನ ಈ ಪ್ರಕರಣದಲ್ಲಿ ಸಲ್ಲು ಜೈಲಿಗೆ ಹೋಗಿದ್ದರು. ಹೀಗಿದ್ದರೂ ಕೇವಲ ಎರಡು ದಿನಗಳಲ್ಲೇ ಅವರಿಗೆ ಜಾಮೀನು ಮಂಜೂರಾಗಿತ್ತು. ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಲ್ಮಾನ್​ "ನಾನು ಶಾಶ್ವತವಾಗಿ ಜೈಲು ಸೇರುತ್ತೇನೆಂದು ನಿಮಗೆ ಅನಿಸಿತ್ತಾ?" ಎಂದು ಪ್ರಶ್ನಿಸಿದ್ದರು.
Loading...

ಸಲ್ಮಾನ್​ ಖಾನ್​ ಹೊರತುಪಡಿಸಿ ನಟ ಸೈಫ್​ ಅಲಿ ಖಾನ್​, ಟಬು, ಸೊನಾಲಿ ಬೇಂದ್ರೆ ಹಾಗೂ ನೀಲಂರವರನ್ನೂ ಈ ಪ್ರಕರಣದ ಆರೋಪಿಗಳೆಂದು ಪರಿಗಣಿಸಲಾಗಿತ್ತು. ಆದರೆ ಕೋರ್ಟ್​ ಇವರನ್ನು ದೋಷಮುಕ್ತಗೊಳಿಸಿತ್ತು.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ