HOME » NEWS » National-international » BLACK BOXES RECOVERED FROM CRASHED AIR INDIA EXPRESS PLANE IN KERALA AS DEATH TOLL RISES TO 19 RMD

ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ; ಇನ್ನಾದರೂ ತಿಳಿಯತ್ತಾ ದುರಂತದ ಅಸಲಿ ಕಾರಣ?

ಬ್ಲ್ಯಾಕ್ ಬಾಕ್ಸ್​ನಲ್ಲಿ ವಿಮಾನದ ವೇಗ, ವಿಮಾನದ ಸ್ಥಿತಿ-ಗತಿ, ಪೈಲಟ್​ಗಳ ಸಂಭಾಷಣೆ ಕೂಡ ಇರಲಿದೆ. ಹೀಗಾಗಿ, ಏರ್​ ಇಂಡಿಯಾ ವಿಮಾನ ದುರಂತಕ್ಕೆ ಒಳಗಾಗುವುದಕ್ಕೂ ಮೊದಲು ಏನಾಗಿತ್ತು ಎನ್ನುವುದು ಈ ಬ್ಲ್ಯಾಕ್​ ಬಾಕ್ಸ್​ನಲ್ಲಿ ರೆಕಾರ್ಡ್​ ಆಗಿರುತ್ತದೆ.

news18-kannada
Updated:August 8, 2020, 11:48 AM IST
ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ; ಇನ್ನಾದರೂ ತಿಳಿಯತ್ತಾ ದುರಂತದ ಅಸಲಿ ಕಾರಣ?
ದುರಂತಕ್ಕೆ ತುತ್ತಾದ ವಿಮಾನ
  • Share this:
ಕೋಯಿಕ್ಕೋಡ್ (ಆಗಸ್ಟ್​ 8)​: ಇಲ್ಲಿಯ ಕರಿಪುರ್ ಏರ್​ಪೋರ್ಟ್​ನಲ್ಲಿ ಶುಕ್ರವಾರ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನ ರನ್​ವೇಯಿಂದ ಜಾರಿಬಿದ್ದು ಭಾರೀ ದುರಂತ ಸಂಭವಿಸಿತ್ತು. ಮಳೆ ಅತಿಯಾಗಿ ಸುರಿಯುತ್ತಿದ್ದುರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆಯಾದರೂ ಇದಕ್ಕೆ ಅಸಲಿ ಕಾರಣ ಇನ್ನೂ ತಿಳಿದು ಬಂದಿಲ್ಲ. ಸದ್ಯ, ವಿಮಾನದ ಬ್ಲ್ಯಾಕ್​ ಬಾಕ್ಸ್​ ಪತ್ತೆ ಆಗಿದೆ. ಈ ಬ್ಲ್ಯಾಕ್​ ಬಾಕ್ಸ್​ನಲ್ಲಿ ದುರಂತದ ಹಿಂದಿನ ನಿಜವಾದ ರಹಸ್ಯ ಇದೆ ಎನ್ನಲಾಗುತ್ತಿದೆ. 

ಪ್ರತಿ ವಿಮಾನದಲ್ಲೂ ಬ್ಲ್ಯಾಕ್​ ಬಾಕ್ಸ್​ ಇರುತ್ತದೆ. ಈ ಬ್ಲ್ಯಾಕ್ ಬಾಕ್ಸ್​ನಲ್ಲಿ ವಿಮಾನದ ವೇಗ, ವಿಮಾನದ ಸ್ಥಿತಿ-ಗತಿ, ಪೈಲಟ್​ಗಳ ಸಂಭಾಷಣೆ ಕೂಡ ಇರಲಿದೆ. ಹೀಗಾಗಿ, ಏರ್​ ಇಂಡಿಯಾ ವಿಮಾನ ದುರಂತಕ್ಕೆ ಒಳಗಾಗುವುದಕ್ಕೂ ಮೊದಲು ಏನಾಗಿತ್ತು ಎನ್ನುವುದು ಈ ಬ್ಲ್ಯಾಕ್​ ಬಾಕ್ಸ್​ನಲ್ಲಿ ರೆಕಾರ್ಡ್​ ಆಗಿರುತ್ತದೆ.

ನಾಗರಿಕ ವಿಮಾನಯಾನ, ವಿಮಾನ ಅಪಘಾತ ತನಿಖಾ ವಿಭಾಗ, ಏರ್​ ಇಂಡಿಯಾ ಹಾಗೂ ಏರ್​ ಇಂಡಿಯಾ ಎಕ್ಸ್​ಪ್ರೆಸ್​ನ ಅಧಿಕಾರಿಗಳು ಈಗಾಗಲೇ ಕೋಯಿಕ್ಕೋಡ್​ ತಲುಪಿದ್ದಾರೆ ಎಂದು ಏರ್​ ಇಂಡಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಸಾವಿನ ಸಂಖ್ಯೆ ಹೆಚ್ಚಳ:

ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದು ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. X1344 ಬೋಯಿಂಗ್ 737 ವಿಮಾನ ದುಬೈನಿಂದ ಕೋಯಿಕ್ಕೋಡ್​ಗೆ ಹೊರಟಿತ್ತು. ಸಂಜೆ 7:41ಕ್ಕೆ ವಿಮಾನ ಲ್ಯಾಂಡ್​ ಆಗಿದ್ದು, ರನ್​ವೇನಲ್ಲಿ ಅಪಘಾತಕ್ಕೆ ಈಡಾಗಿದೆ. ಈ ವೇಳೆ ಇಬ್ಬರು ಪೈಲಟ್​ ಸೇರಿ 17 ಜನರು ಮೃತಪಟ್ಟಿದ್ದರು. ಈಗ ಸಾವಿನ ಸಂಖ್ಯೆ 19ಕ್ಕೆ ಏರಿಕೆ ಆಗಿದೆ.
Youtube Video

ಇಬ್ಬರಿಗೆ ಕೊರೋನಾ:ವಿಮಾನದಲ್ಲಿದ್ದ ಅನೇಕರಿಗೆ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮುಂದುವರಿದಿದೆ. ಈ ಮಧ್ಯೆ ಅನಾರೋಗ್ಯಕ್ಕೆ ತುತ್ತಾದ ಕೆಲವರನ್ನು ಪರೀಕ್ಷೆ ಮಾಡಲಾಗಿದ್ದು, ಇವರಲ್ಲಿ ಇಬ್ಬರಿಗೆ ಕೊರೋನಾ ವೈರಸ್​ ಇರುವುದ ಪತ್ತೆ ಆಗಿದೆ.
Published by: Rajesh Duggumane
First published: August 8, 2020, 11:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories