B.K Hariprasad Interview: ಪಠ್ಯದಲ್ಲಿ ಹೆಗ್ಡೆವಾರ್ ಭಾಷಣ ಸೇರಿಸಿ ಬಿಜೆಪಿ ಸರ್ಕಾರ ಮಕ್ಕಳಲ್ಲಿ ವಿಷ ಬೀಜ ಬಿತ್ತುತ್ತಿವೆ; ಬಿ.ಕೆ ಹರಿಪ್ರಸಾದ್

ಹೆಗ್ಡೇವಾರ್ ಕೋಮುವಾದವನ್ನು ಪ್ರತಿನಿಧಿಸುವ ಸಂಘಟನೆ ಮುಖ್ಯಸ್ಥರಾಗಿದ್ದರು. ಇದೇ ರೀತಿ ಸಮಾಜವಿರೋಧಿ ಸಂಘಟನೆಗಳಲ್ಲಿ ಕೆಲಸ ಮಾಡಿದವರು ಬಹಳಷ್ಟು ಜನ ಇದ್ದಾರೆ. ನಕ್ಸಲರು ಬಹಳಷ್ಟಿದ್ದಾರೆ. ಅವರನ್ನೇಲ್ಲಾ ಪಠ್ಯ ಪುಸ್ತಕದಲ್ಲಿ ಸೇರಿಸಲು ಸಾಧ್ಯವೇ? 

ಬಿ.ಕೆ ಹರಿಪ್ರಸಾದ್

ಬಿ.ಕೆ ಹರಿಪ್ರಸಾದ್

  • Share this:
ನವದೆಹಲಿ, ಮೇ 17: ಶಾಲಾ ಪಠ್ಯದಲ್ಲಿ ಆರ್ ಎಸ್ ಎಸ್ ನಾಯಕ ಹೆಗ್ಡೆವಾರ್ (RSS Leader Hegdewar) ಭಾಷಣವನ್ನು ಸೇರಿಸಿರುವ ರಾಜ್ಯ ಬಿಜೆಪಿ ಸರ್ಕಾರದ (BJP Government) ನಡೆಯನ್ನು ಕರ್ನಾಟಕದ ಕಾಂಗ್ರೆಸ್ ನಾಯಕರು (Congress Leaders) ತೀರ್ವವಾಗಿ ಖಂಡಿಸಿದ್ದಾರೆ. ಪಠ್ಯದಲ್ಲಿ ಹೆಗ್ಡೆವಾರ್ ಭಾಷಣ ಸೇರಿಸುವ ಮೂಲಕ‌ ಬಿಜೆಪಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿದೆ. ಈ ಮೂಲಕ ಬಿಜೆಪಿ ಸರ್ಕಾರ ಸಣ್ಣ ಮಕ್ಕಳಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ನಮ್ಮ ಪ್ರತಿನಿಧಿ‌ ಧರಣೀಶ್ ಬೂಕನಕೆರೆ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ (Opposition Leader BK Hariprasad) ಜೊತೆ ನಡೆಸಿರುವ ಸಂದರ್ಶನ ಇಲ್ಲಿದೆ.

ಸಣ್ಣ ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೃತ್ಯ:

ಪ್ರಶ್ನೆ: ಶಾಲಾ ಪಠ್ಯದಲ್ಲಿ ಆರ್ ಎಸ್ ಎಸ್ ನಾಯಕ ಹೆಗ್ಡೆವಾರ್ ಭಾಷಣವನ್ನು ಸೇರಿಸಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಉತ್ತರ: ರಾಜ್ಯದ ಬಿಜೆಪಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆ. ಬಿಜೆಪಿ ಸರ್ಕಾರ ಸಣ್ಣ ಮಕ್ಕಳಿಗೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಹೆಗ್ಡೇವಾರ್ ಕೋಮುವಾದವನ್ನು ಪ್ರತಿನಿಧಿಸುವ ಸಂಘಟನೆ ಮುಖ್ಯಸ್ಥರಾಗಿದ್ದರು. ಇದೇ ರೀತಿ ಸಮಾಜವಿರೋಧಿ ಸಂಘಟನೆಗಳಲ್ಲಿ ಕೆಲಸ ಮಾಡಿದವರು ಬಹಳಷ್ಟು ಜನ ಇದ್ದಾರೆ. ನಕ್ಸಲರು ಬಹಳಷ್ಟಿದ್ದಾರೆ. ಅವರನ್ನೇಲ್ಲಾ ಪಠ್ಯ ಪುಸ್ತಕದಲ್ಲಿ ಸೇರಿಸಲು ಸಾಧ್ಯವೇ? ಈವರೆಗೆ ಸ್ವತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡವರನ್ನು ಮಾತ್ರ ಪಠ್ಯದಲ್ಲಿ ಸೇರಿಸಲಾಗುತ್ತಿತ್ತು.

ಇದನ್ನೂ ಓದಿ: BJP Tweet: 'ಕೈ' ನಾಯಕರ ಕಾಲೆಳೆದ 'ಕಮಲ' ಪಾಳೆಯ! ಡಿಕೆಶಿ, ಸಿದ್ದು ವಿರುದ್ಧ ಬಿಜೆಪಿ ಸರಣಿ ಟ್ವೀಟ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣವಾಗಿ ಆರ್ ಎಸ್ ಎಸ್ ಅಜೆಂಡಾವನ್ನು ಅನುಷ್ಠಾನಗೊಳಿಸಲಾಗುತ್ತಿದೆ.‌ ಅದರಲ್ಲೂ ಬಸವಣ್ಣ, ಕುವೆಂಪು, ಕನಕದಾಸರ ನಾಡಲ್ಲಿ ಹೆಗ್ಡೇವಾರ್ ಭಾಷಣವನ್ನು ಶಾಲಾ ಪಠ್ಯದಲ್ಲಿ ಸೇರಿಸಿದ್ದಾರೆ. ಸಣ್ಣ ಮಕ್ಕಳಲ್ಲಿ ದ್ವೇಷದ ಭಾವನೆ ಬಿತ್ತಲೆಂದೇ ಈ ಕೃತ್ಯಮಾಡಲಾಗಿದೆ. ಹೆಗ್ಡೇವಾರ್ ಭಾಷಣವನ್ನು ಪಠ್ಯದಲ್ಲಿ ಸೇರಿಸಿರುವುದು ಸರಿಯಲ್ಲ. ತಕ್ಷಣವೇ ಪಠ್ಯದಿಂದ ಹೆಗ್ಡೇವಾರ್ ಭಾಷಣವನ್ನು ತೆಗೆಯಬೇಕು.

ಬಸವಣ್ಣ, ನಾರಾಯಣ ಗುರು ಪಠ್ಯವನ್ನೂ ತೆಗೆದಿದ್ದಾರೆ:

ಪ್ರಶ್ನೆ: ಹೆಗ್ಡೇವಾರ್ ಭಾಷಣವನ್ನು ಸೇರಿಸಿದ್ದಾರೆ ಮಾತ್ರವಲ್ಲ, ಸ್ವತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಬಗ್ಗೆ ಇದ್ದ ಪಾಠವನ್ನು ಕೈಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಉತ್ತರ: ಸ್ವತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಪಾಠವನ್ನು ಕೈಬಿಟ್ಟಿರುವುದು ಮಾತ್ರವಲ್ಲ, ನಮ್ಮ ನಾಡಿನ ಬಸವಣ್ಣ, ನಾರಾಯಣಗುರು ಕುರಿತಾದ ಪಠ್ಯಗಳನ್ನೂ ತೆಗೆದು ಹಾಕಿದ್ದಾರೆ. ಇವರೆಲ್ಲರಿಗೂ ಮೀರಿದ ಕೊಡುಗೆಯನ್ನು ಏನಾದರೂ ಹೆಗ್ಡೇವಾರ್ ಕೊಟ್ಟಿದ್ದಾರಾ? ಹೆಗ್ಡೇವಾರ್ ಸಮಾಜದಲ್ಲಿ ಕೋಮುವಾದ ಹುಟ್ಟುಹಾಕಿದವರು.

ಇದನ್ನೂ ಓದಿ: Evening Digest: ಮತ್ತೆ ಸೆಂಚೂರಿ ಬಾರಿಸಲಿದೆ ಟೊಮೆಟೊ ರೇಟ್; ಉತ್ತರ ಪ್ರದೇಶದಲ್ಲಿ ಹೆಚ್ಚಿದ ಡೆಂಗ್ಯೂ ಕೇಸ್​​: ಇಂದಿನ ಪ್ರಮುಖ ಸುದ್ದಿಗಳು

ಬಿ.ಸಿ. ನಾಗೇಶ್ ಸಚಿವ ಅಲ್ಲ, ಆರ್ ಎಸ್ ಎಸ್ ಪ್ರಚಾರಕ:

ಪ್ರಶ್ನೆ: ಸರ್ಕಾರದ ನಡೆಯನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸಮರ್ಥಿಸಿಕೊಳ್ಳುತ್ತಿದ್ದಾರಲ್ಲಾ?

ಉತ್ತರ: ಶಿಕ್ಷಣ ಸಚಿವ ನಾಗೇಶ್ ಆರ್ ಎಸ್ ಎಸ್  ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಾವ ಸಂದರ್ಭದಲ್ಲೂ ಶಿಕ್ಷಣ ಸಚಿವರಾಗಿ ಕೆಲಸ ಮಾಡಿಲ್ಲ. ನಾಗಪುರ ಯೂನಿವರ್ಸಿಟಿಯ ಗುಪ್ತಾ ಅಜೆಂಡಾ ಜಾರಿಗೊಳಿಸುತ್ತಿದ್ದಾರೆ.

ಕೋಮುದ್ವೇಷ ಬಿತ್ತುತ್ತಿರುವ ಬಿಜೆಪಿ ಬಗ್ಗೆ ವಿರೋಧ:

ಪ್ರಶ್ನೆ: ರಾಜ್ಯದಲ್ಲಿ ಕೋಮುಸೌಹಾರ್ಧ ಹದಗೆಡುತ್ತಿದೆ. ಸರ್ಕಾರವೇ ಕೋಮ ಸಮಾರಸ್ಯವನ್ನು ಹಾಳು ಮಾಡುತ್ತಿದೆ. ಇದಕ್ಕೆ ನಿಮ್ಮ ಪಕ್ಷ ಹೋರಾಟ ಏನು?

ಉತ್ತರ: ಕೋಮುಸೌಹಾರ್ಧವನ್ನು ಕದಡಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷರು ಹೋರಾಟ ರೂಪಿಸಲಿದ್ದಾರೆ.‌ ನಾವು ವಿಧಾನ ಪರಿಷತ್ತಿನಲ್ಲಿ ಹೋರಾಟ ಮಾಡುತ್ತೇವೆ. ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧವೂ ಬಹಳಷ್ಟು ಚರ್ಚೆ ಮಾಡಿದ್ದೇವೆ. ಕೋಮುದ್ವೇಷ ಬಿತ್ತುತ್ತಿರುವ ಬಿಜೆಪಿ ಸರ್ಕಾರಕ್ಕೆ ನಮ್ಮ ವಿರೋಧವಿದೆ.
Published by:shrikrishna bhat
First published: